ಭಾರತದ ಮೊಟ್ಟ ಮೊದಲ ಮಹಿಳಾ ಪ್ರಧಾನ ಸೂಪರ್ ವುಮೆನ್ ಕಲ್ಪನಾಧಾರಿತ ಆನ ಸಿನಿಮಾ ಇಂದು ಅಂದರೆ ಡಿಸೆಂಬರ್ 17 ರಂದು ರಾಜ್ಯದ್ಯಂತ ಬಿಡುಗಡೆಯಾಗಿದೆ. ಆನ ಸಿನಿಮಾ ಎದುರು ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ನಟನೆಯ ಬಿಗ್ ಬಜೆಟ್ ನ ಪುಷ್ಪ ಸಿನಿಮಾ ಕೂಡ ಇಂದೇ ಬಿಡುಗಡೆಯಾದ ಕಾರಣ ಕನ್ನಡದ ಆನ ಚಿತ್ರಕ್ಕೆ ಅಪಾರ ನಷ್ಟವಾಗಿದೆ. ಬಿಗ್ ಸ್ಟಾರ್ ಕಾಸ್ಟ್ ಹೊಂದಿದ್ದ ಪುಷ್ಪ ಚಿತ್ರ ರಾಜ್ಯದ ಬಹುತೇಕ ಥಿಯೇಟರ್ ಗಳನ್ನ ಆವರಿಸಿಕೊಂಡಿತ್ತು. ಇದರಿಂದ ನಟಿ ಅಧಿತಿ ಪ್ರಭುದೇವ ಮುಖ್ಯಭೂಮಿಕೆಯ ಆನ ಚಿತ್ರಕ್ಕೆ ಥಿಯೇಟರ್ ಸಮಸ್ಯೆ ಆಗಿದೆ. ಕಳೆದ ವಾರ ತಾನೇ ಆನ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಟ್ರೇಲರ್ ನೋಡಿದ ಸಿನಿ ಪ್ರೇಕ್ಷಕರು ಈ ಆನ ಚಿತ್ರದ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು.

ಅಂತೆಯೇ ಈ ವಾರ ಈ ಆನ ಸಿನಿಮಾ ಬಿಡುಗಡೆಯಾಗಿದೆ. ಬಿಗ್ ಬಜೆಟ್ ಸ್ಟಾರ್ ನಟನ ಚಿತ್ರ ಅಂತ ಬಿಲ್ಡಪ್ ಕೊಟ್ಟ ಪುಷ್ಪ ಚಿತ್ರಕ್ಕೆ ಹೋಲಿಸಿದರೆ ಕನ್ನಡದ ನಟಿ ಅಧಿತಿ ಪ್ರಭುದೇವ ಅವರ ಆನ ಸಿನಿಮಾನೇ ವಾಸಿ ಎಂದು ಕನ್ನಡ ಸಿನಿ ಪ್ರೇಕ್ಷಕರು ಹೇಳುತ್ತಿದ್ದಾರೆ. ಆನ ಸಿನಿಮಾ ಇದೊಂದು ಹೊಸ ಪ್ರಯೋಗಾತ್ಮಕ ಚಿತ್ರ. ಸಸ್ಪೆನ್ಸ್, ಥ್ಲಿಲ್ಲರ್, ಹಾರರ್ ಕಥೆಯನ್ನೊಂದಿರುವ ಆನಾ ಚಿತ್ರ ಕೋವಿಡ್ ಲಾಕ್ ಡೌನ್ ಸಂಧರ್ಭದಲ್ಲಿ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಿದ್ದ ನಾಲ್ವರು ಯುವಕರು ಕಳ್ಳತನಕ್ಕಿಳಿದಾಗ ಅದರ ಪರಿಣಾಮ ಯಾವ ರೀತಿ ಆಗಿರುತ್ತದೆ ಎಂಬ ಎಳೆಯನ್ನಿಟ್ಟು ಕೊಂಡು ಒಂದು ಸೂಪರ್ ಪವರ್ ಹೊಂದಿರುವ ಮಹಿಳೆಯ ಪಾತ್ರವನ್ನು ಹೇಗೆಲ್ಲಾ ಕಥೆಯನ್ನ ಎಣೆಯಬಹುದೋ ಆ ರೀತಿಯಾಗಿ ನಿರ್ದೇಶಕರು ಆನ ಚಿತ್ರ ಮಾಡಿದ್ದಾರೆ.

ಆನ ಸಿನಿಮಾಗೆ ಮನೋಜ್ ಪಿ ನಡಲು ಮನೆ ಅವರು ಆಕ್ಷನ್ ಕಟ್ ಹೇಳಿದ್ದಾರೆ. ನಟಿ ಅಧಿತಿ ಪ್ರಭದೇವ ಕಣ್ಣಲ್ಲೇ ನಟಿಸುವ ಅಪ್ಪಟ ಕನ್ನಡದ ಪ್ರತಿಭೆ. ಈ ಆನ ಚಿತ್ರದಲ್ಲಿ ಅಧಿತಿ ಅವರಿಗೆ ಹೆಚ್ಚು ಡೈಲಾಗ್ ಇಲ್ಲದಿದ್ದರು ಕೂಡ ತನ್ನ ಕಣ್ಣಿನ ನಟನೆಯ ಮೂಲಕವೇ ಸಿನಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ನಿರ್ದೇಶಕರ ಈ ಸೂಪರ್ ವುಮೆನ್ ಕಾಲ್ಪನಿಕ ಕಥೆ ಅದ್ಭುತವಾಗಿದ್ದು, ಗ್ರಾಫಿಕ್ಸ್ ಕೆಲಸವನ್ನು ಕೊಂಚ ಅಚ್ಚು ಕಟ್ಟಾಗಿ ಬಳಸಿಕೊಂಡಿದ್ದರೆ ಆನ ಸಿನಿಮಾ ಕನ್ನಡದ ಒಂದು ಅತ್ಯುತ್ತಮ ಚಿತ್ರವಾಗುತ್ತಿದ್ದುರಲ್ಲಿ ಎರಡು ಮಾತಿಲ್ಲ.

ಯುಕೆ ಪ್ರೊಡಕ್ಷನ್ ಅಡಿಯಲ್ಲಿ ಪೂಜಾ ವಸಂತ ಕುಮಾರ್ ಎಂಬುವವರು ಈ ಆನ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಿತ್ವಿಕ್ ಮುರುಳಿಧರ್ ರಾಗ ಸಂಯೋಜನೆ ಮಾಡಿದ್ದು,ಉದಯ್ ಲೀಲಾ ಅ ವರ ಕ್ಯಾಮರಾ ವರ್ಕ್, ವಿಜೇತ್ ಚಂದ್ರ ಎಡಿಟಿಂಗ್ ವರ್ಕ್ ಮಾಡಿದ್ದಾರೆ. ಇನ್ನು ತಾರಾಗಣದಲ್ಲಿ ಆನ ಪಾತ್ರದಲ್ಲಿ ನಟಿ ಪ್ರಭುದೇವ, ಪ್ರಭುದೇವ ಅವರ ತಂದೆಯ ಪಾತ್ರದಲ್ಲಿ ಸುನೀಲ್ ಪುರಾಣಿಕ್ ನಟಿಸಿದ್ದಾರೆ. ಇತರೆ ಪಾತ್ರಗಳಲ್ಲಿ ಚೇತನ್ ಗಂಧರ್ವ, ರನ್ವಿತ್ ಶಿವಕುಮಾರ್, ವಿಕಾಸ್ ಉತ್ತಯ್ಯ, ವರುಣ್ ಅಮರಾವತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗರಾಜನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.