ಇನ್ನೂ ಕೆಜಿಎಫ್ ಚಾಪ್ಟರ್2 ಚಿತ್ರದ ಶೂಟಿಂಗ್ ಮುಗಿದೇ ಇಲ್ವಂತೆ, ಅಭಿಮಾನಿಗಳ ನಿದ್ದೆಗೆಡಿಸಿದ ಹೊಸ ಸುದ್ದಿ

ಭಾರತ ಚಿತ್ರರಂಗದ ಯೂನಿವರ್ಸಲ್ ಸಿನಿಮಾ ಕೆಜಿಎಫ್2 ಏಪ್ರಿಲ್ 14 ರಂದು ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಆದರೆ ಇದೀಗ ಚಿತ್ರತಂಡದಿಂದ ಹೊಸ ಮಾಹಿತಿಯೊಂದು ಹೊರಬಿದ್ದಿದೆ. ಈ ಸುದ್ದಿ ಯಶ್ ಅಭಿಮಾನಿಗಳ ನಿದ್ದೆಕೆಡಿಸಿದೆ. ನಮ್ಮ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಕೆ ಜಿ ಎಫ್ ಚಾಪ್ಟರ್ 2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆಯನ್ನು ಮೂಡಿಸಿದ ಸಿನಿಮಾ ಆಗಿದೆ. ಯಶ್ ಅವರ ಹುಟ್ಟುಹಬ್ಬದಂದು ಡೇಂಜರ್ ಅಹೇಡ್ ಎಂಬ ಶೀರ್ಷಿಕೆಯೊಂದಿಗೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಬಿಡುಗಡೆಯಾದ ದಿನವೇ ಅತಿಹೆಚ್ಚು ಲೈಕ್ಸ್ ಮತ್ತು ವ್ಯೂಸ್ ಗಳನ್ನು ಪಡೆದು ದಾಖಲೆ ಬರೆದಿತ್ತು.

ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ, ರವಿ ಬಸ್ರೂರ್ ಸಂಗೀತ ಸಂಯೋಜನೆ ನೀಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜೊತೆ ಖಡಕ್ ವಿಲ್ಲನ್ ಆಗಿ ಅಧೀರ ಪಾತ್ರದಾರಿ ಸಂಜಯ್ ದತ್ ಮಿಂಚಲಿದ್ದು, ಇನ್ನು ಪ್ರಧಾನಮಂತ್ರಿಯ ಪಾತ್ರದಲ್ಲಿ ರಮಿಕಾ ಆಗಿ ಬಾಲಿವುಡ್ ನಟಿ ರವೀನಾ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್, ತೆಲುಗು ನಟ ರಮೇಶ್ ಸೇರಿದಂತೆ ಅತಿ ದೊಡ್ಡ ತಾರಾಬಳಗ ಈ ಚಿತ್ರಕ್ಕಿದೆ. ಕೆಲ ತಿಂಗಳ ಹಿಂದೆ ಪ್ರಶಾಂತ್ ನೀಲ್ ಅವರು ಕೆಜಿಎಫ್ ಚಾಪ್ಟರ್ 2 ನಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಅವರ ಡಬ್ಬಿಂಗ್, ಎಲ್ಲಾ ಭಾಷೆಗಳಲ್ಲೂ ಮುಕ್ತಾಯಗೊಂಡಿದೆ ಎಂದು ಟ್ವೀಟ್ ಮಾಡಿದ್ದರು.

ಯಶ್ ಅವರ ಡಬ್ಬಿಂಗ್ ಕೆಲಸ ಕೂಡ ಮುಕ್ತಾಯಗೊಂಡಿದ್ದು, ಹಿಂದಿಯಲ್ಲೂ ಕೂಡ ತಮ್ಮ ಪಾತ್ರಕ್ಕೆ ಅವರು ತಾವೇ ಡಬ್ ಮಾಡಿದ್ದಾರೆ ಎಂದಿದ್ದರು. ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗೆ ಈ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಕೂಡ ಹೊಸ ಅಪ್ಡೇಟ್ ನೀಡಿದ್ದರು. ಕೆಜಿಎಫ್ ಸಿಕ್ವೆಲ್ ನ ತಮ್ಮ ಡಬ್ಬಿಂಗ್ ಕೆಲಸವನ್ನು ಶ್ರೀನಿಧಿ ಕಂಪ್ಲೀಟ್ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಡಬ್ಬಿಂಗ್ ಮಾಡುತ್ತಿರುವ ಫೋಟೋ ಅಪ್ಲೋಡ್ ಮಾಡಿರುವ ಇವರು, ಈ ಚಿತ್ರಕ್ಕೆ ಹೃದಯಪೂರ್ವಕವಾಗಿ ಕೆಲಸ ಮಾಡಿದ್ದೇನೆ ಎಂದು ಬರೆದುಕೊಂಡಿದ್ದರು.

ಎಲ್ಲರ ಡಬ್ಬಿಂಗ್ ಕೆಲಸ ಪೂರ್ಣಗೊಳ್ಳುತ್ತಿದ್ದು ಏಪ್ರಿಲ್ 14 ರಂದು ಬಾಕ್ಸ್ ಆಫೀಸ್ ಧೂಳೆಬ್ಬಿಸಲು ರಾಕಿ ಬಾಯ್ ಸಜ್ಜಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇತ್ತೀಚೆಗೆ ಗಾಂಧಿನಗರದಲ್ಲಿ ಸುಳಿದಾಡುತ್ತಿರುವ ಸುದ್ದಿಯು ಯಶ್ ಅವರ ಅಭಿಮಾನಿಗಳ ನಿದ್ದೆ ಕೆಡಿಸಿರುವುದು ಗ್ಯಾರಂಟಿ. ಹೌದು ಸಿನಿಮಾದ ಶೂಟಿಂಗ್ ಇನ್ನೂ ಮುಗಿದಿಲ್ಲ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಚಿತ್ರದ ರಿಲೀಸ್ ದಿನಾಂಕ ಸಮೀಪಿಸುತ್ತಿದ್ದರೂ ಕೂಡ ಚಿತ್ರೀಕರಣ ಮುಕ್ತಾಯವಾಗಿಲ್ಲ. ಅದಕ್ಕೆ ಕಾರಣ ಕೂಡ ಇದೆ. ಚಿತ್ರದ ಹೀರೋ ಇಂಟ್ರೊಡಕ್ಷನ್ ಸಾಂಗನ್ನು ಮರು ಚಿತ್ರೀಕರಣ ಮಾಡಲು ಪ್ರಶಾಂತ್ ನೀಲ್ ನಿರ್ಧರಿಸಿದ್ದಾರೆ.

ಈ ಬಗ್ಗೆ ಚಿತ್ರತಂಡದಲ್ಲಿ ಚರ್ಚೆ ನಡೆದಿದ್ದು ಈ ಹಾಡಿಗಾಗಿ ಇನ್ನೂ ಐದು ದಿನಗಳ ಶೂಟಿಂಗ್ ನಡೆಯಬೇಕಿದೆ. ಈ ಚಿತ್ರದ ಹೀರೋ ಇಂಟ್ರೊಡಕ್ಷನ್ ಸಾಂಗ್ ಈಗಾಗಲೇ ಚಿತ್ರೀಕರಣಗೊಂಡಿತ್ತು. ಆದರೆ ಈ ಹಾಡು ಮೂಡಿ ಬಂದಿರುವುದರ ಬಗ್ಗೆ ನಿರ್ದೇಶಕರಿಗೆ ಅಸಮಾಧಾನವಿದೆ. ಹೀಗಾಗಿ ಈ ಹಾಡನ್ನು ಮತ್ತೆ ಹೊಸದಾಗಿ ಚಿತ್ರೀಕರಿಸಲು ಚಿತ್ರತಂಡ ನಿರ್ಧರಿಸಿದೆ. ಹೊಸದಾಗಿ ಚಿತ್ರೀಕರಣವಾಗುತ್ತಿರುವ ಹಾಡಿಗೆ ಎ ಹರ್ಷ ಅವರು ಕೊರಿಯೋಗ್ರಫಿ ಮಾಡಲಿದ್ದು, ಹೈದರಾಬಾದಿನಲ್ಲಿ ಹಾಡಿನ ಚಿತ್ರೀಕರಣ ಪ್ರಾರಂಭವಾಗಲಿದೆ.

%d bloggers like this: