ಐಪಿಎಲ್ ಇಂದ ದೂರ ಸರಿದ ಆರ್ಸಿಬಿಯ ಮತ್ತೊಬ್ಬ ಪ್ರಮುಖ ಆಟಗಾರ

ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಡೇಲ್ ಸ್ಟೀನ್ ಅವರು ಕ್ರಿಕೆಟ್ ನಿಂದ ಸ್ವಯಂ ನಿವೃತ್ತಿ! ಹೌದು ಈ 2021ರ ವರ್ಷದಲ್ಲಿ ನಡೆಯುವ ಭಾರತೀಯ ಕ್ರಿಕೆಟ್ ಲೀಗ್ ನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಡೇಲ್ ಸ್ಟೀನ್ ಅವರು ಐಪಿಎಲ್ ನಲ್ಲಿ ಆರ್ಸಿಬಿ ತಂಡದಲ್ಲಿ ವೇಗದ ಬೌಲರ್ ಆಗಿದ್ದ ಅತ್ತ್ಯುತ್ತಮ ಬ್ಯಾಟ್ಸಮನ್ ಗಳನನ್ನು ತಲ್ಲಣಗೊಳಿಸುತ್ತಿದ್ದ ಬೌಲರ್ ಡೆಲ್ ಸ್ಟೀನ್ ಅವರು ಇದೀಗ ಕ್ರಿಕೆಟ್ ಆಟದಿಂದ ದೂರವಿರಲು ತೀರ್ಮಾನಿಸಿದ್ದಾರೆ. ಡೇಲ್ ಸ್ಟೀನ್ 2021 ವರ್ಷದಲ್ಲಿ ನಡೆಯುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡದಿರಲು ನಿರ್ಧರಿಸಿದ್ದಾರೆ‌, ಈ ನಿರ್ಧಾರಕ್ಕೆ ಬಲವಾದ ಕಾರಣವೇನಿಲ್ಲ ಅವರಿಗೆ ಕ್ರಿಕೆಟ್ ನಿಂದ ಕೊಂಚ ಬಿಡುವುಬೇಕು ಎಂದು ಅನಿಸಿದ ಕಾರಣ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಈ ನಿರ್ಧಾರದ ವಿಚಾರವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ನಿರಂತರವಾಗಿ ಟ್ವೀಟ್ ಮಾಡಿದ್ದಾರೆ, ಕಳೆದ ಐಪಿಎಲ್ ಪಂದ್ಯಾವಳಿಯಲ್ಲಿ ಯಾವುದೇ ರೀತಿಯ ಗಮನಾರ್ಹ ಆಟವಾಡಿಲ್ಲ. ಡೇಲ್ ಸ್ಟೀನ್ ಅವರು ಐಪಿಎಲ್ ಒಟ್ಟು ಮೂರು ಪಂದ್ಯಗಳಲ್ಲಿ ಅಟವಾಡಿದ್ದರು ಸಹ ಇವರು ಕೇವಲ ಒಂದು ವಿಕೆಟ್ ಪಡೆದಿದ್ದರು. ನನಗೆ ಸ್ವಲ್ಪ ವಿರಾಮದ ಅವಶ್ಯಕತೆಯಿದೆ ಎಂದು ಗಂಭೀರ ಕಾರಣವಿಲ್ಲದೆ ಡೇಲ್ ಸ್ಟೀನ್ ಅವರು ಕ್ರಿಕೆಟ್ ನಿಂದ ದೂರ ಸರಿದಿದ್ದಾರೆ. ಇದು ಕೇವಲ ತಾತ್ಕಲಿಕವಾಗಿದ್ದು ಒಂದಷ್ಟು ದಿನಗಳ ನಂತರ ಮತ್ತೆ ಹಂತ ಹಂತವಾಗಿ ಕ್ರಿಕೆಟ್ ನಲ್ಲಿ ತೊಡಗಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಈ ವರ್ಷ ನಾನು ಆರ್ಸಿಬಿ ತಂಡದ ಪರ ಆಟವಾಡುತ್ತಿಲ್ಲ ಎಂಬ ಮಾತ್ರಕ್ಕೆ ನಾನು ಆರ್ಸಿಬಿ ತಂಡ ಬಿಟ್ಟು ಹೋಗುವುದಿಲ್ಲ ಎಂದೂ ಸಹ ತಿಳಿಸಿದ್ದಾರೆ.

ಡೇಲ್ ಸ್ಟೀನ್ ಅವರು 2019ರಲ್ಲಿ ಟೆಸ್ಟ್ ಕ್ರಿಕೆಟ್ ನಿಂದಲೂ ಕೂಡ ಸ್ವಯಂ ನಿವೃತ್ತಿ ಘೋಷಿಸಿಕೊಂಡಿದ್ದರು. ಇದೀಗ ಐಪಿಎಲ್ ನಿಂದಲೂ ಕೂಡ ದೂರ ಸರಿದಿದ್ದಾರೆ ಅಂದಮಾತ್ರಕ್ಕೆ ಇವರು ಸಂಪೂರ್ಣವಾಗಿ ಕ್ರಿಕೆಟ್ ವೃತ್ತಿಯಿಂದಲೇ ದೂರ ಆಗುತ್ತಾರೆ ಎಂದು ಅರ್ಥವಲ್ಲ, ಈ ವರ್ಷ ಹೊರತು ಪಡಿಸಿ ಮುಂದಿನ ದಿನಗಳಲ್ಲಿ ಕ್ರಿಕೆಟ್ ಕ್ಷೇತ್ರದ್ಲಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತೇನೆ ಎಂದು ಮಾಹಿತಿ ನೀಡಿದ್ದಾರೆ. ಒಟ್ಟಾರೆಯಾಗಿ ಇವರ ಅನುಪಸ್ಥಿತಿಯಲ್ಲಿ 2021ರ ಐಪಿಎಲ್ ನಲ್ಲಿ ಆರ್ಸಿಬಿ ತಂಡ ಪಂದ್ಯ ಆಡಲಿದೆ, ಇನ್ನು ನನ್ನ ಈ ನಿರ್ಧಾರಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡಕ್ಕೆ ಧನ್ಯವಾದಗಳು ಎಂದು ಡೇಲ್ ಸ್ಟೀನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿಬರೆದುಕೊಂಡಿದ್ದಾರೆ.

%d bloggers like this: