ಜಗತ್ತಿಗಿಂತ ಭಿನ್ನವಾಗಿದ್ದ ದುಬೈ ನಿಯಮ, ಇನ್ನುಮೇಲಿಂದ ಎಲ್ಲ ದೇಶಗಳ ಹಾಗೆ ನಿಯಮ ಪಾಲಿಸಲಿರುವ ದುಬೈ

ಭಾರತ ದೇಶವನ್ನೂ ಒಳಗೊಂಡಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಶನಿವಾರ ಮತ್ತು ಭಾನುವಾರ ದಿನಗಳನ್ನು ವಾರಾಂತ್ಯದ ದಿನಗಳನ್ನಾಗಿ ಮಾಡಕೊಂಡಿದ್ದಾವೆ. ಆದರೆ ದುಬೈ ದೇಶ ಮಾತ್ರ ಶನಿವಾರ ಮತ್ತು ಭಾನುವಾರ ವೀಕೆಂಡ್ ಪದ್ದತಿ ಪಾಶ್ಚಮಾತ್ಯದ್ದು ಎಂದು ಈ ಪಾಲಿಸದೇ ಇಷ್ಟು ವರ್ಷಗಳ ಕಾಲ ಶುಕ್ರವಾರ ಮತ್ತು ಶನಿವಾರದ ದಿನಗಳನ್ನ ವೀಕೆಂಡ್ ಎಂದು ಪಾಲಿಸಿಕೊಂಡು ಬಂದಿತ್ತು. ಮೊದಲಿಗೆ ಈ ವೀಕೆಂಡ್ ಹಾಲಿಡೇ ಮಾಡಿರುವ ಉದ್ದೇಶಗಳನ್ನ ತಿಳಿಯುವುದಾದರೆ. ವಾರ ಪೂರ ದುಡಿಯುವ ಉದ್ಯೋಗಿಗಳು ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನವನ್ನು ಕೂಡ ಉತ್ತಮವಾಗಿ ಸರಿದೂಗಿಸಿಕೊಂಡು ಸಮತೋಲನವಾಗಿ ನಿರ್ವಹಿಸಿಕೊಳ್ಳುವುದಕ್ಕೆ ಈ ವಾರಾಂತ್ಯದ ದಿನಗಳನ್ನು ಬಳಸಿಕೊಂಡು ತಮ್ಮ ಕೌಟಂಬಿಕ ಜೀವನದೊಟ್ಟಿಗೂ ಸಮಯ ಕಳೆಯಲು ಅವಕಾಶ ಆಗಬೇಕು ದುಡಿರುವ ವರ್ಗಕ್ಕೆ ವಿಶ್ರಾಂತಿ ಅಗತ್ಯ ಎಂಬ ಸದುದ್ದೇಶದಿಂದ ಪಾಲಿಸಿಕೊಂಡು ಬಂದಿರುತ್ತದೆ.

ಅದರಂತೆ ಜಗತ್ತಿನ ಅನೇಕ ರಾಷ್ಟ್ರಗಳು ಕೂಡ ಈ ಶನಿವಾರ ಮತ್ತು ಭಾನುವರ ದಿನವನ್ನು ವೀಕೆಂಡ್ ಪದ್ದತಿಯನ್ನು ಅನುಸರಿಕೊಂಡು ಬರುತ್ತಿದೆ. ಇದೀಗ ಯನೈಟೆಡ್ ಅರಬ್ ಎಮಿರೇಟ್ಸ್ ದೇಶ ಕೂಡ ತನ್ನ ಹಳೆಯ ವಾರಾಂತ್ಯದ ದಿನ ಶುಕ್ರವಾರ ಮತ್ತು ಶನಿವಾರ ದಿನವನ್ನ ಭಾನುವಾರದವರೆಗೆ ವಿಸ್ತರಿಸಿಕೊಂಡಿದೆ. ಯುಎಇ ರಾಜಧಾನಿ ಅಬುಧಾಬಿಯಲ್ಲಿ ಉತ್ಪಾದಕತೆಯನ್ನು ಸುಧಾರಿಸುನ ನಿಟ್ಟಿನಲ್ಲಿ ಉದ್ಯೋಗಿಗಳಿಗೆ ಸ್ನೇಹಪರ ವಾತಾವರಣ ನಿರ್ಮಾಣ ಮಾಡುವ ಜವಾಬ್ಧಾರಿ ಸಂಸ್ಥೆಗಳದ್ದು. ಹಾಗಾಗಿ ಉದ್ಯೋಗಿಗಳಿಗೆ ಅನೂಕೂಲವಾಗುವಂತೆ ವಾರದ ನಾಲ್ಕುವರೆ ದಿನಗಳು ಮಾತ್ರ ಕೆಲಸದ ಸಮಯವಾಗಿ ನೂತನ ವೇಳಾಪಟ್ಟಿಯನ್ನು ಯುಎಇ ಸರ್ಕಾರ ಹೊರಡಿಸಿದೆ. ಈ ಹೊಸ ನಿಯಮ 2022 ವರ್ಷದ ಜನವರಿ ತಿಂಗಳಿನಿಂದ ಅನುಷ್ಠಾನಕ್ಕೆ ಬರಲಿದೆಯಂತೆ.

ಹೊಸ ವೇಳಾಪಟ್ಟಿಯಂತೆ ಕೆಲಸದ ಸಮಯ ಸೋಮವಾರದಿಂದ ಗುರುವಾರದವರೆಗೆ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 3.30 ರವರೆಗೆ ಇರುತ್ತದೆಯಂತೆ. ಶುಕ್ರವಾರದಂದು ಇತರೆ ಧರ್ಮದವರಿಗೆ ಧರ್ಮೋಪದೇಶಗಳು ಮತ್ತು ಪ್ರಾರ್ಥನೆಗಳಿರುವುದರಿಂದ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಕೆಲಸದ ಸಮಯವನ್ನು ನಿಗದಿ ಪಡಿಸಿ ಯುಎಇ ಸರ್ಕಾರ ಪ್ರಕಟಣೆ ಹೊರಡಿಸಿದೆ. ಈ ಹೊಸ ಕೆಲಸದ ವೇಳಾಪಟ್ಟಿಯನ್ನು ಪ್ರಾಯೋಗಿಕವಾಗಿ ಮೊದಲು ಸರ್ಕಾರಿ ಕಛೇರಿಗಳು, ಶಾಲಾ ಕಾಲೇಜುಗಳಲ್ಲಿ ಅನುಷ್ಠಾನ ಮಾಡಲಿದೆಯಂತೆ. ಒಟ್ಟಾರೆಯಾಗಿ ಇನ್ಮುಂದೆ ದುಬೈ ದೇಶದಲ್ಲಿ ವಾರದಲ್ಲಿ ನಾಲ್ಕು ವರೆ ದಿನ ಮಾತ್ರ ಕೆಲಸವಾಗಿದ್ದು ಉಳಿದ ಎರಡು ವರೆ ದಿನಗಳು ವೀಕೆಂಡ್ ದಿನಗಳಾಗಿವೆ. ಇದು ದುಬೈ ದೇಶದ ಜನರಿಗೆ ಅತ್ಯಂತ ಸಂತಸದ ಸುದ್ದಿಯಾಗಿದೆ.

%d bloggers like this: