ಟಿಸಿಎಸ್ ಅಂದರೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಎಂಬುದು ಐಟಿ ಕಂಪನಿಯಾಗಿದ್ದು, 1968ರಲ್ಲಿ ಟಾಟಾ ಸನ್ಸ್ ರಿಂದ ಸ್ಥಾಪನೆಯಾಯಿತು. ಇದೊಂದು ಭಾರತೀಯ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ (ಐಟಿ). ಇದರ ಹೆಡ್ ಕ್ವಾರ್ಟರ್ ಮಹಾರಾಷ್ಟ್ರದ ಮುಂಬೈನಲ್ಲಿದೆ. ಇದು ಟಾಟಾ ಗ್ರೂಪ್ ನ ಅಂಗ ಸಂಸ್ಥೆಯಾಗಿದೆ. ಈ ಟಾಟಾ ಸಂಸ್ಥೆ 46 ದೇಶಗಳಲ್ಲಿ 149 ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಮಾರುಕಟ್ಟೆ ಬಂಡವಾಳೀಕರಣದ ಮೂಲಕ ಟಿಸಿಎಸ್ ಭಾರತದ ಎರಡನೇ ಅತಿದೊಡ್ಡ ಕಂಪನಿಯಾಗಿದೆ. 2015ರ ಮಾಹಿತಿ ಪ್ರಕಾರ ಟಿಸಿಎಸ್ ಫೋರ್ಬ್ಸ್ ವಿಶ್ವದ ಅತ್ಯಂತ ನವೀನ ಕಂಪನಿಗಳ ಶ್ರೇಯಾಂಕದಲ್ಲಿ 64ನೇ ರಾಂಕಿಂಗ್ನಲ್ಲಿದೆ. ಇದು ವಿಶ್ವದ ಅತಿದೊಡ್ಡ ಐಟಿ ಸೇವೆ ಒದಗಿಸುವ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, 2018ರ ಮಾಹಿತಿ ಪ್ರಕಾರ ಫಾರ್ಚೂನ್ ಇಂಡಿಯಾ 500 ಪಟ್ಟಿಯಲ್ಲಿ ಇದು ಹನ್ನೊಂದನೇ ರಾಂಕಿಂಗ್ ಪಡೆದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಅದರ ಮಾರುಕಟ್ಟೆ ಬಂಡವಾಳೀಕರಣವು, ಅಂದರೆ (ಮಾರ್ಕೆಟ್ ಕ್ಯಾಪಿಟಲೈಸೆಶನ್) ರುಪಾಯಿ 6,79,332.81 ಕೋಟಿಯಾಗಿದೆ. ಡಾಲರ್ ಲೆಕ್ಕದಲ್ಲಿ ($102.6 billion). 2016-2017ರ ಲೆಕ್ಕದ ಪ್ರಕಾರ ಪೇರೆಂಟ್ ಕಂಪನಿ ಟಾಟಾ ಸನ್ಸ್ ಶೇಕಡಾ 72.05% ಟಿಸಿಎಸ್ ಅನ್ನು ಹೊಂದಿದೆ. ಹಾಗು ಟಾಟಾ ಸನ್ಸ್‌ನ 70%ಕ್ಕಿಂತ ಹೆಚ್ಚು ಲಾಭಾಂಶವನ್ನು ಟಿಸಿಎಸ್ ಉತ್ಪಾದಿಸಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್, ಆರಂಭದಲ್ಲಿ “ಟಾಟಾ ಕಂಪ್ಯೂಟರ್ ಸಿಸ್ಟಮ್ಸ್” ಎಂದು ಪ್ರಾರಂಭವಾಗುವುದರ ಮೂಲಕ ಇದನ್ನು 1968ರಲ್ಲಿ ಟಾಟಾ ಸನ್ಸ್ ಲಿಮಿಟೆಡ್ ವಿಭಾಗದಿಂದ ಸ್ಥಾಪಿಸಲಾಯಿತು.

ಸಿಸ್ಟರ್ ಕಂಪನಿ ಟಿಸ್ಕೊ (ಈಗ ಬದಲಾಗಿರುವ ಟಾಟಾ ಸ್ಟೀಲ್), ಸೆಂಟ್ರಲ್ ಬ್ಯಾಂಕ್ ಆಫ್ ಇಂಟರ್ ಬ್ರಾಂಚ್ ಸಾಮರಸ್ಯ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಯುನಿಟ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ಬ್ಯೂರೋ ಸೇವೆಗಳನ್ನು ಒದಗಿಸುವುದರ ಮೂಲಕ ಆಗಸ್ಟ್ 25, 2004ರಂದು, ಟಿಸಿಎಸ್ ಸಾರ್ವಜನಿಕವಾಗಿ ಲಿಸ್ಟ್ ಮಾಡಲಾದ ಕಂಪನಿಯಾಯಿತು. ಇದರ ಸ್ವಾಧೀನಗಳಲ್ಲಿ ಇಂಡಿಯಾಗೆ ಐಟಿ ಸರ್ವೀಸ್, ಬಿಪಿಓ ಸೇವೆ, ಬಿಸಿನೆಸ್ ಪ್ರೋಸೆಸ್ ಔಟ್ಸೋರ್ಸಿಂಗ್, ಸ್ವೀಡೆನ್ ನಲ್ಲಿ ಐಟಿ ಸರ್ವಿಸಸ್, ಆಸ್ಟ್ರೇಲಿಯಾಗೆ ಕೋರ್ ಬ್ಯಾಂಕಿಂಗ್ ಪ್ರಾಡಕ್ಟ್ ಸೇವೆ, ಜರ್ಮನಿಗೆ ಹಾಗು ಫ್ರಾನ್ಸ್ ಗೆ ಐಟಿ ಸರ್ವೀಸ್ ಸೇವೆಯನ್ನು ಒದಗಿಸುವುದರ ಮೂಲಕ ವಿಶ್ವದಾದ್ಯಂತ ಹೆಸರು ಮಾಡಿದೆ.

46 ದೇಶಗಳಲ್ಲಿ 285 ಕಚೇರಿಗಳು ಮತ್ತು 21 ದೇಶಗಳಲ್ಲಿ 147 ವಿತರಣಾ ಕೇಂದ್ರಗಳನ್ನು ಹಾಗು ಅದೇ ದಿನಾಂಕದಂದು ಟಿಸಿಎಸ್ ಒಟ್ಟು 58 ಸಬ್ಸಿಡರಿಸಂಸ್ಥೆಗಳನ್ನು ಹೊಂದಿದೆ. ಟಿಸಿಎಸ್ ಇಂಡಿಯಾದಲ್ಲಿ ಅಹಮದಾಬಾದ್, ಬೆಂಗಳೂರು, ವಾರಣಾಸಿ ಸೇರಿದಂತೆ 23 ಸ್ಥಳಗಳಲ್ಲಿ ಹಾಗು ಏಷ್ಯಾದಲ್ಲಿ ಬಹ್ರೇನ್, ಚೀನಾ, ಇಸ್ರೇಲ್, ಸೇರಿದಂತೆ 15 ಸ್ಥಳಗಳಲ್ಲಿ ಮತ್ತು ವಿದೇಶಗಳು ಸೇರಿದಂತೆ 28 ಸ್ಥಳಗಳಲ್ಲಿ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಾ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಸೇವೆ ಸಲ್ಲಿಸುತ್ತಾ ಹೀಗೆ ನಂಬರ್ ಒನ್ ಸಾಫ್ಟ್ವೇರ್ ಸಂಸ್ಥೆಯಾಗಿ ಭರ್ಜರಿ ವಿಜಯಪತಾಕೆ ಹಾರಿಸುತ್ತಿದೆ.