ಈರುಳ್ಳಿ ಸಿಪ್ಪೆಯ ಉಪಯೋಗಗಳನ್ನು ಒಮ್ಮೆಓದಿದರೆ ನೀವು ಎಂದು ಅದನ್ನು ಬಿಸಾಡುವದಿಲ್ಲ

ನಾವು ದಿನನಿತ್ಯ ಬಳಸುವ ಮತ್ತು ನಮಗೆ ಸರಳವಾಗಿ ಸಿಗುವ ಎಷ್ಟೋ ತರಕಾರಿಗಳನ್ನು, ಹಣ್ಣುಗಳನ್ನು ಪರಿಪೂರ್ಣ ರೀತಿಯಲ್ಲಿ ಬಳಸಿಕೊಳ್ಳುವ ರೀತಿ ಬಹುತೇಕ ಜನರಿಗೆ ಗೊತ್ತಿಲ್ಲ. ನಿಜಕ್ಕೂ ಯಾವುದೇ ತರಕಾರಿ ಇರಲಿ ಹಣ್ಣು ಇರಲಿ ಅದರ ಬೀಜದಿಂದ ಹಿಡಿದು ಸಿಪ್ಪೆಯವರೆಗೂ ಪ್ರತಿಯೊಂದು ಅಂಶವೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಉಪಯುಕ್ತವಾಗಿರುತ್ತದೆ. ಆದರೆ ನಾವು ಕೇವಲ ಒಳಗಿನ ಹಣ್ಣನ್ನು ಮಾತ್ರ ಅಥವಾ ತರಕಾರಿಯ ಒಳಗಿನ ಭಾಗವನ್ನು ಮಾತ್ರ ಬಳಸುವುದನ್ನು ಕಲಿತಿದ್ದೇವೆ. ಅದೇ ರೀತಿ ಈಗ ನಾವು ಹೇಳಹೊರಟಿರುವುದು ಈರುಳ್ಳಿ ಬಗ್ಗೆ. ಹೌದು ದಿನಂಪ್ರತಿ ನಮಗೆ ಬಹುತೇಕ ಎಲ್ಲಾ ಅಡಿಗೆ ಮಾಡಲು ಈರುಳ್ಳಿ ಬೇಕೇ ಬೇಕು. ಇದು ರುಚಿ ಕೊಡುವುದರ ಜೊತೆಗೆ ಹೇರಳ ಪ್ರಮಾಣದ ಔಷಧಿ ಗುಣಗಳನ್ನು ಕೂಡ ಹೊಂದಿದೆ. ಆದರೆ ಅನೇಕರು ಈರುಳ್ಳಿಯನ್ನು ಹೆಚ್ಚಿಕೊಂಡ ನಂತರ ಅದರ ಸಿಪ್ಪೆಯನ್ನು ಬಿಸಾಡುತ್ತಾರೆ.

ಹಾಗೆ ಮಾಡುತ್ತಿದ್ದರೆ ಇಂದೇ ಅದನ್ನು ಬಿಟ್ಟುಬಿಡಿ. ಹೌದು ಈರುಳ್ಳಿ ಸಿಪ್ಪೆ ಎಷ್ಟು ಉಪಯುಕ್ತ ಎಂದರೆ ಒಮ್ಮೆ ನೀವೇ ಓದಿ. ಈರುಳ್ಳಿ ಸಿಪ್ಪೆಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಕೆಲಕಾಲ ಬಿಡಿ. ನಂತರ ಆ ತೊಳೆದ ನೀರಿನಿಂದ ಬಾಯಿ ಮುಕ್ಕಳಿಸಿದರೆ ಗಂಟಲಿಗೆ ಅಂಟಿಕೊಂಡಿರುವ ಯಾವುದೇ ಸೋಂಕು ಇದ್ದರು ಕೂಡ ಅದು ತಕ್ಷಣವೇ ಮಾಯವಾಗುತ್ತದೆ. ಕಾಲುಗಳು ನೋವಾಗುತ್ತಿದ್ದರೆ ಒಂದು ಪಾತ್ರೆಯಲ್ಲಿ ನೀರನ್ನು ಬಿಸಿಮಾಡಿಕೊಂಡು ಅದಕ್ಕೆ ಈರುಳ್ಳಿ ಸಿಪ್ಪೆಗಳನ್ನು ಹಾಕಿ ಆ ಮಿಶ್ರಣದಲ್ಲಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ನಿಮ್ಮ ಕಾಲನ್ನು ಇರಿಸಿ. ತಕ್ಷಣವೇ ನೋವು ಕಡಿಮೆಯಾಗುವುದು. ನಿಮ್ಮ ಮನೆಯಲ್ಲಿ ಗಿಡಗಳಿಗೆ ಫರ್ಟಿಲೈಸರ್ಸ್ ಹಾಕುತ್ತಿದ್ದಾರೆ ಇವತ್ತಿನಿಂದಲೇ ಆ ರೀತಿ ಮಾಡುವದನ್ನು ನಿಲ್ಲಿಸಿಬಿಡಿ. ಅದರ ಬದಲಿಗೆ ಈರುಳ್ಳಿಗಳನ್ನು ನೆನೆಸಿಟ್ಟ ನೀರನ್ನು ಗಿಡದ ಬುಡಕ್ಕೆ ಹಾಕಿ. ಇದು ಫರ್ಟಿಲೈಜರ್ ನಂತೆ ಕಾರ್ಯನಿರ್ವಹಿಸುವುದು. ಉಪಯುಕ್ತವಾದ ಮಾಹಿತಿಯನ್ನು ಕೊಟ್ಟಿದ್ದಕ್ಕಾಗಿ ನಮಗೆ ಒಂದು ಲೈಕ್ ಇರಲಿ.

%d bloggers like this: