ಜಗತ್ತಿಗೆ ವಿಶ್ವ ಸಂಸ್ಥೆಯಿಂದ ಎಚ್ಚರಿಕೆಯ ಗಂಟೆ

ವಿಶ್ವದ ಘಟಾನುಘಟಿ ನಾಯಕರಿಗೆ ವಿಶ್ವ ಸಂಸ್ಥೆಯಿಂದ ಎಚ್ಚರಿಕೆ!ಕೊರೋನ ವೈರಸ್ ಪರಿಣಾಮ ದೇಶದ ಅರ್ಥವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿದ್ದು,ಜನರ ಜೀವನಮಟ್ಟ ಅಧೋಗತಿಗೆ ತಲುಪಿದೆ ಎಲ್ಲೆಂದರಲ್ಲಿ ನಿರೋದ್ಯೋಗದ ಆಹಾಕಾರ ಹಣದ ಅಭಾವ ಹೀಗೆ ಯುವಕರಿಗೆ ಮಾರಕವಾಗಿ ಪರಿಣಮಿಸಿದೆ ಈ ಕೋವಿಡ್ 19.ಅಷ್ಟೇ ಅಲ್ಲದೆ ಮುಂದಿನ ಸಾಂಕ್ರಮಿಕ ಯಾವುದು, ಎಲ್ಲಿ,ಹೇಗೆ? ಬರುತ್ತದೆ ಎಂಬುದು ನಮಗೆ ತಿಳಿಯದೇ ಇರುವ ಸಂಗತಿ ಆದ್ದರಿಂದ ದೇಶದ ವಿವಿಧ ವಿಜ್ಞಾನ ಮತ್ತು ತಂತ್ರಜ್ಞಾನ,ಸಂಶೋಧನ ಅಭಿವೃದ್ದಿ ಪಡಿಸುವಲ್ಲಿ ವೈದ್ಯಕೀಯ ವಿಭಾಗಗಳಗೆ ಹೆಚ್ಚೆಚ್ಚು ಗಮನ ಹರಿಸಬೇಕು,ದೇಶದ ಸುಸ್ಥಿರ ಅಭಿವೃದ್ದಿ ನಿಂತಿರುವುದು ಆರ್ಥಿಕತೆಯ ಜೊತೆಗೆ ಆರೋಗ್ಯ ಪ್ರಮುಖವಾಗಿದೆ. ಮೂಲಭೂತವಾಗಿ ದೇಶದಲ್ಲಿ ಇವೆರಡರ ನಿರ್ಲಕ್ಷ್ಯ ಮಾಡಿದರೆ ದೇಶದ ಅಡಿಪಾಯವೇ ನಲುಗುತ್ತದೆ ಎಂದು ವಿಶ್ವದ ನಾಯಕರಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕಳೆದ ವಾರ ನಡೆದ 73ನೇಯ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಸೇರಿದ ಎಲ್ಲಾ ದೇಶಗಳ ಪ್ರಮುಖ ನಾಯಕರೊಂದಿಗೆ ಕೊರೋನ ವೈರಸ್ ಗೆ ಸಂಬಂಧಿಸಿದ ಲಸಿಕೆ ಮತ್ತು ಸಾಂಕ್ರಾಮಿಕ ರೋಗದ ನಿರ್ವಹಣೆಯ ಬಗ್ಗೆ ವಿಸ್ತ್ರತ ಚರ್ಚಿಸಲಾಗಿದೆ.

ಈ ಕೋವಿಡ್ 19 ಅನ್ನು ಹೆಚ್ಛು ಹರಡಲು ಬಿಡದೇ ಸಮರ್ಪಕವಾಗಿ,ಮುನ್ನೆಚ್ಚರಿಕ ಕ್ರಮವಾಗಿ ಯಾವೆಲ್ಲಾ ದೇಶಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದವೋ ಆ ದೇಶಗಳಿಗೆ ಅಭಿನಂದನೆ ಸಲ್ಲಿಸಿತು. ಭವಿಷ್ಯದ ಕುರಿತು ವಿಚಾರ ಮಂಡಿಸುತ್ತಾ ಜಗತ್ತು ಮುಂದಿನ ದಿನಮಾನಗಳಲ್ಲಿ ಸಾಂಕ್ರಾಮಿಕ ರೋಗಗಳಿಗೆ ಸೆಡ್ಡು ಹೊಡೆಯಬೇಕಾದರೆ ನಾವು ವಿಜ್ಞಾನ ಪರಿಹಾರ ಮತ್ತು ಒಗ್ಗಟ್ಟಿನ ಮಂತ್ರ ಬಹಳ ಅವಶ್ಯಕ ಎಂದು ದೇಶಗಳ ನಡುವೆ ಸೌಹಾರ್ದತೆಯ ಮಹತ್ವ ತಿಳಿಸಿತು.ಹಾಗೇ ಕೋವಿಡ್ 19 ಗೆ ಅಭಿವೃದ್ದಿ ಪಡಿಸುತ್ತಿರುವ ಲಸಿಕೆಯಲ್ಲಿ ಯಾವುದೇ ರೀತಿಯ ರಾಜಕೀಯ ಮಾಡದೇ ಎಲ್ಲಾ ದೇಶದ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಮಾನತೆಯ ಆಧಾರದ ಮೇಲೆ ಲಸಿಕೆಯನ್ನು ಹಂಚಿಕೆ ಮಾಡಬೇಕು ಎಂದು ಕಿವಿಮಾತನ್ನು ವಿಶ್ವ ಆರೋಗ್ಯ ಸಂಸ್ಥೆಯು ನಡೆದ ಸಭೆಯಲ್ಲಿ ಎಲ್ಲಾ ದೇಶಗಳ ನಾಯಕರಿಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿವೆ.

%d bloggers like this: