ಇನ್ಮುಂದೆ ನನ್ನ ಲೈಫಿನಲ್ಲಿ ಯಾವತ್ತೂ ಯಾರಿಗೂ ಒಂದು ಹನಿ‌ ನೀರು ಕೂಡ ಕೊಡ್ಸಲ್ಲ, ಪ್ರಥಮ್ ಅಳಲು

ಕನ್ನಡದ ಮೋಸ್ಟ್ ಫೇಮಸ್ ರಿಯಾಲಿಟಿ ಶೋ ಎಂದರೆ ಅದು ಕಿಚ್ಚ ಸುದೀಪ್ ಅವರ ನಡೆಸಿಕೊಡುವ ಬಿಗ್ ಬಾಸ್, ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಕೆಲವರು ಸ್ಪರ್ಧೆ ಮುಗಿದಮೇಲೆ ಕನ್ನಡಿಗರ ಮನೆಮಾತಾದ ಉದಾಹರಣೆಗಳು ಬಹಳ. ಅದರಲ್ಲೂ ಬಿಗ್ ಬಾಸಿನ ನಾಲ್ಕನೇ ಆವೃತ್ತಿಯಲ್ಲಿ ವಿಜೇತರಾಗಿ ಹೊರಹೊಮ್ಮಿದ ಒಳ್ಳೆಯ ಹುಡುಗ ಎಂದೇ ಖ್ಯಾತಿಯಾದ ನಟ ಪ್ರಥಮ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಹೌದು ನಾಲ್ಕನೇ ಬಿಗ್ ಬಾಸ್ ಆವೃತ್ತಿಯಲ್ಲಿ ತಮ್ಮ ನೇರನುಡಿ ಅಚ್ಚ ಕನ್ನಡ ಬಾಷೆಯ ಪ್ರಯೋಗಗಳಿಂದ ಎಲ್ಲರ ಮನಗೆದ್ದ ಕೊನೆಗೆ ವಿಜಯಶಾಲಿ ಕೂಡ ಆದರು.

ಅದಾದ ನಂತರ ಪ್ರಥಮ ಅವರಿಗೆ ಬೇರೆ ಬೇರೆ ಅವಕಾಶಗಳು ಒದಗಿ ಬಂದವು, ಜೊತೆಗೆ ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗುವ ಸೌಭಾಗ್ಯ ಕೂಡ ಅವರಿಗೆ ಬಂತು, ಆದರೆ ಕಳೆದ ಒಂದು ವಾರದಲ್ಲಿ ಪ್ರಥಮ ಅವರಿಗೆ ತುಂಬಲಾರದ ನೋವು ಆಘಾತ ಗಳಾಗಿವೆ. ಹೌದು ಒಂದೇ ವಾರದಲ್ಲಿ ಪ್ರಥಮ್ ಅವರ ಮನೆಯಲ್ಲಿ 2 ಸಾವುಗಳು ಸಂಭವಿಸಿವೆ. ಪ್ರಥಮ್ ಅವರ ಅಜ್ಜಿಗೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಆದರೆ ಅಲ್ಲಿನ ವೈದ್ಯ ಸಿಬ್ಬಂದಿ ಅವರ ದುಡ್ಡನ್ನು ಕಿತ್ತುಕೊಂಡು ಯಾವುದೇ ಬೆಡ್ ವೆಂಟಿಲೇಟರ್ ಸೌಲಭ್ಯ ನೀಡದೆ ಮಧ್ಯರಾತ್ರಿಯೇ ಹೊರಹಾಕಿದ್ದಾರೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಕಾರಣ ಪ್ರಥಮ್ ಅವರ ಅಜ್ಜಿ ಮರಣವನ್ನಪ್ಪಿದ್ದಾರೆ. ಇದೇ ಕಾರಣಕ್ಕೆ ಈಗ ಪ್ರಥಮ್ ಕೆಂಡಾಮಂಡಲ ಆಗಿದ್ದಾರೆ, ತಮ್ಮ ಅಜ್ಜಿಯ ಸಾವಿಗೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಹರಿಹಾಯ್ದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ ಪ್ರಥಮ್ ನಮ್ಮ ಅಜ್ಜಿಯ ಸಾವಿಗೆ ಕಾರಣರಾದ ನಿಮ್ಮನ್ನು ಜೀವ ರಕ್ಷಕರು ಎಂದು ಕರೆದಿದ್ದು ಯಾರು, ನಾಚಿಕೆಯಾಗಬೇಕು ನಿಮಗೆ, ದುಡ್ಡನ್ನು ಕಿತ್ತುಕೊಂಡು ಸಹಾಯವನ್ನು ಮಾಡದೆ ನಮ್ಮ ಅಜ್ಜಿಯನ್ನು ಕೊಂ-ದೇಬಿಟ್ಟರು. ಇನ್ನು ಮುಂದೆ ನನ್ನ ಜೀವನದಲ್ಲಿ ಯಾರಿಗೂ ಒಂದು ಹನಿ ನೀರು ಸಹ ಕೊಡಲ್ಲ, ಸರಕಾರಕ್ಕೆ ಸ್ವಲ್ಪ ಮಾನವೀಯತೆ ಇದ್ದರೆ ಆಸ್ಪತ್ರೆಯಿಂದ ಶವವನ್ನಾದರು ಕೊಡಿಸಲಿ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಕೋರೋಣ ಹೆಮ್ಮಾರಿ ಅಟ್ಟಹಾಸ ಸಮಯದಲ್ಲಿ ಪ್ರಥಮ್ ಜನ ಸಾಮಾನ್ಯರಿಗೆ ಸಹಾಯ ಹ್ಯಾಸ್ಟ್ ಚಾಚಿದ್ದನ್ನು ನಾವಿಲ್ಲಿ ನೆನೆಯಬುದಾಗಿದೆ, ಸಹಾಯದ ಅನಿವಾರ್ಯತೆ ಇರುವ ಎಷ್ಟೋ ಹಸಿದವರಿಗೆ ಬಡವರಿಗೆ ಉಚಿತ ಕಿಟ್ ವಿತರಿಸುವ ಮೂಲಕ ಸಮಾಜ ಸೇವೆ ಮಾಡಿದ್ದರು ಆದರೆ ಇಂದು ಅವರ ಸ್ವಂತ ಅಜ್ಜಿಯವರಿಗೆ ಈ ಸ್ಥಿತಿ ಬಂದಿರುವುದು ನಿಜಕ್ಕೂ ವಿಷಾದನೀಯ ಸಂಗತಿ ಆಗಿದೆ.

%d bloggers like this: