ಇಷ್ಟದ ಹುಡುಗಿ ಜೊತೆ ಹಸೆಮಣೆ ಏರಿದ ಆರ್ಸಿಬಿ ಸ್ಪಿನ್ ಮಾಂತ್ರಿಕ ಚಾಹಲ್

ಯಜುವೇಂದ್ರ ಚಾಹಲ್ ಆರ್ಸಿಬಿಯ ಪ್ರಮುಖ ಬೌಲರ್ ಹಾಗೂ ಭಾರತದ ಕ್ರಿಕೆಟ್ ತಂಡದ ಅತೀ ಮಹತ್ವದ ಆಟಗಾರ. ಹಲವಾರು ಸಲ ಆರ್ಸಿಬಿ ತಂಡದ ಗತಿಯನ್ನು ಬದಲಿಸಿ ಆರ್ಸಿಬಿ ಪರ ಪಂದ್ಯಗಳನ್ನು ತಮ್ಮ ಸ್ಪಿನ್ ಮೂಲಕ ಗೆದ್ದು ತೋರಿಸಿದ್ದಾರೆ. ಇದೀಗ ಚಾಹಲ್ ಬಾಳಲ್ಲಿ ಹೊಸ ಪಯಣ ಶುರುವಾಗಿದೆ ಅದುವೇ ಜೀವನದ ಎರಡನೇ ಇನ್ನಿಂಗ್ಸ್, ಹೌದು ಚಹಲ್ ಅವರು ಮದುವೆ ಆಗುತ್ತಿದ್ದಾರೆ. ಆರ್ಸಿಬಿ ಈ ಪ್ರಮುಖ ಆಟಗಾರ ಹಲವರು ಧನಶ್ರೀ ವರ್ಮ ಎಂಬ ಹುಡುಗಿಯನ್ನು ಮದುವೆಯಾಗುತ್ತಿದ್ದು ಇವರಿಬ್ಬರು ಕಳೆದ ಕೆಲ ತಿಂಗಳುಗಳಿಂದ ಪ್ರೀತಿಸುತ್ತಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಚಹಲ್ ಅವರು ಡ್ಯಾನ್ಸ್ ಕಲಿಯಲೆಂದು ಹೋದಾಗ ಅಲ್ಲಿಯೇ ಇದ್ದ ಧನಶ್ರೀ ವರ್ಮ ಅವರ ಜೊತೆ ಪರಿಚಯ ಆಗಿದೆ, ನಂತರ ಇವರಿಬ್ಬರು ಇಷ್ಟಪಟ್ಟು ಈಗ ಕೊನೆಗೂ ಹಸೆಮಣೆ ಏರುತ್ತಿದ್ದಾರೆ. ಅಸಲಿಗೆ ಧನಶ್ರೀ ವರ್ಮ ಅವರು ವೃತ್ತಿಯಲ್ಲಿ ವೈದ್ಯ ಹಾಗೂ ಕಲಿಸುವ ಟೀಚರ್ ಕೂಡ ಹೌದು. ಧನಶ್ರೀ ವರ್ಮ ಅವರನ್ನು ಇನ್ಸ್ಟಾಗ್ರಾಮ್ ಅಲ್ಲಿ ಸುಮಾರು 25ಲಕ್ಷಕ್ಕೂ ಅಧಿಕ ಅಭಿಮಾನಿಗಳು ಫಾಲೋ ಮಾಡುತ್ತಿದ್ದಾರೆ. ಮೊದಲಿನಿಂದಲೂ ಧನಶ್ರೀ ವರ್ಮ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಪೋಸ್ಟ್ಗಳನ್ನು ಹಾಕುತ್ತಿರುತ್ತಾರೆ. ಇನ್ನು ಚಹಲ್ ಅವರು ಬರೋಬ್ಬರಿ ಆರು ವರ್ಷಗಳಿಂದ ಆರ್ಸಿಬಿ ತಂಡದ ಪರ ಆಡುತ್ತಿದ್ದು ಹಾಗೂ ಲಕ್ಷಾಂತರ ಬೆಂಗಳೂರು ಅಭಿಮಾನಿಗಳನ್ನು ಹೊಂದಿದ್ದಾರೆ.

%d bloggers like this: