ಇಷ್ಟು ಬೇಗನೆ ಏಕದಿನ ಕ್ರಿಕೆಟ್ ಗೆ ಬೆನ್ ಸ್ಟೋಕ್ಸ್ ವಿದಾಯ ಹೇಳಿದ್ದಕ್ಕೆ ಕಾರಣ ಇಲ್ಲಿದೆ

ಒನ್ ಡೇ ಮ್ಯಾಚ್ ಗೆ ವಿದಾಯ ಹೇಳಿದ ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಬೆನ್ ಸ್ಟೋಕ್ಸ್. ಬೆನ್ ಸ್ಟೋಕ್ಸ್ ಅವರು ಏಕದಿನ ಕ್ರಿಕೆಟ್ ಗೆ ವಿದಾಯ ಹೇಳುತ್ತಿದ್ದಾರೆ. ಈ ವಿಚಾರವನ್ನು ಬೆನ್ ಸ್ಟೋಕ್ಸ್ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಬೆನ್ ಸ್ಟೋಕ್ಸ್ ಅವರು ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆಗಿ ಹೆಸರು ಮಾಡಿದವರು. ಇತ್ತೀಚೆಗಷ್ಟೇ ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಆಗಿದ್ದ ಬೆನ್ ಸ್ಟೋಕ್ಸ್ ಅವರು ಮಂಗಳವಾರ ನಡೆದ ಏಕದಿನ ಸರಣಿ ಪಂದ್ಯದಲ್ಲಿ ಭಾರತ ತಂಡದ ವಿರುದ್ದ ಸೋಲನ್ನಭವಿಸಿದ್ದರು. ಬೆನ್ ಸ್ಟೋಕ್ಸ್ ಅವರ ಬಗ್ಗೆ ಕೊಂಚ ತಿಳಿದುಕೊಳ್ಳುವುದಾದರೆ ಬೆನ್ ಸ್ಟೋಕ್ಸ್ ಅವರು ನ್ಯೂಜಿಲೆಂಡ್ ಜನಿಸಿದರು. ಆದರೆ ನಂತರ ತಮ್ಮ ಕುಟುಂಬ ಇಂಗ್ಲೆಂಡ್ ಗೆ ಸ್ಥಳಾಂತರ ಗೊಂಡು ಇಂಗ್ಲೆಂಡ್ ನಲ್ಲಿಯೇ ತಮ್ಮ ಜೀವನವನ್ನು ಕಂಡುಕೊಂಡರು.

ಬೆನ್ ಸ್ಟೋಕ್ಸ್ ಅವರು 2011 ರಲ್ಲಿ ಚೊಚ್ಚಲ ಬಾರಿಗೆ ಏಕದಿನ ಸರಣಿ ಪಂದ್ಯ ಮತ್ತು ಟಿ-ಟ್ವೆಂಟಿ ಕ್ರಿಕೆಟ್ ಗಳನ್ನ ಆಡಿದರು. ಇದಾದ ನಂತರದಲ್ಲಿ 2013 ರಲ್ಲಿ ಟೆಸ್ಟ್ ಕ್ರಿಕೆಟ್ ಆರಂಭಿಸಿದರು. 2019 ರಲ್ಲಿ ವಿಶ್ವಕಪ್ ಗೆದ್ದ ನಂತರ ಬೆನ್ ಸ್ಟೋಕ್ಸ್ ಅವರು ಇಂಗ್ಲೆಂಡ್ ತಂಡದ ಹೀರೋ ಆಗಿ ಮಿಂಚಿದ್ದರು. ಒಂದೆರಡು ವರ್ಷಗಳ ಬೆನ್ ಸ್ಟೋಕ್ಸ್ ಅವರು ವಿಶ್ವಕಪ್ ಗೆದ್ದ ಹಿನ್ನೆಲೆ ವಿಶ್ರಾಂತಿ ಪಡೆದುಕೊಂಡರು. ಅವರ ಮೊದಲ ಇನ್ನಿಂಗ್ಸ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ 84 ರನ್ ಕಲೆ ಹಾಕಿ ಉತ್ತಮ ಬ್ಯಾಟ್ಸಮನ್ ಎಂದು ಕರೆಸಿಕೊಂಡರು. ಬೆನ್ ಸ್ಟೋಕ್ಸ್ ಅವರು ಇಂಗ್ಲೆಂಡ್ ತಂಡದ ಪರವಾಗಿ 104 ಪಂದ್ಯಗಳನ್ನ ಆಡಿದ್ದಾರೆ. ಅದರಲ್ಲಿ ಭಾರತ ತಂಡದ ವಿರುದ್ದ ಬೆನ್ ಸ್ಟೋಕ್ಸ್ ಅವರು ಏಕದಿನ ಸರಣಿ ಪಂದ್ಯದಲ್ಲಿ ನಲವತ್ತೆಂಟು ರನ್ ಬಾರಿಸಿದ್ದರು.

ಇದನ್ನ ಹೊರತುಪಡಿಸಿ ಬೆನ್ ಸ್ಟೋಕ್ಸ್ ಅವರು ಯಾವುದೇ ರೀತಿಯ ವಿಕೆಟ್ ಕಬಳಿಸಿರಲಿಲ್ಲ. ಇನ್ನು ಅವರೇ ಹೇಳಿಕೊಂಡಿರುವಂತೆ ಬೆನ್ ಸ್ಟೋಕ್ಸ್ ಅವರಿಗೆ ಇತ್ತೀಚೆಗೆ ತಮ್ಮನ್ನ ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಂತೆ. ಹಾಗಾಗಿ ಅವರು ಏಕದಿನ ಪಂದ್ಯಕ್ಕೆ ಸ್ವಯಂ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇಂದು ಅಂದರೆ ಮಂಗಳವಾರ ನಡೆದ ಸರಣಿಯ ಮೊದಲ ಪಂದ್ಯವೇ ಅವರ ಅಂತಿಮ ಏಕದಿನ ಪಂದ್ಯವಾಗಿರಲಿದೆ. ಬೆನ್ ಸ್ಟೋಕ್ಸ್ ಅವರಿಗೆ ಟೈ ಸೂಪರ್ ಓವರ್ ಮತ್ತು ಪಂದ್ಯ ಶ್ರೇಷ್ಟ ಪ್ರಶಸ್ತಿಗಳು ಲಭಿಸಿವೆ. 2019 ಮತ್ತು 2020 ರಲ್ಲಿ ಬೆನ್ ಸ್ಟೋಕ್ಸ್ ಅವರಿಗೆ ವಿಶ್ವದ ವಿಸ್ಡನ್ ಲೀಡಿಂಗ್ ಕ್ರಿಕೆಟಿಗ ಎಂಬ ಹೆಸರು ಬಂದಿದೆ. ಇದರ ಜೊತೆಗೆ ಬೆನ್ಸ್ ಸ್ಟೋಕ್ಸ್ ಅವರು 2019 ರಲ್ಲಿ ಅತ್ಯುತ್ತಮ ಪುರುಷರ ಕ್ರಿಕೆಟಿಗ ಮತ್ತು ಬಿಬಿಸಿ ವರ್ಷದ ಕ್ರೀಡಾ ವ್ಯಕ್ತಿತ್ವಕ್ಕಾಗಿ ಐಸಿಸಿ ಪ್ರಶಸ್ತಿ ಲಭಿಸಿದೆ. ಒಟ್ಟಾರೆಯಾಗಿ ಇದೀಗ ಬೆನ್ ಸ್ಪೋಕ್ಸ್ ಅವರು ಏಕದಿನ ಪಂದ್ಯಕ್ಕೆ ವಿದಾಯ ಹೇಳುತ್ತಿರುವುದು ಅವರ ಅಭಿಮಾನಿಗಳಿಗೆ ಬೇಸರದ ಸುದ್ದಿಯಾಗಿದೆ.

%d bloggers like this: