ಐಪಿಎಲ್ ನಡುವೆ ಬಿಡುವು ಮಾಡಿಕೊಂಡು ಕೆಜಿಎಫ್ ಚಾಪ್ಟರ್2 ಚಿತ್ರವನ್ನು ನೋಡಿದ ಆರ್ಸಿಬಿ ತಂಡದ ಆಟಗಾರರು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕನ್ನಡದ ಗೋಲ್ಡನ್ ಸಿನಿಮಾ ಕೆಜಿಎಫ್2 ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ. ಈ ಚಿತ್ರ ಕಣ್ತುಂಬಿಕೊಂಡ ಪ್ರತಿಯೊಬ್ಬರು ಕೂಡ ರಾಕಿಬಾಯ್ ಗೆ ಸಲಾಂ ಹೊಡೆಯುತ್ತಿದ್ದಾರೆ. ಕೆಜಿಎಫ್ ಚಾಪ್ಟರ್2 ಸಿನಿಮಾ ಬಿಡುಗಡೆಯಾದ ಐದನೇ ದಿನಕ್ಕೆ ಬರೋಬ್ಬರಿ ಆರು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ಇದೀಗ ಪ್ರಪಂಚದಾದ್ಯಂತ ರಾಕಿಬಾಯ್ ನದ್ದೇ ಹವಾ. ಅಷ್ಟರ ಮಟ್ಟಿಗೆ ವಿಶ್ವದ ಚಿತ್ರರಂಗದಲ್ಲಿ ಪ್ರಶಾಂತ್ ನೀಲ್ ಅವರ ಕಲ್ಪನೆಯಲ್ಲಿ ಮೂಡಿ ಬಂದಿರುವ ಕೆಜಿಎಫ್2 ಸಿನಿಮಾ ಮೋಡಿ ಮಾಡಿದೆ. ಈ ಚಿತ್ರವನ್ನ ಮಕ್ಕಳಿಂದ ಹಿಡಿದು ವಯಸ್ಸಾದರೂ ಕೂಡ ನೋಡುತ್ತಿರುವುದು ವಿಶೇಷ ಎನ್ನಬಹುದು. ಅದರಲ್ಲಿಯೂ ಆಕ್ಷನ್ ಸಿನಿಮಾ ಇಷ್ಟ ಪಡುವಂತಹ ಪಡ್ಡೆ ಹುಡುಗರು ಕೆಜಿಎಫ್ ಚಾಪ್ಟರ್2 ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆ.

ಅಚ್ಚರಿ ಅಂದರೆ ಕೆಜಿಎಫ್ ಚಿತ್ರವನ್ನ ಕರ್ನಾಟಕಕ್ಕಿಂತ ಹೆಚ್ಚಾಗಿ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಮುಂಬೈನಲ್ಲಿ ತಮ್ಮ ಭಾಷೆಯ ಸ್ಟಾರ್ ನಟನ ಸಿನಿಮಾಗೆ ನೀಡುವ ಪ್ರಾಶಸ್ತ್ಯಕ್ಕಿಂತ ಹೆಚ್ಚಾಗಿ ಯಶ್ ಅವರ ಕೆಜಿಎಫ್ ಚಿತ್ರ ನೋಡಿ ಸಂಭ್ರಮ ಪಡುತ್ತಿದ್ದಾರೆ. ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮತ್ತು ಭಾರತೀಯ ಚಿತ್ರರಂಗದ ಯಾವ ಸಿನಿಮಾ ಕೂಡ ಮಾಡದ ದಾಖಲೆಯ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿರುವ ಕೆಜಿಎಫ್2 ಸಿನಿಮಾವನ್ನು ಭಾರತೀಯ ಚಿತ್ರರಂಗದ ದಿಗ್ಗಜ ನಟರು ಚಿತ್ರ ನೋಡಿ ಚಿತ್ರತಂಡಕ್ಕೆ ಅಭಿನಂದನೆ ತಿಳಿಸುತ್ತಿದ್ದಾರೆ. ವಿಶೇಷ ಅಂದರೆ ಸೂಪರ್ ಸ್ಟಾರ್ ನಟ ರಜಿನಿಕಾಂತ್ ಅಂತಹ ದಿಗ್ಗಜ ನಟರು ಕೂಡ ಚಿತ್ರ ನೋಡಿ ಅಚ್ಚರಿ ಪಡುತ್ತಿದ್ದಾರೆ. ಯಶ್ ಅವರ ಅಮೋಘ ನಟನೆಗೆ ರಜನಿ ಕೂಡ ಫಿಧಾ ಆಗಿದ್ದಾರೆ. ಇದೀಗ ರಾಯಲ್ ಬಾಯ್ಸ್ ಕೂಡ ಕೆಜಿಎಫ್2 ಚಿತ್ರ ನೋಡಿ ಸಂಭ್ರಮ ಪಡುತ್ತಿದ್ದಾರೆ.

ಹೌದು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಡೆಯುತ್ತಿದ್ದು ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಎಲ್ಲಾ ಆಟಗಾರರು ತಮ್ಮ ಬಿಡುವಿನ ವೇಳೆಯಲ್ಲಿ ಕೆಜಿಎಫ್2 ಚಿತ್ರವನ್ನ ಕಣ್ತುಂಬಿಕೊಂಡಿದ್ದಾರೆ. ಈ ಸಿನಿಮಾ ನೋಡಿ ಆರ್ಸಿಬಿ ಆಟಗಾರರು ಕೂಡ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು ಏಪ್ರಿಲ್ 17ರಂದು ಬಿಡುವು ಇದ್ದ ಕಾರಣ ರಾಯಲ್ ಬಾಯ್ಸ್ ಹೊಂಬಾಳೆ ಫಿಲಂಸ್ ಸಂಸ್ಥೆ ಆಯೋಜನೆ ಮಾಡಿದ್ದ ಕೆಜಿಎಫ್ ಚಿತ್ರದ ಶೋ ನೋಡಿದ್ದಾರೆ. ಕೆಜಿಎಫ2 ಚಿತ್ರದಲ್ಲಿ ರಾಕಿಬಾಯ್ ನೋಡಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಪ್ಲೆಸಿಸ್ ಸೇರಿದಂತೆ ಹಲವು ಆಟಗಾರರು ಸಿನಿಮಾವನ್ನು ಹಾಡಿ ಹೊಗಳಿ ಪ್ರಶಾಂತ್ ನೀಲ್ ಅವರ ಡೈರೆಕ್ಷನ್ ಗೆ ಫಿದಾ ಆಗಿದ್ದಾರೆ. ಒಟ್ಟಾರೆಯಾಗಿ ಇಡೀ ವಿಶ್ವದ ಸಿನಿ ರಸಿಕರ ಮನಗೆದ್ದಿರುವ ಕೆಜಿಎಫ್2 ಚಿತ್ರ ಇದೀಗ ರಾಯಲ್ ಬಾಯ್ಸ್ ಮನವನ್ನು ಕೂಡ ಗೆದ್ದಿದೆ. ಈ ಸುದ್ದಿಯನ್ನ ನಟ ಕಮ್ ಕಾಮಿಡಿಯನ್ ಡ್ಯಾನಿಶ್ ಸೇಠ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

%d bloggers like this: