ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ರೇಜ಼್ ಹುಟ್ಟಿಸುವಂತಹ ಕ್ರಿಕೆಟ್ ಅಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್. ಕಳೆದ 2020ನೇ ವರ್ಷದಲ್ಲಿ ಕೋವಿಡ್ ಸಂಕಷ್ಟದ ಕಠಿಣ ಮಾರ್ಗಸೂಚಿ ನಿಯಮಗಳ ನಡುವೆಯೂ ಕೂಡ ಯಶಸ್ವಿಯಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಹದಿನಾಲ್ಕನೇ ಆವೃತ್ತಿಯು ಯಶಸ್ವಿಯಾಗಿ ಸಂಪೂರ್ಣಗೊಂಡಿತು. ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 14ನೇ ಸೀಸನ್ ನಲ್ಲಿ ವಿಜಯ ಪತಾಕೆ ಹಾರಿಸಿ ಐಪಿಎಲ್ ಟ್ರೋಫಿಯನ್ನ ತನ್ನ ಮುಡಿಗೇರಿಸಿಕೊಂಡಿತು. ಇದೀಗ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಹದಿನೈದನೇ ಆವೃತ್ತಿ ಆರಂಭಿಸುವ ನಿಟ್ಟಿನಲ್ಲಿ ಹರಾಜು ಪ್ರಕ್ರಿಯೆ ಆರಂಭ ಮಾಡಿದೆ.

ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15ನೇ ಆವೃತ್ತಿಯಲ್ಲಿ ಎರಡು ನೂತನ ಫ್ರಾಂಚೈಸಿಗಳು ಸೇರ್ಪಡೆಗೊಂಡಿದೆ. ಮುಂದಿನ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15ನೇ ಆವೃತ್ತಿಯು ಆರಂಭಗೊಳ್ಳುವ ಯೋಜನೆಯಲ್ಲಿದೆ. ಇನ್ನು ಪೂರಕವಾಗಿ ಕಳೆದ ಶನಿವಾರ ಮತ್ತು ಭಾನುವಾರ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಕೋಟ್ಯಾಂತರ ರೂ. ವಿನಿಯೋಗಿಸಿ ಉತ್ತಮವಾದ ಆಟಗಾರರನ್ನ ಆಯ್ಕೆ ಮಾಡಿಕೊಂಡಿವೆ. ಅದರಂತೆ ಈ ಐಪಿಎಲ್ ಕ್ರಿಕೆಟ್ ನಲ್ಲಿ ಪ್ರಬಲ ತಂಡವಾಗಿರುವ ಮುಂಬೈ ಇಂಡಿಯನ್ಸ್ ತಂಡ ಜಾರ್ಖಂಡ್ ನ ಇಶಾನ್ ಪ್ರಣವ್ ಕುಮಾರ್ ಉರುಫ್ ಇಶಾನ್ ಕಿಶನ್ ಅವರನ್ನ ತನ್ನ ತಂಡಕ್ಕೆ ಭಾರಿ ಮೊತ್ತ ನೀಡಿ ಖರೀದಿ ಮಾಡಿದೆ.



ಎಡಗೈ ಬ್ಯಾಟ್ಸಮನ್ ಆಗಿರುವ ಇಶಾನ್ ಕಿಶನ್ ಅವರು ದೇಶಿಯ ಕ್ರಿಕೆಟ್ ನಲ್ಲಿ ಜಾರ್ಖಂಡ್ ಪರವಾಗಿ ಆಟವಾಡಿದ್ದಾರೆ. ಇಶಾನ್ ಕಿಶನ್ ಅವರ ವಿಶೇಷ ಸಾಧನೆ ಅಂದರೆ ಅವರು ಅಂಡರ್19 ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನೆಡೆಸಿದ್ದರು. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಇಂಗ್ಲೆಂಡ್ ತಂಡದ ವಿರುದ್ದ ನಡೆದ ಪಂದ್ಯದ ಮೂಲಕ ಚೊಚ್ಚಲ ಬಾರಿಗೆ ಇಶಾನ್ ಕಿಶನ್ ಅವರು ಅಂತರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.ಇಪ್ಪತ್ಮೂರು ವರ್ಷದ ಈ ಇಶಾನ್ ಕಿಶನ್ ಅವರು ಟಿಟ್ವೆಂಟಿ ಕ್ರಿಕೆಟ್ ನಲ್ಲಿ ದಾಖಲೆಯ ಪ್ರದರ್ಶನ ತೋರಿದ್ದಾರೆ.



ಇವರು ಆಡಿರುವ 104 ಇನ್ನಿಂಗ್ಸ್ ಗಳಲ್ಲಿ 28ರ ಸರಾಸರಿಯಲ್ಲಿ 2726 ರನ್ ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ಹದಿನೈದು ಅರ್ಧ ಶತಕಗಳನ್ನ ಬಾರಿಸಿದ್ದಾರೆ. ಇನ್ನು ಐಪಿಎಲ್ 15ನೇ ಆವೃತ್ತಿಯ ಆರಂಭದ ಹಂತವಾಗಿ ಹರಾಜು ಪ್ರಕ್ರಿಯೆಯಲ್ಲಿ ಇದೀಗ ಈ ಖ್ಯಾತ ಪ್ರತಿಭಾವಂತ ಆಟಗಾರ ಇಶಾನ್ ಕಿಸಾನ್ ನನ್ನ ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ 15.25 ಕೋಟಿಗೆ ಖರೀದಿ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಇದುವರೆಗೂ ಈ ಪ್ರಮಾಣದ ಮೊತ್ತದಲ್ಲಿ ಯಾವ ಆಟಗಾರನನ್ನು ಕೂಡ ಖರೀದಿ ಮಾಡಿರಲಿಲ್ಲ. ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ ಹತ್ತು ಕೋಟಿಗಿಂತ ಅಧಿಕ ಮೊತ್ತಕ್ಕೆ ಇದೇ ಮೊದಲ ಬಾರಿ ಖರೀದಿ ಮಾಡಿದ್ದಾರೆ.