ಐಪಿಎಲ್ ನಲ್ಲಿ ಧೋನಿಯೇ ನಂಬರ್ ಒನ್! ಹೌದು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸತತವಾಗಿ ಜಯಭೇರಿ ಗಳಿಸುತ್ತಿರುವುದು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವಾದರು ಕೂಡ ಧೋನಿಯನ್ನು ಹಿಮ್ಮೆಟ್ಟಿಸಲು ಯಾರಿಂದಲೂ ಸಾಧ್ಯವಾಗಿಲ್ಲ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಎಂ.ಎಸ್ ಧೋನಿ ಸಂಭಾವನೆಯ ವಿಚಾರದಲ್ಲಿ ಎಲ್ಲ ಆಟಗಾರರಿಗಿಂತ ಅತಿ ಹೆಚ್ಚು ಸಂಭಾವನೆ ಪಡೆದಿರುವ ಏಕೈಕ ಆಟಗಾರರಾಗಿದ್ದಾರೆ. ಅಷ್ಟಕ್ಕೂ ಕೂಲ್ ಕ್ಯಾಪ್ಟನ್ ಧೋನಿ ಪಡೆಯುವ ವಾರ್ಷಿಕ ಸಂಭಾವನೆ ಎಷ್ಟು 150 ಕೋಟಿ ಎನ್ನುತ್ತಿವೆ ವರದಿಗಳು. ಹೌದು ಐಪಿಎಲ್ ನಲ್ಲಿ ಬರೋಬ್ಬರಿ 150 ಕೋಟಿ ವರಮಾನ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್ 2021ರ ಸರಣಿಯಲ್ಲಿಯೂ ಸಹ ಧೋನಿ ಆಟವಾಡಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡಧೋನಿಯವರಿಗೆ 15 ಕೋಟಿ ನೀಡಿ ತಮ್ಮ ತಂಡದಲ್ಲಿ ಉಳಿಸಿಕೊಂಡಿದ್ದಾರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎಂಟು ಬಾರಿ ಐಪಿಎಲ್ ಫೈನಲ್ ಹಂತಕ್ಕೆ ಹೋಗಿದ್ದು ಮೂರು ಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇನ್ನು ಕಳೆದ ವರ್ಷ 2020 ಹನ್ನೊಂದನೇಯ ಐಪಿಎಲ್ ಆವೃತ್ತಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟ್ರೋಫಿಗಾಗಿ ಫೈನಲ್ ನಲ್ಲಿ ಭಾರಿ ಪೈಪೋಟಿ ನಡೆಸಿದ್ದವು ಆದರೆ ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡ ರೋಚಕ ಗೆಲುವು ಪಡೆಯಿತು.

ಇನ್ನುಐಪಿಎಲ್ ಆಟಗಾರರ ವಾರ್ಷಿಕ ಸಂಭಾವನೆಯನ್ನು ನೋಡುವುದಾದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿಗೆ ಐಪಿಎಲ್ ನಲ್ಲಿ ಫ್ರಾಂಚೈಸಿಗಳು ವಿವಿಧ ಸೀಸನ್ ಗಳಲ್ಲಿ ನೀಡಿದ ಸಂಭಾವನೆಯ ವಿವರಗಳು ಈ ಕೆಳಗಿನಂತಿವೆ. 2008ರ ಐಪಿಎಲ್ ಸೀಸನ್ ನಲ್ಲಿ ಆರು ಕೋಟಿ ಸಂಭಾವನೆ ಪಡೆದರೆ 2009 ಮತ್ತು 2010ರಲ್ಲಿ ಕ್ರಮವಾಗಿ ಆರು ಕೋಟಿ ಸಂಭಾವನೆ ಪಡೆದಿದ್ದಾರೆ. 2011ರಿಂದ 2013ರವರೆಗೆ 8.2 ಕೋಟಿಯನ್ನು ಸಂಭಾವನೆ ರೂಪದಲ್ಲಿ ಪಡೆಯಲಾಗಿದೆಇನ್ನು 2014ರಿಂದ 2017ರವರೆಗೆ 12.5 ಕೋಟಿ ಸಂಭಾವನೆಯನ್ನು ಪಡೆದಿದ್ದರು. ಹಾಗೂ 2018ರಿಂದ 2020ರ ಅವಧಿಯಲ್ಲಿ ಪ್ರತಿ ಸೀಸನ್ ನಲ್ಲಿ ವಾರ್ಷಿಕ 15 ಕೋಟಿ ವರಮಾನ ಗಳಿಸಿದ್ದಾರೆ.

ಐಪಿಎಲ್ ನಲ್ಲಿ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುವುದರಲ್ಲಿ ಧೋನಿಯೇ ನಂಬರ್1 ಆಗಿದ್ದಾರೆ ಇವರ ನಂತರದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ರೋಹಿತ್ ಶರ್ಮಾ 131.6 ಕೋಟಿ ರೂ ಸಂಬಳ ಪಡೆದು ಅತಿ ಹೆಚ್ಚು ಸಂಭಾವನೆ ಪಡೆದಿರುವ ಎರಡನೆಯವ ರಾಗಿದ್ದಾರೆ ಇನ್ನು ಮೂರನೆಯವರಾಗಿ ವಿರಾಟ್ ಕೊಹ್ಲಿ 126.2 ಕೋಟಿ ಗಳಿಸುತ್ತಾರೆ.