ಇಂತಹ ಕೆಟ್ಟ ಮನಸ್ಥಿತಿಯವರನ್ನು ದೇವರು ಕೂಡ ಕ್ಷಮಿಸಲ್ಲ, ಚಿಕ್ಕಣ್ಣ ಬೇಸರ

ಕನ್ನಡ ಚಿತ್ರರಂಗದ ಅಭಿನವ ಭಾರ್ಗವ ಸಾಹಸ ಸಿಂಹ ಲಕ್ಷಾಂತರ ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿರುವ ಖ್ಯಾತ ನಟ ದಿವಂಗತ ವಿಷ್ಣುವರ್ಧನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಕನ್ನಡ ಚಿತ್ರರಂಗ ಸೇರಿದಂತೆ ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನು ಹಲವು ದಶಕಗಳವರೆಗೆ ರಾಜಕುಮಾರ್ ಅಂಬರೀಶ್ ರಜನಿಕಾಂತ್ ರಂತಹ ಮೇರು ನಟರೊಂದಿಗೆ ಆಳಿ ಕೆಲವು ವರ್ಷಗಳ ಹಿಂದೆ ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿದರು.

ಕಳೆದ ಎರಡು ವಾರಗಳ ಹಿಂದೆ ತೆಲುಗಿನ ವಿಜಯ ರಂಗರಾಜನ್ ಎಂಬ ಕಲಾವಿದ ವಿಷ್ಣುವರ್ಧನ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿ ಕೊನೆಗೆಅವರ ಅಭಿಮಾನಿಗಳ ಕಾಲಿಗೆ ಬಿದ್ದು ಕ್ಷಮಿಸಿ ಎಂದು ಬೇಡಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಇದೀಗ ಮತ್ತೊಮ್ಮೆ ವಿಷ್ಣುವರ್ಧನ್ ಅವರನ್ನು ಅವಮಾನಿಸುವ ಘಟನೆಯೊಂದು ನಡೆದಿದೆ. ಹೌದು ಬೆಂಗಳೂರಿನ ಮಾಗಡಿ ರಸ್ತೆಯ ಆದಿಚುಂಚನಗಿರಿ ವೃತ್ತದಲ್ಲಿ ಇರುವ ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಕೆಲವು ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.

ಬದುಕಿರೋವರೆಗೂ ಅಜಾತಶತ್ರುವಾಗಿ ಇದ್ದ ವಿಷ್ಣುವರ್ಧನ್ ಅವರಿಗೆ ಪದೇಪದೇ ಹೀಗೆ ಆಗುತ್ತಿರುವ ಕಾರಣ ಕನ್ನಡ ಚಿತ್ರರಂಗದ ಎಲ್ಲ ಕಲಾವಿದರು ವಿಷ್ಣುವರ್ಧನ್ ಅವರ ಪರವಾಗಿ ನಿಂತಿದ್ದಾರೆ ಮತ್ತು ಜರುಗಿದ ಘಟನೆಯನ್ನು ಖಂಡಿಸಿದ್ದಾರೆ. ಈಗ ಸದ್ಯ ಚಿಕ್ಕಣ್ಣ ಅವರು ಈ ಕುರಿತು ಮಾತನಾಡಿದ್ದು ಅವರ ಮಾತುಗಳಿಗೆ ಪ್ರಶಂಸೆ ವ್ಯಕ್ತವಾಗಿದೆ. ತಮ್ಮ ಇಸ್ಟಾಗ್ರಾಮ್ ಖಾತೆಯಲ್ಲಿ ಹಾನಿಯಾದ ಪುತ್ಥಳಿಯ ಫೋಟೋ ವಿನ ಕೆಳಗೆ ಚಿಕ್ಕಣ್ಣ ಅವರು ಹೀಗೆ ಬರೆದಿದ್ದಾರೆ.

ಕನ್ನಡಿಗರು ಆರಾಧಿಸುವ ವಿಷ್ಣುವರ್ಧನ್ ಸರ್ ಅವರ ಪುತ್ಥಳಿಯನ್ನು ಯಾರು ಇಲ್ಲದ ಸಮಯ ನೋಡಿಕೊಂಡು ಹಾಳು ಮಾಡುವವರು ತುಂಬಾ ವಿಕೃತ ಮನಸ್ಸಿನವರು ಇಂತಹ ನೀಚ ಮನಸ್ಸನ್ನು ಹೊಂದಿರುವವರನ್ನು ಆ ಭಗವಂತನು ಕೂಡ ಕ್ಷಮಿಸಲಾರ ಎಂದು ಪುತ್ತಳಿ ಹಾನಿ ಮಾಡಿದ ಕಿಡಿಗೇಡಿಗಳಿಗೆ ಚಾಟಿ ಬೀಸಿದ್ದಾರೆ. ಪದೇ ಪದೇ ಹೀಗೆ ವಿಷ್ಣುವರ್ಧನ್ ಅವರನ್ನು ಅವಮಾನ ಮಾಡುವಂತಹ ವಿಷಯಗಳಿಗಗಿ ಮುನ್ನೆಲೆಗೆ ತರುತ್ತಿರುವುದರಿಂದ ಅವರ ಅಭಿಮಾನಿಗಳಿಗೆ ತುಂಬಾ ನಿರಾಶೆಯಾಗಿದ್ದು ಕೆಲವು ಅಭಿಮಾನಿ ಸಂಘಗಳು ರಾಜ್ಯದ ಹಲವೆಡೆ ಹೋರಾಟಕ್ಕಿಳಿದಿವೆ.

%d bloggers like this: