ಇಂದು ದಶಕದ ಕೊನೆಯ ಸೂರ್ಯಗ್ರಹಣ, ಈ ರಾಶಿಯವರ ಮೇಲೆ ಇಂದಿನಿಂದ ಇದು ಪರಿಣಾಮಕಾರಿ

ಇಂದು ಸೂರ್ಯಗ್ರಹಣ! ಹಿಂದೂ ಪಂಚಾಂಗದ ಪ್ರಕಾರ ಇದೆ ಡಿಸೆಂಬರ್ 14 ರಂದು ಅಂದರೆ ಇಂದು, ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಕಳೆದ ನವೆಂಬರ್ 30ರಂದು ವೃಷಭ ರಾಶಿ ಮತ್ತು ರೋಹಿಣಿ ನಕ್ಷತ್ರದ ಮೇಲೆ ಚಂದ್ರಗ್ರಹಣ ಪ್ರಭಾವ ಬೀರಿತ್ತು. ಇದಾದ 15 ದಿನಗಳ ನಂತರ ಮತ್ತೆ ಮತ್ತೊಂದು ಗ್ರಹಣ ವಾಗುತ್ತಿರುವುದರಿಂದ ಈ ಸೂರ್ಯಗ್ರಹಣ ಭಾರಿ ಮಹತ್ವ ಪಡೆದುಕೊಂಡಿದೆ. ಈ ಸೂರ್ಯಗ್ರಹಣವು ವಿವಿಧ ರಾಶಿಗಳ ಮೇಲೆ ಶುಭಫಲ ಮತ್ತು ಅಶುಭ ಫಲ ದೊರೆಯುತ್ತದೆ. ನಮ್ಮ ಹಿಂದೂ ಸಂಪ್ರದಾಯದ ಜ್ಯೋತಿಷ್ಯ ಮತ್ತು ಪಂಚಾಂಗದ ಪ್ರಕಾರ ವರ್ಷದ ಕೊನೆಯ ಸೂರ್ಯಗ್ರಹಣವು ಈ ಭಾರಿ ವೃಶ್ಚಿಕ ರಾಶಿ ಮತ್ತು ಜ್ಯೇಷ್ಠ ನಕ್ಷತ್ರದಲ್ಲಿ ಸಂಭವಿಸಲಿದೆ.

ಈ ಸೂರ್ಯಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಡಿಸೆಂಬರ್ 14ರಂದು ಅಂದರೆ ಇಂದು ಸಂಜೆ7 ಗಂಟೆ 3 ನಿಮಿಷಕ್ಕೆ ಆರಂಭಗೊಂಡು ಡಿಸೆಂಬರ್ 15 ರಂದು ಅಂದರೆ ಮಧ್ಯರಾತ್ರಿ 12.23 ನಿಮಿಷಕ್ಕೆ ಸೂರ್ಯ ಗ್ರಹಣವು ಮುಕ್ತಾಯವಾಗಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಸೂರ್ಯಗ್ರಹಣವು ತುಂಬಾ ಶಕ್ತಿಶಾಲಿ ಗ್ರಹಣವಾಗಿದ್ದು ಮನುಷ್ಯರ ಮೇಲೆ ಒಳಿತು ಮತ್ತು ಕೆಡುಕುಗಳ ಪರಿಣಾಮ ಬೀರಲಿದೆ. ಈ ಸೂರ್ಯ ಗ್ರಹಣದವು ಶುಭಫಲ ಬೀರುವ ರಾಶಿಗಳು ಈ ಕೆಳಗಿನಂತಿವೆ.

ಮೊದಲನೆಯದಾಗಿ ಧನಸ್ಸು ರಾಶಿ, ಧನಸ್ಸು ರಾಶಿಯ ವ್ಯಕ್ತಿಗಳಿಗೆ ಉತ್ತಮವಾದ ದಿನಗಳಾಗಿವೆ.ಇವರು ಧೈರ್ಯಶಾಲಿ ಗಳಾಗಿರುತ್ತಾರೆ. ಉದ್ಯೋಗದಲ್ಲಿ ಉನ್ನತ ಸ್ಥಾನ ತಲುಪುತ್ತಾರೆ. ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುವ ಸಮಯ ಇದಾಗಿದೆ. ಸಮಾಜದಲ್ಲಿ ಸ್ಥಾನ ಮಾನ ಮನ್ನಣೆ ಗೌರವ ಲಭಿಸಲಿದೆ. ತುಂಬಾ ದಿನಗಳಿಂದ ತಟಸ್ಥವಾಗಿದ್ಧ ನಿಮ್ಮ ಕೆಲಸ ಕಾರ್ಯಗಳು ಮುಂದುವರಿಯುವಂತದ್ದು. ನಿಮ್ಮ ಆದಾಯ ದ್ವಿಗುಣಗೊಳ್ಳಲಿದೆ.ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರ ವಹಿಸಿ ಮತ್ತು ನಿಮ್ಮ ಕೋಪವನ್ನು ನಿಯಂತ್ರಣ ಮಾಡಿಕೊಳ್ಳುವುದು ಒಳಿತು ಎಂದು ತಿಳಿಯಬೇಕಾಗಿದೆ.

ತುಲಾ ರಾಶಿಯವರಿಗೆ ಈ ಸೂರ್ಯಗ್ರಹಣವು ಒಂದಷ್ಟು ಶುಭಫಲಗಳನ್ನು ನೀಡುವಂತದ್ದು, ಸಂಸಾರದಲ್ಲಿದ್ದ ಕಲಹ, ಸಮಸ್ಯೆಗಳು ನಿವಾರಣೆಯಾಗುತ್ತವೆ. ತುಲಾ ರಾಶಿಯವರಿಗೆ ವಾಹನ, ಜಮೀನು ಖರೀದಿ ಮಾಡುವ ಯೋಗವಿದೆ. ಅನಾರೋಗ್ಯದಲ್ಲಿ ನರಳುತ್ತಿರುವವರಿಗೆ ಚೇತರಿಕೆ ಕಂಡು ಬರುತ್ತದೆ. ನೀವು ಕೆಲಸದ ನಿಮಿತ್ತ ವಿದೇಶಿ ಪ್ರಯಾಣ ಹೋಗುವ ಸಾಧ್ಯತೆಯಿದೆ. ಈ ಪ್ರಯಾಣವು ಧನಲಾಭ ತಂದು ಕೊಡುತ್ತದೆ. ಜೊತೆಗೆ ತುಲಾ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿಬರಲಿದ್ದು ಮುಂದಿನ ವರ್ಷದ ಆರಂಭದಲ್ಲಿ ಮದುವೆ ಯೋಗವಿದೆ.

ವೃಷಭ ರಾಶಿಯವರಿಗೆ ಈ ಸುರ್ಯಗ್ರಹಣದ ಶುಭಕರ ವಿಷಯಗಳು ಅಂದರೆ ಉದ್ಯೋಗದಲ್ಲಿ ಬಡ್ತಿ ಪಡೆಯುವಂತದ್ಧು, ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ದಿ ಕಾಣಬಹುದು. ಆದರೆ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡಬೇಡಿ. ಮನೆಯಲ್ಲಿ ಮುಂದಿನ ವರ್ಷ ಶುಭ ಕಾರ್ಯ ಜರುಗಲಿದ್ದು ನಿಮ್ಮ ಮೇಲಿನ ಜವಬ್ದಾರಿ ಹೆಚ್ಚಾಗಲಿದೆ.

ಕುಂಭ ರಾಶಿಯವರಿಗೆ ಈ ಸೂರ್ಯಗ್ರಹಣದಿಂದಾಗಿ ಕೆಲಸದ ನಿಮಿತ್ತ ವಿದೇಶಿ ಪ್ರಯಾಣದ ಅವಕಾಶ ದೊರೆಯಲಿದೆ. ನಿರುದ್ಯೋಗಿಯರಿಗೆ ಉದ್ಯೋಗ ದೊರೆಯುವಂತದ್ದು, ಅದೃಷ್ಟದ ದಿನಗಳು ಕುಂಭ ರಾಶಿಯವರಿಗೆ ಆರಂಭವಾಗುತ್ತದೆ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದುವಂತದ್ದು. ಆಸ್ತಿ ಖರೀದಿಗೆ ತಂದೆಯಿಂದ ನಿಮಗೆ ಧನ ಸಹಾಯವಾಗುವುದು. ಆರೋಗ್ಯದಲ್ಲಿ ಕಾಳಜಿ ವಹಿಸುವುದು ಸೂಕ್ತ, ಮನೆಯ ಹಿರಿಯರ ಆರೋಗ್ಯದಲ್ಲಿ ಹೆಚ್ಚು ಗಮನ ವಹಿಸಬೇಕು.

ಮಕರ ರಾಶಿ, ಮಕರ ರಾಶಿಯವರಿಗೆ ನೀವು ಹಿಂದೆ ಉದ್ಯೋಗದಲ್ಲಿ ತೆಗೆದುಕೊಂಡಿದ್ದ ನಿರ್ಧಾರಗಳು ಈ ದಿನಗಳಲ್ಲಿ ಶುಭ ಫಲಗಳು ದೊರೆಯುತ್ತವೆ. ಇನ್ನು ವ್ಯಾಪಾರ ವ್ಯವಹಾರಗಳಲ್ಲಿ ಕೊಂಚ ಎಚ್ಚರ ವಹಿಸಬೇಕು. ನಿಮ್ಮ ವ್ಯಾಪಾರಕ್ಕೆ ಹಣದ ಒಳಹರಿವು ಹೆಚ್ಚಾಗುವಂತಾಗಿ ಆರ್ಥಿಕವಾಗಿ ಶಕ್ತಿವಂತರಾಗುತ್ತೀರಿ. ಶೇರು ಮಾರುಕಟ್ಟೆಗಳಲ್ಲಿ ಲಾಭ ದೊರೆತು ಶ್ರೀಮಂತರಾಗುವ ಯೋಗವಿದೆ. ಸಾಲ ನೀಡಿ ಸಂಕಷ್ಟಕ್ಕೆ ಸಿಲುಕಬೇಡಿ, ಸಾಲವನ್ನು ಸಹ ಪಡೆಯಬೇಡಿ. ಆರೋಗ್ಯದಲ್ಲಿ ಎಚ್ಚರ ವಹಿಸಿದರೆ ಉತ್ತಮ ವಾಗಿರುತ್ತದೆ. ಕೆಲವು ರಾಶಿಗಳ ಮೇಲೆ ಅಶುಭ ಫಲಗಳ ನಿವಾರಣೆಗೆ ನೀವು ಗ್ರಹಣದ ನಂತರ ಮರುದಿನ ಶಿವನ ದರ್ಶನ ಪಡೆಯರಿ. ಸಾಧ್ಯವಾದರೆ ಬಡವರಿಗೆ ಯಾವುದಾದರೂ ರೂಪದಲ್ಲಿ ಸಹಾಯ ಮಾಡಿದರೆ ಒಳಿತಾಗುವುದು.

%d bloggers like this: