ಇವತ್ತಿನ ಅಮಾವಾಸೆಯ ನಂತರ ಈ ರಾಶಿಯವರಿಗೆ ಕುಬೇರ ಯೋಗ, ಅವಕಾಶಗಳನ್ನು ಕೈಬಿಡಬೇಡಿ

2021 ಹೊಸ ವರ್ಷದ ಮೊದಲ ಮಹಾ ಅಮವಾಸ್ಯೆಯ ದಿನವಾಗಿರುವ ಇಂದು(13) ರಾಶಿಚಕ್ರಗಳ ಮೇಲೆ ಗಂಭೀರ ಪ್ರಭಾವ ಬೀರುತ್ತದೆ, ಇಂದಿನಿಂದ ಈ ಆರು ರಾಶಿಯವರಿಗೆ ಕುಭೇರಾಗುವ ಯೋಗವಿದೆ. ಅವರಿಗೆ ಅನಿರೀಕ್ಷಿತವಾಗಿ ಶ್ರೀಮಂತರಾಗುವ ಸಂಧರ್ಭ ಒದಗಿಬರುತ್ತದೆ. ಆದರೆ ಈ ಸುಸಂಧರ್ಭ ಅರಿಯದ ಎಷ್ಟೋ ಜನರು ಮನೆಗೆ ಬಂದ ಭಾಗ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳದೆ ಆಲಸ್ಯ ಮಾಡಬಹುದಾಗಿದೆ. ಹಾಗಾದರೆ ಯಾವ ಯಾವ ರಾಶಿಯವರಿಗೆ ಈ ಅಮವಾಸ್ಯೆಯ ದಿನದಿಂದ ಅದೃಷ್ಟ, ಕುಭೇರ ಯೋಗ ಲಭಿಸುತ್ತದೆ ಎಂದು ತಿಳಿಯುವುದಾದರೆ. ರಾಶಿಚಕ್ರಗಳಲ್ಲಿ ಆದಿ ರಾಶಿಯಾಗಿರುವ ಮೇಷ ರಾಶಿಯವರಿಗೆ ಈ ಅಮವಾಸ್ಯೆಯ ಈ ದಿನದಿಂದ ಜೀವನದಲ್ಲಿ ಅಭೂತ ಪೂರ್ವವಾದ ಬದಲಾವಣೆ ಕಾಣಲಿದೆ.

ಇನ್ನು ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಅತ್ಯಧಿಕ ಆದಾಯ ಬರುತ್ತದೆ. ಪಿತ್ರಾರ್ಜಿತ ಆಸ್ತಿಗಳು ದಕ್ಕುತ್ತದೆ ಮತ್ತು ಕೋರ್ಟ್ ವ್ಯಾಜ್ಯಗಳಲ್ಲಿ ಜಯ ಸಿಕ್ಕಿ, ಆದಾಯದ ಮೂಲಗಳು ಹೆಚ್ಚಾಗಲಿವೆ. ಇನ್ನು ವರ್ಷಾನುಗಟ್ಟಲೆಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅನಾರೋಗ್ಯ ಪೀಡಿತ ಮನೆಯ ಹಿರಿಯ ಸದಸ್ಯರು ಚಮತ್ಕಾರದಂತೆ ಚೇತರಿಕೆ ಕಾಣಬಹುದು ಎಂದು ಜ್ಯೋತಿಷ್ಯವು ತಿಳಿಸುತ್ತಿದೆ.

ಕಟಕ: ಈ ಕಟಕ ರಾಶಿಯವರಿಗೆ ಇಂದಿನಿಂದ ಯೋಗದ ಪ್ರತಿಫಲ ದೊರೆಯುತ್ತದೆ. ಊಹೆ ಮಾಡಲಾಗದ ರೀತಿಯಲ್ಲಿ ಆರ್ಥಿಕ ಸಮಸ್ಯೆಗಳು ದೂರವಾಗಿ ಧನಪ್ರಾಪ್ತಿ ವಾಗುತ್ತದೆ. ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದವರಿಗೆ ತಮ್ಮ ಕನಸಿನ ಉದ್ಯೋಗ ದೊರೆಯುತ್ತದೆ. ಹೊಸ ವ್ಯಾಪಾರಕ್ಕೆ ಸಾಲ ಸೌಲಭ್ಯ ಸಿಗುತ್ತದೆ, ಸ್ನೇಹಿತರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಬೆಂಬಲ ದೊರೆಯುತ್ತದೆ. ಒಟ್ಟಾರೆಯಾಗಿ ಇಂದಿನಿಂದ ನಿಮ್ಮ ಅದೃಷ್ಟ ಖಲಾಯಿಸಲಿದೆ.

ಸಿಂಹ: ಈ ರಾಶಾಯವರಿಗೆ ನಿರೀಕ್ಷೆ ಮಾಡಿದ ಎಲ್ಲಾ ಯೋಜನೆಗಳು ಸಫಲವಾಗುತ್ತದೆ, ಇವರ ವ್ಯಕ್ತಿತ್ವ,ಆಕರ್ಷಕ ಮಾತಿನ ವೈಖರಿಗೆ ಎಲ್ಲರು ಇವರನ್ನು ಮೆಚ್ಚಿ ಇವರನ್ನು ಅನುಸರಿಸುವವರು ಹೆಚ್ಚಾಗುತ್ತಾರೆ. ಉನ್ನತ ಸ್ಥಾನ ಅಲಂಕರಿಸುವ ಯೋಗವಿದ್ದು, ಸಮಾಜದಲ್ಲಿ ಗೌರವ ಘನತೆ ಹೆಚ್ಚಾಗಲಿದೆ.

ತುಲಾ: ಈ ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ, ಅವಿವಾಹಿತರಿಗೆ ವಿವಾಹ ಯೋಗವಿದ್ದು, ಹೊಸ ಉದ್ಯೋಗಗಳ ಅವಕಾಶವಿರುತ್ತದೆ. ದಂಪತಿಗಳಲ್ಲಿ ಉತ್ತಮ ಭಾಂದವ್ಯ ಉಂಟಾಗುತ್ತದೆ. ಪ್ರೇಮಿಗಳಿಗೆ ಕುಟುಂಬದಲ್ಲಿ ಸಮ್ಮತ ಸಿಗುವಂತದ್ದು, ವಿವಾಹವಾಗುವ ಯೋಗವಿರುತ್ತದೆ.

ಕುಂಭ: ಈ ರಾಶಿಯವರಿಗೆ ಹೊಸ ವರ್ಷದ ಆರಂಭದಿಂದ ವರ್ಷದ ಅಂತಿಮವರೆಗೂ ಉತ್ತಮವಾಗಿದ್ದು, ಕುಭೇರಯೋಗವಿದೆ. ಆರ್ಥಿಕವಾಗಿ ಅದೃಷ್ಟ ಖುಲಾಯಿಸಿ, ಉನ್ನತ ಮಟ್ಟದಲ್ಲಿ ಅಧಿಕಾರಿ ಸ್ಥಾನ ಪಡೆಯಬಹುದು. ಅಂದು ಕೊಂಡ ಕೆಲಸದಲ್ಲಿ ಜಯ ಸಾಧಿಸಬಹುದಾಗಿದೆ. ದಾಂಪತ್ಯದಲ್ಲಿ ವಿರಸ ದೂರವಾಗಿ ಸುಖ, ಸಂತೋಷ, ಭಾಂದವ್ಯ ವೃದ್ದಿಯಾಗುತ್ತದೆ. ಸರ್ಕಾರಿ ಉದ್ಯೋಗ ಲಭಿಸುವ ಅವಕಾಶವಿದೆ.

ಮೀನ: ಮೀನ ರಾಶಿಯವರಿಗೆ ಇಂದಿನಿಂದ ಜೀವನದಲ್ಲಿ ಅದೃಷ್ಟದ ಸೂಚನೆಗಳು ಸಿಗುತ್ತವೆ. ಬಂದ ಅವಕಾಶವನ್ನು ಬಳಸಿಕೊಂಡರೆ ಉನ್ನತ ಸಾಧನೆ ಮಾಡಬಹುದಾಗಿದೆ. ತಾಳ್ಮೆ ಸಹನೆಯಿಂದ ಕಾರ್ಯದಲ್ಲಿ ಯಶಸ್ಸು ಸಾಧಿಸಬಹುದು. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಿಂದ ಭಾರಿ ಅದೃಷ್ಟ ಲಭಿಸುತ್ತದೆ‌. ಅನಿರೀಕ್ಷಿತ ವಾಗಿ ಭೇಟಿಯಾಗುವ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಧನ ಪ್ರಾಪ್ತಿ ಆಗುತ್ತದೆ. ಮಾನಸಿಕವಾಗಿ ಹೆಚ್ಚು ಧೃಡರಾಗುತ್ತೀರಿ. ಕುಟುಂಬದಲ್ಲಿ ನಿಮ್ಮ ಮೇಲಿನ ಗೌರವ ಹೆಚ್ಚಾಗಿ, ಸುಖ, ಸಂತೋಷ, ಸಮಾಜದಲ್ಲಿ ಸ್ಥಾನಮಾನ, ಮನ್ನಣೆ ಗೌರವ ಸಂಪಾದಿಸುತ್ತಾರೆ. ಒಟ್ಟಾರೆಯಾಗಿ ಮೀನರಾಶಿಯವರಿಗೆ ವಿಶೇಷ ವಾಗಿ ಲಕ್ಷ್ಮಿಯ ಕೃಪಾಕಟಾಕ್ಷ ದೊರೆಯುತ್ತದೆ.

%d bloggers like this: