ಸಂಜನಾ ಗಲ್ರಾನಿಗೆ ಜೈಲಿನಿಂದ ಬಿಡುಗಡೆಯಾದರು ಸಹ ತಪ್ಪದ ಸಂಕಷ್ಟ! ಹೌದು ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅವರು ಡ್ರ-ಗ್ಸ್ ಪ್ರಕರಣದಲ್ಲಿ ಸಿಲುಕಿ ಕನ್ನಡ ಚಿತ್ರರಂಗದ ಹಲವರಿಗೆ ಆಶ್ಚರ್ಯ ಆಗಿತ್ತು. ಕನ್ನಡ ಚಲನಚಿತ್ರ ರಂಗಕ್ಕೆ ದಶಕದ ಹಿಂದೆ ಗಂಡ ಹೆಂಡತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು. ಇದಾದ ಬಳಿಕ ಕನ್ನಡ ಸಿನಿಮಾ ಗಳಲ್ಲಿ ಅವಕಾಶ ಕಡಿಮೆ ಆದ್ದರಿಂದ ತೆಲುಗು ತಮಿಳು ಇತರ ಭಾಷೆಗಳಲ್ಲಿ ತೊಡಗಿಸಿಕೊಂಡರು. ಅಲ್ಲಲ್ಲಿ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ತದ ನಂತರ ತಮ್ಮದೇ ಆದಂತಹ ವ್ಯವಹಾರಗಳಲ್ಲಿ ತೊಡಿಗಿಕೊಂಡಿದ್ದರು. ಏರೋಬಿಕ್ಸ್, ಯೋಗ ಅಂತಹ ಸೆಂಟರ್ಗಳನ್ನು ತೆರೆದು ಆರಾಮಾಗಿದ್ದರು. ಆದರೆ ಡ್ರ-ಗ್ಸ್ ಪ್ರಕರಣದಲ್ಲಿ ಸಿಲುಕಿ ತಿಂಗಳು ಗಟ್ಟಲೆ ಆರೋಪಿಯಾಗಿ ಜೈಲು ಸೇರಿದ್ದರು. ಇದೀಗ ಜಾಮೀನಿನ ಮೇಲೆ ಬಿಡುಗಡೆಗೊಂಡು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅದು ಸಹ ಮತಾಂತರ ವಿಚಾರದಲ್ಲಿ ಸಂಜನಾ ಗಲ್ರಾನಿ ಯವರು 2018ರಲ್ಲಿ ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು ಮಹಿರಾ ಎಂದು ಬದಲಾಯಿಸಿ ಕೊಂಡು ಅಜೀಜ್ ಪಾಷಾ ಎಂಬ ವೈದ್ಯರನ್ನು ಮದುವೆಯಾಗಿದ್ದಾರೆ. ಇದೇ ವಿಚಾರವಾಗಿ ಎನ್. ಪಿ.ಅಮೃತೇಶ್ ಎಂಬ ವಕೀಲರು ಸ್ವಯಂ ಪ್ರೇರಿತವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಪೊಲೀಸರಿಗೆ ಸಂಜನಾ ಗಲ್ರಾನಿ ಅವರನ್ನು ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂದು ಮತಾಂತರ ಮಾಡಿದ ಮೌಲ್ವಿಯ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿ ದೂರು ನೀಡಿದ್ದಾರೆ.