ಇನ್ನೂ3 ಚಿತ್ರಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಬಹುದು

ಸ್ಯಾಂಡಲ್ ವುಡ್ ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿ ಮ್ಯಾನ್ ಚಿತ್ರದಲ್ಲಿ ದಿ.ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ‌. ಅಷ್ಟೇ ಅಲ್ಲದೆ ಈ ಸಿನಿಮಾದ ಹಾಡೊಂದರಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ನಟ, ನಿರ್ದೇಶಕ, ನೃತ್ಯ ಸಂಯೋಜಕ ಪ್ರಭುದೇವ ಅವರೊಟ್ಟಿಗೆ ಅಪ್ಪು ಸಖತ್ ಸ್ಟೆಪ್ ಹಾಕಿದ್ದಾರೆ. ಇದೀಗ ಈ ವಿಚಾರ ಸುದ್ದಿ ಆಗಲು ಕಾರಣ ನಟ ಡಾರ್ಲಿಂಗ್ ಕೃಷ್ಣ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಲಕ್ಕಿ ಮ್ಯಾನ್ ಚಿತ್ರದ ಅಪ್ಪು ಇರುವ ದೃಶ್ಯ ಸನ್ನಿವೇಶ. ಹೌದು ಪ್ರಭುದೇವ ಅವರ ಸೋದರ ನಾಗೇಂದ್ರ ಪ್ರಸಾದ್ ಆಕ್ಷನ್ ಕಟ್ ಹೇಳಿರುವ ಈ ಲಕ್ಕಿ ಮ್ಯಾನ್ ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಗಿದಿದೆ.

ಇದೀಗ ಈ ಚಿತ್ರತಂಡ ಡಬ್ಬಿಂಗ್ ಕಾರ್ಯದಲ್ಲಿ ತೊಡಗಿಕೊಂಡಿದೆ. ಅಂತೆಯೇ ನಾಯಕ ನಟ ಕೃಷ್ಣ ತಮ್ಮ ಭಾಗದ ಡಬ್ಬಿಂಗ್ ಮಾಡುತ್ತಿದ್ದಾರೆ. ಇದೇ ಸಂಧರ್ಭದಲ್ಲಿ ತಮ್ಮ ಭಾಗದ ಸೀನ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರು ಕೂಡ ಬಂದಾಗುವ ಸನ್ನಿವೇಶ ಇದೆ. ಈ ದೃಶ್ಯ ಸನ್ನಿವೇಶದಲ್ಲಿ ಕೃಷ್ಣ ಅವರೊಟ್ಟಿಗೆ ಪುನೀತ್ ರಾಜ್ ಕುಮಾರ್ ಮತ್ತು ಸಾಧುಕೋಕಿಲ ಅವರಿದ್ದಾರೆ. ಈ ದೃಶ್ಯದಲ್ಲಿ ತಮ್ಮ ಪಾತ್ರಕ್ಕೆ ಕಂಠದಾನ ಮಾಡುವಾಗ ಕೃಷ್ಣ ಅಪ್ಪು ಅವರನ್ನ ನೆನೆದು ಭಾವುಕರಾಗಿದ್ದಾರೆ. ಜೊತೆಗೆ ಈ ದೃಶ್ಯ ಸನ್ನಿವೇಶದ ಫೋಟೋ ತೆಗೆದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿ ಈ ದೃಶ್ಯಕ್ಕೆ ಡಬ್ಬಿಂಗ್ ಮಾಡುವುದು ನನಗೆ ಅತ್ಯಂತ ಕಷ್ಟಕರವಾಗಿತ್ತು.

ಅಪ್ಪು ಸರ್ ಜೊತೆಗಿನ ಈ ಚಿತ್ರದ ಚಿತ್ರೀಕರಣ ತುಂಬಾ ವಿಶೇಷವಾಗಿತ್ತು. ಮತ್ತು ಇದು ಎಂದೆಂದಿಗೂ ವಿಶೇಷವಾಗಿಯೇ ಉಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು. ಈ ಫೋಟೋ ನೋಡಿ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಭಾವುಕರಾಗಿದ್ದಾರೆ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದು, ನಟಿ ರೋಶಿನಿ ಪ್ರಕಾಶ್ ಎರಡನೇ ನಾಯಕಿ ನಟಿಯಾಗಿ ನಟಿಸಿದ್ದಾರೆ. ಇನ್ನು ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಮಾಳವಿಕಾ ಅವಿನಾಶ್, ಸುಧಾ ಬೆಳವಾಡಿ, ಸುಂದರ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಲಕ್ಕಿ ಮ್ಯಾನ್ ಸಿನಿಮಾ ಡಿಸೆಂಬರ್ ಅಂತ್ಯ ಅಥವಾ ಜನವರಿ ತಿಂಗಳಲ್ಲಿ ತೆರೆ ಕಾಣಲಿದೆ ಎಂದು ತಿಳಿದು ಬಂದಿದೆ.

%d bloggers like this: