ಜಗತ್ತಿನ ದುಬಾರಿ ನಟನಿಗೆ ಗಾಳ ಹಾಕಿದ ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕರು

ಬಾಹುಬಲಿ ಖ್ಯಾತಿಯ ಎಸ್ ಎಸ್ ರಾಜಮೌಳಿ ಅತ್ಯಂತ ಪ್ರಭಾವಶಾಲಿ ನಿರ್ದೇಶಕರು ಎಂದರೆ ತಪ್ಪಾಗಲಾರದು. ಇವರ ಚಿತ್ರಗಳಲ್ಲಿ ನಟಿಸಬೇಕು ಎಂಬುದು ಎಷ್ಟೋ ಸ್ಟಾರ್ ನಟರ ಆಸೆ. ದೊಡ್ಡ ದೊಡ್ಡ ಸ್ಟಾರ್ ನಟರು ಕೂಡ ಇವರ ಸಿನಿಮಾಗಳಲ್ಲಿ ನಟಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಾರೆ. ಏಕೆಂದರೆ ಇವರ ಸಿನಿಮಾಗಳಲ್ಲಿ ಒಂದು ಬಾರಿ ನಟಿಸಿದರೆ ಸಾಕು. ಮುಂದಿನ ಹತ್ತು ವರ್ಷಗಳವರೆಗೆ ಸ್ಟಾರ್ ಡಮ್ ಗಿಟ್ಟಿಸಿಕೊಳ್ಳಬಹುದು. ಇವರು ಮಾಡುವ ಚಿತ್ರಗಳೇ ಹಾಗೆ. ಹಿಂದೆ ಯಾರೂ ಮಾಡಿರದಂತಹ ಅದ್ಭುತ ಚಿತ್ರಗಳನ್ನು ರಾಜಮೌಳಿ ಭಾರತದ ಸಿನಿ ಇಂಡಸ್ಟ್ರಿಗೆ ನೀಡುತ್ತಿದ್ದಾರೆ. ರಾಜಮೌಳಿ ಅವರು ಮೂಲತಹ ಕರ್ನಾಟಕದ ರಾಯಚೂರಿನ ವರಾದರೂ, ತೆಲುಗು ಇಂಡಸ್ಟ್ರಿಯಲ್ಲಿ ಸೆಟಲ್ ಆಗಿದ್ದಾರೆ. ಬಾಲಿವುಡ್ ಸ್ಟಾರ್ ನಟರು ಕೂಡ ರಾಜಮೌಳಿ ಅವರ ನಿರ್ದೇಶನದಲ್ಲಿ ಕೆಲಸ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ.

ಬಾಹುಬಲಿ ಚಿತ್ರ ವಿಶ್ವದಾದ್ಯಂತ ಮಾಡಿರುವ ಸಕ್ಸಸ್ ನಂತರ, ರಾಜಮೌಳಿಯವರು ಜೂನಿಯರ್ ಎನ್.ಟಿ.ಆರ್, ರಾಮಚರಣ್, ಬಾಲಿವುಡ್ ಬೆಡಗಿ ಆಲಿಯಾ ಭಟ್, ಅಜಯ್ ದೇವಗನ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಸಕ್ಕತ್ ಹೈಪ್ ಕ್ರಿಯೇಟ್ ಮಾಡಿರುವ ತ್ರಿಬಲ್ ಆರ್ ಸಿನಿಮಾಗಾಗಿ ಜನರು ಕಾದು ಕುಳಿತಿದ್ದಾರೆ. ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು ರಿಲೀಸ್ ಗಾಗಿ ಸಜ್ಜಾಗುತ್ತಿದ್ದಾರೆ. ಈಗಾಗಲೇ ತ್ರಿಬಲ್ ಆರ್ ಸಿನಿಮಾದಿಂದ ಸುದ್ದಿಯಲ್ಲಿರುವ ರಾಜಮೌಳಿಯವರು ಮತ್ತೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಹೌದು ತ್ರಿಬಲ್ ಆರ್ ಸಿನಿಮಾದ ರಿಲೀಸ್ ಗೂ ಮುನ್ನ ಪ್ರೀ ರಿಲೀಸ್ ಕಾರ್ಯಕ್ರಮ ಮಾಡಲಾಗುತ್ತಿದೆ. ದುಬೈನಲ್ಲಿ ನಡೆಯುತ್ತಿರುವ ತ್ರಿಬಲ್ ಆರ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿ ಯೊಬ್ಬರನ್ನು ಆಹ್ವಾನ ಮಾಡಿ ರಾಜಮೌಳಿ ಸುದ್ದಿಯಲ್ಲಿದ್ದಾರೆ. ಒಂದು ಚಿತ್ರದ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಗಳು ಬರುವುದು ಸಾಮಾನ್ಯ.

ಇದರಲ್ಲೇನು ವಿಶೇಷವಿದೆ ಎಂದು ಯೋಚಿಸುತ್ತಿದ್ದೀರಾ ಮುಂದೆ ಓದಿ. ತ್ರಿಬಲ್ ಆರ್ ಚಿತ್ರದ ರಿಲೀಸ್ ದಿನಾಂಕ ಏಪ್ರಿಲ್ 24ಕ್ಕೆ ಫಿಕ್ಸ್ ಆಗಿದೆ. ಬಾಹುಬಲಿ, ತ್ರಿಬಲ್ ಆರ್ ಚಿತ್ರಗಳ ಮೂಲಕ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ಧೂಳೆಬ್ಬಿಸಿದ ನಿರ್ದೇಶಕ ರಾಜಮೌಳಿಯವರ ದೃಷ್ಟಿ ಈಗ ಹಾಲಿವುಡ್ ನಟರತ್ತ ನೆಟ್ಟಿದೆ. ಹೌದು ಜಗತ್ತಿನ ಅತ್ಯಂತ ದುಬಾರಿ ಹಾಲಿವುಡ್ ನಟ ಟಾಮ್ ಕ್ರೂಸ್ ಅವರನ್ನು ದುಬೈನಲ್ಲಿ ನಡೆಯುವ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನ ನೀಡಲು ರಾಜಮೌಳಿ ನಿರ್ಧರಿಸಿದ್ದಾರಂತೆ. ಹಾಲಿವುಡ್ ನ ಹಾಂಡ್ಸೋಮ್ ಹಂಕ್ ಎಂದೇ ಹೆಸರಾಗಿರುವ ಟಾಮ್ ಕ್ರೂಸ್ ತ್ರಿಬಲ್ ಆರ್ ಸಿನಿಮಾದ ಪ್ರಚಾರಕ್ಕಾಗಿ ದುಬೈಗೆ ಬರುತ್ತಾರಾ ಇಲ್ಲವಾ ಎಂಬುದನ್ನು ಕಾದುನೋಡಬೇಕು. ಅದೇನೇ ಇರಲಿ ಭಾರತೀಯ ನಿರ್ದೇಶಕರೊಬ್ಬರು ಇಂತಹ ಸಾಹಸಕ್ಕೆ ಕೈ ಹಾಕಿರುವುದು ಇದೇ ಮೊದಲು.

%d bloggers like this: