ಇವುಗಳು ನಿಮ್ಮ ಕನಸಿನಲ್ಲಿ ಕಂಡರೆ ಜೀವನದಲ್ಲಿ ಬಹಳ ಬದಲಾವಣೆಗಳು ಆಗುವ ಸಾಧ್ಯತೆ ಹೆಚ್ಚು

ಜೀವನದಲ್ಲಿ ಪ್ರತಿಯೊಬ್ಬರು ಕೂಡ ಕನಸು ಕಾಣಬೇಕು. ಆ ಕನಸಿನ ಬೆನ್ನತ್ತಿ ಓಡಬೇಕು. ತಾವು ಕಂಡ ಆ ಕನಸನ್ನು ನನಸು ಮಾಡಿಕೊಂಡು ಜೀವನದಲ್ಲಿ ಸುಖ ಸಂತೋಷದಿಂದ ಬದುಕು ಸಾಗಿಸಬೇಕು. ಇದು ಬಹುತೇಕ ಹಿರಿಯರು ಹೇಳುವ ಮಾತು. ಅದರಂತೆ ಈ ಕನಸು ಎಂಬುದು ಮಲಗಿದ್ದಾಗ ಪ್ರತಿಯೊಬ್ಬರಿಗೂ ಗೋಚರಿಸುತ್ತದೆ. ಕೆಲವರಿಗೆ ಬಹಳ ಅತ್ಯತ್ತಮ ಕನಸುಗಳು ಬೀಳುತ್ತವೆ. ಆದರೆ ಕೆಲವರಿಗೆ ಭಯಾನಕ, ನಕರಾತ್ಮಕ ಕನಸುಗಳು ಬೀಳುತ್ತವೆ. ಕನಸು ಬಿದ್ದರೆ ಅಂತಾದ್ದೇನು ಆಗುವುದಿಲ್ಲ. ಅದು ಕೇವಲ ಮೂಢನಂಬಿಕೆಯ ಪರಮಾವಧಿ ಅಷ್ಟೇ ಎಂದು ಒಂದಷ್ಟು ಮಂದಿ ಅದರ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿರುವುದು ಕೂಡ ಉಂಟು.

ಅದೇ ರೀತಿಯಾಗಿ ಈ ಬೆಳಿಗ್ಗೆ ಸಮಯ ಅಂದರೆ ಸರಿ ಸಮಯ ಮೂರರಿಂದ ಆರು ಗಂಟೆಯ ನಡುವೆ ಬೀಳುವ ಕನಸುಗಳು ನಿಜ ಜೀವನದಲ್ಲಿ ಸತ್ಯವಾಗುತ್ತವೆ ಎಂದು ಹೇಳುತ್ತಾರೆ. ಆದರೆ ಅದು ಎಷ್ಟರ ಮಟ್ಟಿಗೆ ನಿಜ ಎಂಬುದು ಮಾತ್ರ ತಿಳಿಯುವುದಿಲ್ಲ. ಜ್ಯೋತಿಷ್ಯ ಪಂಡಿತರು ಹೇಳುವ ಪ್ರಕಾರ ಯಾರೇ ವ್ಯಕ್ತಿಗೆ ಈ ರೀತಿಯ ಪ್ರಾಣಿ ಪಕ್ಷಿ ಅಥವಾ ವಸ್ತುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಆ ವ್ಯಕ್ತಿಯು ಜೀವನದಲ್ಲಿ ಉತ್ತುಂಗ ಸ್ಥಾನಕ್ಕೆ ಹೋಗುತ್ತಾನೆ ಎಂದು ಹೇಳುತ್ತಾರೆ. ಹಾಗಾದರೆ ಯಾವ ರೀತಿಯ ಕನಸುಗಳು ಕಂಡರೆ ಆ ವ್ಯಕ್ತಿ ಯಶಸ್ವಿ ಅಭಿವೃದ್ದಿ ಅಗುತ್ತಾನೆ ಎಂಬುದನ್ನ ತಿಳಿಯೋಣ. ಈ ಕನಸುಗಳು ರಾತ್ರಿಯ ಸಮಯದಲ್ಲಿ ಮಾತ್ರ ಬೀಳುವುದಿಲ್ಲ. ಹಗಲಲ್ಲಿ ಮಲಗಿದ್ದಾಗಲು ಕೂಡ ಕನಸು ಬೀಳುತ್ತವೆ.

ಈ ಕನಸುಗಳು ಎಲ್ಲಾರಿಗೂ ಒಂದೇ ರೀತಿ ಇರುವುದಿಲ್ಲ. ಒಬ್ಬರಿಂದ ಮತ್ತೊಬ್ಬರಿಗೆ ವಿಭಿನ್ನವಾಗಿ ಕನಸುಗಳು ಬೀಳುತ್ತವೆ. ಈ ಕನಸುಗಳು ಮುಂದೆ ಜೀವನದಲ್ಲಿ ಘಟಿಸಬಹುದಾದ ಮುನ್ಸೂಚನೆ ಎಂದು ಹೇಳಲಾಗುತ್ತದೆ. ಹೌದು ಯಾವ ವ್ಯಕ್ತಿಗೆ ಕನಸಿನಲ್ಲಿ ಬಿಳಿ ಆನೆಯ ಛಾಯಾಚಿತ್ರ ತಮ್ಮ ಕಣ್ಮಂದೆ ಬಂದೋದಂತೆ ಭಾಸವಾಗುವ ರೀತಿಯ ಕನಸು ಬೀಳುತ್ತದೆಯೋ ಅವರಿಗೆ ಪುಣ್ಯದ ಫಲ ಪ್ರಾಪ್ತವಾಗುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಬಿಳಿಯ ಆನೆಯು ಕಂಡರೆ ಅದು ರಾಜಯೋಗ ಲಭಿಸುವ ಸೂಚನೆ ಎಂದೂ ಸಹ ಹೇಳುತ್ತಾರೆ. ಇನ್ನು ಸುಬ್ರಮಣ್ಯ ಸ್ವಾಮಿಯ ವಾಹನ ಆಗಿರುವ ಈ ನವಿಲು ಏನಾದರು ಕನಸಿನಲ್ಲಿ ಕಾಣಿಸಿಕೊಂಡರೆ ಅಂತಹ ವ್ಯಕ್ತಿಯ ಮನೆಯಲ್ಲಿ ಸುಖ ಸಂತೋಷ ಶಾಂತಿ ನೆಮ್ಮದಿ ನೆಲೆಸಿ ಆ ಮನೆಯು ಆರ್ಥಿಕವಾಗಿ ಸಮೃದ್ದಿಯಾಗುತ್ತದೆ ಎಂಬ ನಂಬಿಕೆಯನ್ನಿಟ್ಟಿದ್ದಾರೆ.

ಇದೇ ನವಿಲು ಮೇಲೆ ಪ್ರಭಾವಶಾಲಿ ದೇವರಾಗಿರುವ ಶನಿದೇವ ಏನಾದರು ಕುಳಿತುಕೊಂಡಿರುವಂತೆ ಕನಸು ಕಾಣಿಸಿಕೊಂಡರೆ ಆ ವ್ಯಕ್ತಿಯ ಜೀವನದಲ್ಲಿ ಬಹುದೊಡ್ಡ ತಿರುವು ಪಡೆಯಲಿದೆ ಎಂದು ಈ ಸ್ವಪ್ನಶಾಸ್ತ್ರದಲ್ಲಿ ತಿಳಿಸಲಾಗಿದೆ. ಇನ್ನು ಕನಸಿನಲ್ಲಿ ನದಿ ಕಾಣಿಸಿಕೊಂಡರೆ ಆ ವ್ಯಕ್ತಿಯ ಜೀವನದಲ್ಲಿ ಹಣ, ಅಧಿಕಾರ, ಯಶಸ್ಸು ಎಂಬುದು ನಿರಂತರವಾಗಿ ನದಿಯ ನೀರಿನಂತೆ ನಿರಂತರವಾಗಿ ಹರಿಯುತ್ತಿರುತ್ತದೆಯಂತೆ. ಒಂದು ವೇಳೆ ಅಶ್ವ ಅಂದರೆ ಕುದುರೆ ಓಡುತ್ತಿರುವ ಕನಸು ಕಾಣಿಸಿಕೊಂಡರೆ ನಿಮಗೆ ಆ ದಿನ ಸಂಪತ್ತು ನಿರೀಕ್ಷೆ ಮಾಡಲಾಗದಷ್ಟು ಹರಿದು ಬರಲಿದೆ ಎಂಬ ಸಂಕೇತವಾಗಿರುತ್ತದೆಯಂತೆ. ಅದೇ ರೀತಿಯಾಗಿ ಬಿಳಿ ಗೂಬೆ ಕನಸಿನಲ್ಲಿ ಕಾಣಿಸಿಕೊಂಡರೆ ನಿಮಗೆ ಲಕ್ಷ್ಮಿ ಕೃಪಾಕಟಾಕ್ಷ ಆಗಲಿದೆ ಎಂದು ಸ್ವಪ್ನ ಶಾಸ್ತ್ರದಲ್ಲಿ ತಿಳಿಸಲಾಗಿದೆ.

%d bloggers like this: