ಕ್ರಿಕೆಟಿಗ ಕೆ.ಎಲ್ ರಾಹುಲ್ ಬಾಲಿವುಡ್ ನಟಿ ಆತಿಯಾ ಶೆಟ್ಟಿಗೆ ಹುಚ್ಚು ಹುಡುಗಿ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆತಿಯಾ ಶೆಟ್ಟಿಗೂ ಕೆಎಲ್ ರಾಹುಲ್ ಗೂ ಏನಾದರೂ ಸಂಬಂಧ ಇದ್ಯಾ ಅಂತ ನೋಡಿದರೆ ಖಂಡಿತಾ ಹೌದು ಎನ್ನುತಿವೆ ಬಾಲಿವುಡ್ ಮೂಲಗಳು ಅಷ್ಟಕ್ಕೂ ಈ ನಟಿ ಕನ್ನಡದ ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಯವರ ಪುತ್ರಿ ಆತಿಯಾ ಶೆಟ್ಟಿ 2015ರಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರೂ ಹೇಳಿಕೊಳ್ಳುವಷ್ಟು ಯಶಸ್ಸು ಇನ್ನು ದಕ್ಕಿಲ್ಲ. ಇದುವರೆಗೂ ಆತಿಯಾ ಶೆಟ್ಟಿ ಮಾಡಿರುವ ಚಿತ್ರ 5 ಅದರಲ್ಲಿ ಒಂದು ಚಿತ್ರದಲ್ಲಿ ಅತಿಥಿ ಪಾತ್ರ ಇನ್ನು ಇವರಿಬ್ಬರು ಪ್ರೀತಿ ಪ್ರೇಮ ಪ್ರಣಯದಲ್ಲಿ ಮುಳುಗಿರುವುದು ಬಹಿರಂಗವಾಗಿದೆ. ಹಲವಾರು ಪಾರ್ಟಿಗಳಲ್ಲಿ ಈ ಜೋಡಿ ಜೊತೆಯಾಗಿ ಓಡಾಡಿದೆ ಒಂದಷ್ಟು ಪೋಟೋಗಳನ್ನು ಜೊತೆಜೊತೆಯಾಗಿ ತೆಗೆಸಿಕೊಂಡು ತಮ್ಮ ಖಾತೆಗಳಲ್ಲಿ ಆಗಾಗ ಒಬ್ಬರೊಬ್ಬರನ್ನು ಪ್ರೀತಿಯ ಮಾತುಗಳನ್ನು ಸೇರಿಸಿ ಆ ಪೋಟೋಗಳನ್ನು ಪೋಸ್ಟ್ ಕೂಡ ಮಾಡಿದ್ದಾರೆ.
ಕಳೆದ ವಾರ ನಟಿ ಆತಿಯಾ ಶೆಟ್ಟಿ ಹುಟ್ಟುಹಬ್ಬದ ದಿನವಾಗಿ ಕೆ.ಎಲ್ ರಾಹುಲ್ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಹುಚ್ಚು ಹುಡುಗಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಆತಿಯಾ ಶೆಟ್ಟಿಯವರ ಪೋಟೋ ಹಾಕಿ ಶುಭಾಶಯ ಕೋರಿದ್ದರು. ಆತಿಯಾ ಶೆಟ್ಟಿ ಕೂಡ ರಾಹುಲ್ ಹುಟ್ಟುಹಬ್ಬದಂದು ನನ್ನ ಹುಡುಗನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ರಾಹುಲ್ ಪೋಟೋ ಹಾಕಿ ಶುಭಾಶಯ ಕೋರಿದ್ದರು. ದೆಲ್ಲದರ ವಿಚಾರವಾಗಿ ಆತಿಯಾ ಶೆಟ್ಟಿ ತಂದೆ ನಟ ಸುನೀಲ್ ಶೆಟ್ಟಿ ಅವರು ಮಾತನಾಡಿ ಅವರಿಬ್ಬರು ಮದುವೆ ಆಗಬಹುದು ಎಂದು ಬಹಿರಂಗವಾಗಿಯೇ ಉತ್ತರಿಸಿದರು. ಇನ್ನು ಐಪಿಎಲ್ ನಲ್ಲಿ ಇದುವರೆಗೂ ಅತಿಹೆಚ್ಚು ರನ್ ಪಡೆದು ಆಸ್ಟ್ರೇಲಿಯಾ ಪ್ರವಾಸಕ್ಕೂ ರಾಹುಲ್ ಆಯ್ಕೆ ಯಾಗಿದ್ದು ನಂತರ ಇವರಿಬ್ಬರು ಮದುವೆ ಖಚಿತವಾದರೆ ಕ್ರಿಕೆಟ್ ಲೋಕದಲ್ಲಿ ಕೊಹ್ಲಿ ಅನುಷ್ಕಾ ಜೋಡಿ ನಂತರ ಮತ್ತೊಂದು ಜೋಡಿ ಆತಿಯಾಶೆಟ್ಟಿ ಮತ್ತು ಕೆಎಲ್ ರಾಹುಲ್ ಆಗಲಿದ್ದಾರೆ ಎನ್ನಲಾಗುತ್ತಿದೆ.