ಇಷ್ಟೆಲ್ಲಾ ಸಾಹಸ ಮಾಡೋ ಈ ‘ಬೇರ್ ಗ್ರಿಲ್ಸ್’ ಅವರಿಗೆ ಒಂದು ಎಪಿಸೋಡಿಗೆ ಇಷ್ಟು ಹಣ ಸಿಗುತ್ತದೆ

ಸಾಮಾನ್ಯವಾಗಿ ಮನುಷ್ಯ ಸಂಘ ಜೀವಿ, ಪ್ರತಿಯೊಬ್ಬರು ಕೂಡ ಮತ್ತೊಬ್ಬರ ಅವಲಂಬನೆಯಿಂದ ಬದುಕಬೇಕಾಗುತ್ತದೆ. ಅದು ಮನುಷ್ಯ ಅಥವಾ ಪ್ರಾಣಿ, ಪಕ್ಷಿಗಳು ಇರಬಹುದು. ನಿಸರ್ಗದಲ್ಲಿರುವ ಎಷ್ಟೋ ಪ್ರಾಣಿ, ಪಕ್ಷಿ ಸಂಕುಲಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ತಿಳಿಯದ ವಿಷಯ ಬಗ್ಗೆ ನಾವು ತಿಳಿದುಕೊಳ್ಳಬೇಕಾದರೆ ಒಂದಷ್ಟು, ಅಧ್ಯಾಯನ ಅಥವಾ ಪ್ರವಾಸ, ಸಂಶೋಧನೆಗಳ ಮೂಲಕ ತಿಳಿದುಕೊಳ್ಳಬಹುದು. ಆಧುನಿಕ ತಂತ್ರಜ್ಞಾನ ಬೆಳೆದಿರುವ ಇಂದಿನ ಯುಗಮಾನದಲ್ಲಿ ಮಾಧ್ಯಮಲೋಕ ಅತ್ಯಂತ ಪ್ರಭಾವ ಶಾಲಿ ಮಾಧ್ಯಮವಾಗಿದೆ. ಈ ಮಾಧ್ಯಮ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆಯುವುದು ಅಷ್ಟು ಸುಲಭವಾದ ಮಾತಲ್ಲ. ಅದಕ್ಕೆ ಆಳವಾದ ಅಧ್ಯಾಯನ, ಓದು, ಜ್ಞಾನಾರ್ಜನೆ ಅತ್ಯಗತ್ಯವಾಗಿದೆ. ಬರಹದಿಂದ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ ಎಂಬುದು ಕೆಲವರ ಅಭಿಪ್ರಾಯ.

ಆದರೆ ಇಂತಹ ಅಭಿಪ್ರಾಯಗಳಿಗೆ ವಿರುದ್ದವಾಗಿ ತನ್ನ ಬರಹ, ಓದು, ಸಂಶೋಧನೆ, ಸಾಹಸಮಯ, ವರದಿಗಾರಿಕೆಯಿಂದ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದಿರುವುದು ಇಂಗ್ಲೆಂಡಿನ ಬರಹಗಾರ, ನಿರೂಪಕ ಮತ್ತು ಉದ್ಯಮಿಯಾಗಿರುವ ಬೇರ್ ಗ್ರಿಲ್ಲ್ಸ್ ನಿಜಕ್ಕೂ ಮಾದರಿಯಾಗಿದ್ದಾರೆ. ಗ್ರಿಲ್ಲ್ಸ್ ಅವರು ಇಂಗ್ಲೆಂಡ್ ನಲ್ಲಿ ಯಂಗ್ ಸ್ಟರ್ ಚೆಫ್ ಸ್ಕೋಟ್ ಎಂದು ಖ್ಯಾತಿ ಪಡೆದಿದ್ದಾರೆ. ಇವರು ಮೊದಲನೇರ ಬಾರಿಗೆ ಫೇಸಿಂಗ್ ಅಪ್ ಎಂಬ ಪುಸ್ತಕ ಬರೆದರು, ತದ ನಂತರ ಫೇಸಿಂಗ್ ದಿ ಪ್ರೋಜ಼ನ್ ಎಂಬ ಪುಸ್ತಕ ಬರೆದು ಇದಕ್ಕೆ ವಿಲಿಯಮ್ ಹಿಲ್ ಸ್ಪೋರ್ಟ್ಸ್ ಬುಕ್ ಆಫ್ ದಿ ಇಯರ್ ಎಂಬ ಪ್ರಶಸ್ತಿ ಪಡೆದರು. ಇವರು 2011ರಲ್ಲಿ ಬಿಯರ್ಸ್ ವೈಲ್ಡ್ ವೀಕೆಂಡ್ ಎಂಬ ಕಾರ್ಯಕ್ರಮವನ್ನು ರೋಜ್ ಟು ರೇನ್ ಕಾಡಿನಲ್ಲಿ ನಡೆಸಿಕೊಟ್ಟರು.

ಈ ಕಾಡು ಅತ್ಯಂತ ಪ್ರಸಿದ್ದ ಮತ್ತು ಭಯಾನಕ ಪ್ರದೇಶ ಎಂದು ಹೇಳುತ್ತಾರೆ, ಇವರು ಪ್ರಮುಖವಾಗಿ ಜನಪ್ರಿಯವಾದ್ದು ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಮುಖಾಂತರ ಈ ಶೋದಲ್ಲಿ ನಿರ್ಜನ ಪ್ರದೇಶಗಳಲ್ಲಿ ಪ್ರಾಣಿ, ಪಕ್ಷಿಗಳು, ಕ್ರಿಮಿ ಕೀಟಗಳು ಹೇಗೆ ಬದುಕುತ್ತವೆ ಎಂಬುದನ್ನು ವಿಸ್ತಾರವಾಗಿ ತಿಳಿಸಿಕೊಡುತ್ತಿದ್ದಾರೆ. ಈ ಶೋ ಜಗತ್ತಿನಾದ್ಯಂತ ಹೆಚ್ಚು ಜನಪ್ರಿಯವಾಗಿದೆ. ಇವರ ಒಂದು ಎಪಿಸೋಡ್ ಸಂಭಾವನೆ ನಿಜಕ್ಕೂ ಆಶ್ಚರ್ಯಗೊಳಿಸುತ್ತದೆ. ಏಕೆಂದದೆ ಇವರ ಒಂದು ಎಪಿಸೋಡ್ ಸಂಭಾವನೆ ಬರೋಬ್ಬರಿ 25ಲಕ್ಷ ವಾಗಿದೆ. ಇವರ ಒಟ್ಟು ಆಸ್ತಿ 150 ಕೋಟಿಯಾಗಿದೆ. ಸಾಮಾನ್ಯ ಒಬ್ಬ ಟಿವಿ ಶೋ ನಿರೂಪಕ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ಆಶ್ಚರ್ಯದ ವಿಷಯವಾಗಿದೆ. ಆದರೆ ಒಂದು ಎಪಿಸೋಡಿಗೆ ಇಷ್ಟು ತೆಗೆದುಕೊಳ್ಳಲು ಈ ವ್ಯಕ್ತಿ ಅರ್ಹ ಯಾಕಂದರೆ ಇವರು ಮಾಡುವ ಸಾಹಸಗಳು ಸಾಮಾನ್ಯ ಜನರಿಗೆ ಸಾಧ್ಯವಿಲ್ಲ.

%d bloggers like this: