ಐಪಿಎಲ್ ಎಂಬ ಹೆಸರು ಕೇಳಿದರೆ ಸಾಕು ಎಲ್ಲರೂ ಹುಬ್ಬು ಮೇಲೆರುತ್ತದೆ, ಅದು ಐಪಿಎಲ್ ಮಾಡಿರುವ ಮ್ಯಾಜಿಕ್. ಹೌದು ಬಹಳ ಮನರಂಜನೆ ನೀಡುವ ಈ ಚುಟುಕು ಪಂದ್ಯಾವಳಿ ಎಲ್ಲರಿಗೂ ಅಚ್ಚುಮೆಚ್ಚು. ಇತ್ತೀಚಿಗೆ ನಡೆದ ಇದರ 13ನೇ ಆವೃತ್ತಿ ಮುಕ್ತಾಯವಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹೇಳಿದಂತೆ ಹಿಂದಿನ ಸೀಸನ್ ನಡೆಯುವ ರೀತಿಯಲ್ಲಿಯೆ ಮತ್ತೆ ಏಪ್ರಿಲ್ ಮೇ ತಿಂಗಳಲ್ಲಿ ಸೀಸನ್14 ಅನ್ನು ನಡೆಸಲಾಗುವುದು ಎಂದಿದ್ದಾರೆ. ಅಂದರೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ಮತ್ತೆ ಈ ಚುಟುಕು ಪಂದ್ಯಾವಳಿಯ ಹೊಡೆದಾಟಕ್ಕೆ ನಾವು ಸಾಕ್ಷಿ ಆಗಬಹುದು. ಆದರೆ ಬಿಸಿಸಿಐ ಮುಂದಿನ ಐಪಿಎಲ್ಗೆ ಎರಡು ಹೊಸ ತಂಡಗಳನ್ನು ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ.

ಒಂದು ವೇಳೆ ಇದು ನಿಜವೇ ಆದರೆ ಸದ್ಯಕ್ಕಿರುವ ಪ್ರತಿಯೊಂದು ತಂಡ ತಮ್ಮ ತಂಡದಲ್ಲಿರುವ ಮೂರು ಆಟಗಾರರನ್ನು ಹೊರತುಪಡಿಸಿ ಉಳಿದೆಲ್ಲಾ ಆಟಗಾರರನ್ನು ಹರಾಜಿಗೆ ಬಿಡುಗಡೆ ಮಾಡಬೇಕು, ಅಂದರೆ ಮತ್ತೊಂದು ಮೆಗಾ ಹರಾಜು ನಡೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ ಇದರ ಬಗ್ಗೆ ಇತ್ತೀಚಿಗೆ ಮಾತನಾಡಿದೆ ಹಿರಿಯ ಆಟಗಾರ ಮೈಕಲ್ ವಾನ್ ಐಪಿಎಲ್ ನ ಎಲ್ಲಾ ಫ್ರಾಂಚೈಸಿಗಳು ಒಬ್ಬ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರನ್ನು ಖರೀದಿ ಮಾಡಲು ಆಸಕ್ತಿಯನ್ನು ವಹಿಸುತ್ತವೆ ಎಂದು ಹೇಳಿದ್ದಾರೆ.

ಹೌದು ಅವರು ಬೇರೆ ಯಾರೂ ಅಲ್ಲ ಕಿಂಗ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡುತ್ತಿರುವ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್-ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್. ಹೌದು ಇತ್ತೀಚಿಗೆ ಭಾರತದ ವಿರುದ್ಧ ನಡೆದ ಏಕದಿನ ಪಂದ್ಯಗಳಲ್ಲಿ ಮ್ಯಾಕ್ಸ್ವೆಲ್ ಅದ್ಭುತ ಪ್ರದರ್ಶನ ತೋರಿದ್ದಾರೆ, ಇದನ್ನು ಗಮನಿಸಿದ ಹಿರಿಯ ಆಟಗಾರ ಮೈಕಲ್ ವಾನ್ ಮುಂದಿನ ಐಪಿಎಲ್ಗೆ ಇವರನ್ನು ಖರೀದಿ ಮಾಡಲು ಎಲ್ಲ ತಂಡಗಳು ಬಡಿದಾಡುತ್ತವೆ ಎಂಬುದಾಗಿ ಹೇಳಿದ್ದಾರೆ. ಭಾರತದ ವಿರುದ್ಧ ಆಡಿದ 3 ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಕ್ರಮವಾಗಿ 19 ಎಸೆತಗಳಲ್ಲಿ 45ರ ಮತ್ತು 29 ಎಸೆತಗಳಲ್ಲಿ 69 ಮತ್ತು 38 ಎಸೆತಗಳಲ್ಲಿ 59 ರನ್ ಸಿಡಿಸಿ ಅದ್ಭುತ ಫಾರ್ಮಿನಲ್ಲಿ ಆಡುತ್ತಿದ್ದಾರೆ.

ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರರದ ಮ್ಯಾಕ್ಸ್ವಲ ಅದ್ಭುತ ಫೀಲ್ಡರ್ ಕೂಡ ಹೌದು, ಜೊತೆಗೆ ಅಗತ್ಯವಿದ್ದರೆ ಉತ್ತಮವಾಗಿ ಬೌಲಿಂಗ್ ಅನ್ನು ಕೂಡ ಮಾಡಬಲ್ಲರು ಈ ಮ್ಯಾಕ್ಸ್ವೆಲ್. ಆದರೆ ಇತ್ತೀಚಿಗೆ ನಡೆದ 13ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಗಳಲ್ಲಿ ಮ್ಯಾಕ್ಸ್ವೆಲ್ ಅವರು ನೀಡಿದ ಪ್ರದರ್ಶನ ತೀರಾ ಕಳಪೆ ಮಟ್ಟದ್ದಾಗಿದ್ದು. ಆಡಿದ 13 ಪಂದ್ಯಗಳಲ್ಲಿ ಅವರು ಮಾಡಿದ್ದು ಕೇವಲ ಒಂದು 108 ರನ್ನು. ಇಷ್ಟೆಲ್ಲಧರ ನಡುವೆ ಮೈಕಲ್ ವಾನ್ ಐಪಿಎಲ್ ಎಲ್ಲಾ ಫ್ರಾಂಚೈಸ್ ಗಳು ಮ್ಯಾಕ್ಸ್ವೆಲ್ ಅವರ ಖರೀದಿಗೆ ಆಸಕ್ತಿ ವಹಿಸುತ್ತದೆ ಎಂದು ಹೇಳಿದ್ದಾರೆ.