ಜಗತ್ತಿನ ಶ್ರೇಷ್ಠ ಆಸ್ಕರ್ ಪ್ರಶಸ್ತಿ ರೇಸ್ ಅಲ್ಲಿ ಸ್ಥಾನ ಪಡೆದ ದಕ್ಷಿಣ ಭಾರತದ ಎರಡು ಸುಪ್ರಸಿದ್ಧ ಚಿತ್ರಗಳು

ದಕ್ಷಿಣ ಭಾರತದ ಇಬ್ಬರು ಸ್ಟಾರ್ ನಟರ ಸಿನಿಮಾ ಇದೀಗ ಆಸ್ಕರ್ ಅಂಗಳದಲ್ಲಿ ಸ್ಥಾನ ಪಡೆದುಕೊಂಡಿದೆ. ಜಗತ್ತಿನ ಪ್ರತಿಷ್ಟಿತ ಸಿನಿಮಾ ಪ್ರಶಸ್ತಿ ಆಗಿರುವ ಆಸ್ಕರ್ ಅವಾರ್ಡ್ ಲಿಸ್ಟ್ ನಲ್ಲಿ ಸೌತ್ ಸಿನಿ ಸಿನಿಮಾಗಳು ಸ್ಥಾನ ಗಿಟ್ಟಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಹೌದು ಕಳೆದ ವರ್ಷ 2020ರ ನವೆಂಬರ್ 2ರಂದು ಅಮೇಜಾ಼ನ್ ಪ್ರೈಮ್ ನಲ್ಲಿ ಬಿಡುಗಡೆ ಆಗಿ ಭಾರಿ ಸಂಚಲನ ಮೂಡಿಸಿದ ತಮಿಳಿನ ಜೈ ಭೀಮ್ ಸಿನಿಮಾ ಸಿನಿಮಾ ಪ್ರೇಕ್ಷಕರಿಂದ ಭಾರಿ ಪ್ರಶಂಸೆ ಪಡೆದುಕೊಂಡಿತು‌. ನಟ ಸೂರ್ಯ ಮತ್ತು ಅವರ ಪತ್ನಿ ನಟಿ ಜ್ಯೋತಿಕಾ ಒಡೆತನದ ಟು.ಡಿ.ಎಂಟರ್ಟೈನ್ ಮೆಂಟ್ ಸಂಸ್ಥೆಯಡಿ ನಿರ್ಮಾಣವಾದ ಈ ಜೈ ಭೀಮ್ ಚಿತ್ರದಲ್ಲಿ ತಮಿಳುನಾಡಿನ ಇರುಲರ್ ಬುಡಕಟ್ಟು ಸಮುದಾಯದ ಜನರಿಗೆ ಆಗುವಂತಹ ಅನ್ಯಾಯ ಜೊತೆಗೆ ಇವರ ಮೇಲೆ ಪೊಲೀಸರು ನಡೆಸುವ ದೌರ್ಜನ್ಯವನ್ನು ನಿರ್ದೇಶಕ ಟಿ.ಜೆ ಜ್ಞಾನವೇಲ್ ಅದ್ಬುತವಾಗಿ ಕಟ್ಟಿ ಕೊಟ್ಟಿದ್ದರು.

ಜಸ್ಟೀಸ್ ಚಂದ್ರು ಎಂಬುವವರ ಜೀವನದಲ್ಲಿ ನಡೆದಂತಹ ಘಟನೆಯನ್ನ ತೆರೆ ಮೇಲೆ ತರಲಾಗಿತ್ತು. ಜಸ್ಟೀಸ್ ಚಂದ್ರು ಅವರ ಪಾತ್ರದಲ್ಲಿ ನಟ ಸೂರ್ಯ ಅಮೋಘ ಅಭಿನಯ ಮಾಡಿದ್ದರು. ಸೂರ್ಯ ಅವರ ಸಿನಿ ವೃತ್ತಿಯಲ್ಲಿ ಈ ಚಿತ್ರ ಹೊಸ ಮೈಲಿಗಲ್ಲು ಸೃಷ್ಟಿಸಿತು ಅಂದರೆ ತಪ್ಪಾಗಲಾರದು. ಜೈ ಭೀಮ್ ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ಬಹುಭಾಷಾ ನಟ ಕನ್ನಡಿಗ ಪ್ರಕಾಶ್ ರಾಜ್, ರಜಿಶಾ ವಿಜಯನ್, ಲಿಜೋಮೋಲ್ ಜೋಶ್, ರಾವ್ ರಮೇಶ್ ಮತ್ತು ಕೆ.ಮನಿಕಂದನ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ವಿಶೇಷ ಅಂದರೆ ಜೈ ಭೀಮ್ ಸಿನಿಮಾ ಹಾಲಿವುಡ್ ಸಿನಿಮಾಗಳ ರೇಟಿಂಗ್ ಅನ್ನು ಕೂಡ ಬ್ರೇಕ್ ಮಾಡಿತ್ತು. ಜೈ ಭೀಮ್ ಐಎಂಡಿಬಿ ರೇಟಿಂಗ್ ನಲ್ಲಿ 10ಅಂಕಗಳಿಗೆ 9.6 ಅಂಕಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿತ್ತು.

ಇದೀಗ ಜೈ ಭೀಮ್ ಸಿನಿಮಾ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಸಂಸ್ಥೆ ನೀಡುವ ಆಸ್ಕರ್ ಅವಾರ್ಡ್ಗೆ ಆಯ್ಕೆ ಆಗಿರುವ 276 ಸಿನಿಮಾಗಳ ಪೈಕಿ ತಮಿಳಿನ ಜೈ ಭೀಮ್ ಮತ್ತು ಮಲೆಯಾಳಂನ ಮರಕ್ಕರ್ ಸಿನಿಮಾ ಪಟ್ಟಿಯಲ್ಲಿ ಸೇರ್ಪಡೆ ಆಗಿವೆ. ಈ ಮೂಲಕ ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾ 94ನೇ ಆಸ್ಕರ್ ಪ್ರಶಸ್ತಿಗೆ ಆಯ್ಕೆ ಆಗಿರುವ ಏಕೈಕ ತಮಿಳು ಸಿನಿಮಾ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದರ ಜೊತೆಗೆ ಮಲೆಯಾಳಂ ಸ್ಟಾರ್ ನಟ ಮೋಹನ್ ಲಾಲ್ ನಟನೆಯ ಮರಕ್ಕರ್ ಚಿತ್ರ ಕೂಡ ಆಸ್ಕರ್ ಅವಾರ್ಡ್ಗೆ ಆಯ್ಕೆ ಆಗಿರುವುದು ದಕ್ಷಿಣ ಭಾರತ ಚಿತ್ರರಂಗಕ್ಕೆ ಅಪಾರ ಗೌರವ ಸಿಕ್ಕಂತಾಗಿದೆ.

ಮರಕ್ಕರ್ ಚಿತ್ರ ಕೇರಳದ ಕ್ಯಾಲಿಕಟ್ ನಲ್ಲಿ 16ನೇ ಶತಮಾನದಲ್ಲಿ ನಡೆಯುವಂತಹ ಝಮೋರಿನ್ ನೌಕಾಪಡೆಯ ಅಡ್ಮಿರಲ್ ಕುಂಜಾಲಿ ಮರಕ್ಕರ್ ಅವರ ಜೀವನಾಧಾರಿತ ಐತಿಹಾಸಿಕ ಸಿನಿಮಾ. ಈ ಚಿತ್ರದಲ್ಲಿ ತಮಿಳಿನ ಸ್ಟಾರ್ ನಟಿ ಕೀರ್ತಿ ಸುರೇಶ್, ಸ್ಟಾರ್ ನಟ ಅರ್ಜುನ್ ಸರ್ಜಾ, ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಸೇರಿದಂತೆ ಅನೇಕ ದಿಗ್ಗಜ ಕಲಾವಿದರು ಪ್ರಮುಖ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಮರಕ್ಕರ್ ಚಿತ್ರ ಕೂಡ ಅಪಾರ ಜನ ಮನ್ನಣೆ ಗಳಿಸಿ ಬರೋಬ್ಬರಿ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. ಇದೇ ಜನವರಿ 27ರಂದು ಆಸ್ಕರ್ ಅವಾರ್ಡ್ ನಾಮಿನೇಶನ್ ವೋಟಿಂಗ್ ನಡೆಯಲಿದ್ದು, ಮುಂದಿನ ತಿಂಗಳು ಫೆಬ್ರವರಿಯಲ್ಲಿ ಆಸ್ಕರ್ ಅವಾರ್ಡ್ಗೆ ಆಯ್ಕೆಯಾದ ಸಿನಿಮಾದ ಬಗ್ಗೆ ಮಾಹಿತಿ ಪ್ರಕಟ ಮಾಡಲಿದ್ದಾರೆ. ಈ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭವು ಮಾರ್ಚ್ 27ರಂದು ಅಮೆರಿಕಾದಲ್ಲಿ ಜರುಗಲಿದೆ ಎಂದು ತಿಳಿದು ಬಂದಿದೆ.

%d bloggers like this: