ಆಫ್ ಲೈನ್ ಕ್ಲಾಸ್ ಬೇಕೆನ್ನುವ ವಿದ್ಯಾರ್ಥಿಗಳು ಈ ಸುದ್ದಿಯನ್ನು ನೋಡಲೇಬೇಕು

ಪದವಿ ಕಾಲೇಜುಗಳು ಆರಂಭವಾಗಿ ಐದೇ ದಿನದಲ್ಲಿ 117 ವಿಧ್ಯಾರ್ಥಿಗಳಿಗೆ ಕೊರೋನ ಸೋಂಕು ಧೃಡಪಟ್ಟಿದ್ದು ಪೋಷಕರಲ್ಲಿ ಕಳವಳ ವ್ಯಕ್ತವಾಗಿದೆ. ಕೊರೋನ ಮಾರ್ಗಸೂಚಿಯೊಂದಿಗೆ ಎಲ್ಲಾ ರೀತಿಲ್ಲಿಯೂ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಪದವಿ ಕಾಲೇಜು ಆರಂಭಿಸಲು ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಶಿಕ್ಷಣ ಸಂಸ್ಥೆಗಳ ಸೂಚನೆ ಮೇರೆಗೆ ನವೆಂಬರ್ 17 ರಂದು ಪದವಿ ತರಗತಿಯ ಕಾಲೇಜುಗಳನ್ನು ಆರಂಭಿಸಲಾಗಿತ್ತು. ಇದು ವಿಧ್ಯಾರ್ಥಿಗಳಿಗೆ ಕಡ್ಡಾಯವೇನೂ ಆಗಿರಲಿಲ್ಲ ಆದರೆ ಆನ್ಲೈನ್ ತರಗತಿಯಲ್ಲಿ ಪಾಠ ಅಷ್ಟಾಗಿ ಅರ್ಥವಾಗುವುದಿಲ್ಲ ಎಂಬ ಅಭಿಪ್ರಾಯದೊಂದಿಗೆ ಒಂದಷ್ಟು ವಿಧ್ಯಾರ್ಥಿಗಳು ಕಾಲೇಜಿನ ಕಡೆ ಮುಖ ಮಾಡಿದ್ದರು. ದುರದೃಷ್ಟವಶಾತ್ ಬರೋಬ್ಬರಿ 117 ವಿಧ್ಯಾರ್ಥಿಗಳ ಜೊತೆ 51 ಉಪನ್ಯಾಸಕರಿಗೂ ಕರೋನ ವೈರಸ್ ಹರಡಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ. ಕಾಲೇಜಿಗೆ ಬರುವ ವಿಧ್ಯಾರ್ಥಿಗಳು ಕಡ್ಡಾಯವಾಗಿ ಕೋರೋನ ಪರೀಕ್ಷೆ ಮಾಡಿಸಿದ ವರದಿಯಲ್ಲಿ ನೆಗೆಟೀವ್ ಬಂದಿದ್ದರೆ ಮಾತ್ರ ಪ್ರವೇಶ ಮಾಡಬಹುದಾಗಿತ್ತು. ಇಷ್ಟೆಲ್ಲಾ ಮುಂಜಾಗ್ರತ ಕ್ರಮ ಕೈಗೊಂಡು ಎಚ್ಚರವಹಿಸಿದರೂ ಕೂಡ ಕೊರೋನ ವೈರಸ್ ಹರಡುವಿಕೆ ಮತ್ತು ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಎಡವಿರುವುದು ನಿಜಕ್ಕೂ ಆಶ್ಚರ್ಯಕರ ಮತ್ತು ಆತಂಕಕಾರಿ ವಿಷಯವಾಗಿದೆ. ಆದ್ದರಿಂದ ಕಾಲೇಜಿಗೆ ಹೋಗುವ ಪ್ರತಿಯೊಬ್ಬ ವಿಧ್ಯಾರ್ಥಿಯೂ ಸಹ ಎಚ್ಚರದಿಂದ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮತ್ತು ಭೌತಿಕ ಅಂತರ ಕಾಪಾಡುವುದರೊಂದಿಗೆ ಹೆಚ್ಚು ಹೊರಗಡೆ ಎಲ್ಲೆಂದರಲ್ಲಿ ತಿರುಗುವುದನ್ನು, ಗುಂಪುಕಟ್ಟಿ ನಿಲ್ಲುವುದನ್ನು ನಿಲ್ಲಿಸಬೇಕಾಗಿದೆ.

%d bloggers like this: