ಜೇಮ್ಸ್ ಚಿತ್ರಕ್ಕಿದ್ದ ಒಂದೊಂದೇ ಚಿತ್ರಮಂದಿರಗಳನ್ನು ತೆಗೆದು ಪರಭಾಷೆಗೆ ಅವಕಾಶ, ಸಿಟ್ಟಾದ ಅಪ್ಪು ಅಭಿಮಾನಿಗಳು

ಬಾಹುಬಲಿ ಖ್ಯಾತಿಯ ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ತ್ರಿಬಲ್ ಆರ್ ಬಹಳಷ್ಟು ಕಾರಣಗಳಿಂದ ಕ್ರೇಜ್ ಹುಟ್ಟುಹಾಕಿದೆ. ಜೂನಿಯರ್ ಎನ್.ಟಿ.ಆರ್, ರಾಮ್ ಚರಣ್ ಜೊತೆಯಾಗಿ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ಅಲ್ಲದೆ ಬಾಲಿವುಡ್ ಬೆಡಗಿ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಈ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಇದಷ್ಟೇ ಅಲ್ಲದೆ ಬಾಹುಬಲಿ ಚಿತ್ರ ನೋಡಿದ ಅಭಿಮಾನಿಗಳಿಗೆ ರಾಜಮೌಳಿ ಅವರ ಚಿತ್ರ ಎಂದರೆ ನಿರೀಕ್ಷೆಯ ಮಟ್ಟ ಹೆಚ್ಚಾಗಿರುತ್ತದೆ. ರಾಜಮೌಳಿಯವರು ಅಭಿಮಾನಿಗಳ ನಿರೀಕ್ಷೆಗಿಂತ ಹೆಚ್ಚಾಗಿಯೆ ಸಿನಿಮಾವನ್ನು ನಿರ್ದೇಶಿಸಿರುತ್ತಾರೆ. ಈಗಾಗಲೇ ತನ್ನ ಟ್ರೈಲರ್ ಹಾಗೂ ಪೋಸ್ಟರ್ ಗಳಿಂದ ಸಾಕಷ್ಟು ಸುದ್ದಿಯಲ್ಲಿರುವ ತ್ರಿಬಲ್ ಆರ್ ಚಿತ್ರ ಇದೇ ಮಾರ್ಚ್ 25ರಂದು ಭಾರತದಾದ್ಯಂತ ತೆರೆಕಾಣಲಿದೆ.

ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಕರ್ನಾಟಕದಲ್ಲೂ ಈ ಚಿತ್ರ ತೆರೆ ಕಾಣಲಿದೆ. ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಸುಮಾರು 250ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ತ್ರಿಬಲ್ ಆರ್ ಚಿತ್ರ ರಿಲೀಸ್ ಆಗಲಿದೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗುತ್ತಿರುವುದರಿಂದ ಭಾರತದಲ್ಲೆಡೆ ಈ ಸಿನಿಮಾ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದರೆ ತ್ರಿಬಲ್ ಆರ್ ಚಿತ್ರ ರಿಲೀಸ್ ಆಗುವುದರಿಂದ ಜೇಮ್ಸ್ ಸಿನಿಮಾಕ್ಕೆ ಥಿಯೇಟರ್ಗಳ ಕೊರತೆ ಎದುರಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಗಾಂಧಿನಗರದ ಕೆವಿಎನ್ ಪ್ರೊಡಕ್ಷನ್ ತ್ರಿಬಲ್ ಆರ್ ಚಿತ್ರಕ್ಕೆ ಬರೋಬ್ಬರಿ 52 ಕೋಟಿ ರೂಪಾಯಿ ಕೊಟ್ಟು ಕರ್ನಾಟಕದ ವಿತರಣಾ ಹಕ್ಕನ್ನು ಪಡೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಹಲವು ಭಾಗಗಳಲ್ಲಿ ವಿತರಕರು ಕೋಟಿ ಕೋಟಿ ರೂಪಾಯಿ ಹಿಡಿದುಕೊಂಡು ಕಾಯುತ್ತಿದ್ದಾರೆ. ಅವರಿಗೂ ದುಡ್ಡು ಬರಲೇಬೇಕು ಹೀಗಾಗಿ ಅನಿವಾರ್ಯವಾಗಿ ಥಿಯೇಟರ್ ಕಿತ್ತುಕೊಳ್ಳದೆ ವಿಧಿ ಇಲ್ಲ ಎಂಬುದು ಹಲವರ ಅಭಿಪ್ರಾಯ. ಇದಷ್ಟೇ ಅಲ್ಲದೆ ಸೋಮವಾರದಿಂದ ಜೇಮ್ಸ್ ಚಿತ್ರದ ಗಳಿಕೆಯಲ್ಲೂ ಇಳಿಕೆ ಕಂಡಿದೆ. ಮಲ್ಟಿಪ್ಲೆಕ್ಸ್ ನಲ್ಲಿ ಸ್ಕ್ರೀನ್ ಗಳ ಸಂಖ್ಯೆಯನ್ನು ಇಳಿಸಲಾಗಿದೆ. ಮಂಗಳವಾರ ಹೇಳಿಕೊಳ್ಳುವಂತಹ ಗಳಿಕೆ ಏನು ಆಗಿಲ್ಲ. ಇದೆಲ್ಲಾ ಕಾರಣಗಳನ್ನು ಇಟ್ಟುಕೊಂಡು ತ್ರಿಬಲ್ ಆರ್ ಸಿನಿಮಾಗೆ ಥಿಯೇಟರ್ ಗಳನ್ನು ಕೊಡುವ ಪ್ಲಾನ್ ನ್ನು ನಿರ್ಮಾಪಕರು ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ. ಅಲ್ಲದೆ ಜೇಮ್ಸ್ ಚಿತ್ರಕ್ಕೆ ಟಿವಿ ರೈಟ್ಸ್, ಬೇರೆ ಬೇರೆ ಭಾಷೆಯ ಹಕ್ಕುಗಳು ಮತ್ತು ಥಿಯೇಟರ್ನಿಂದ ಬಂದ ಗಳಿಕೆಯಿಂದ ಸುಮಾರು 125ಕೋಟಿ ರೂಪಾಯಿ ಬಂದಿದೆ.

ಇದು ಜೇಮ್ಸ್ ಚಿತ್ರಕ್ಕೆ ನಿರ್ಮಾಪಕರು ಹಾಕಿದ ಬಂಡವಾಳಕ್ಕಿಂತ ಐದು ಪಟ್ಟು ಹಣ ನಿರ್ಮಾಪಕರ ಕೈ ಸೇರಿದೆ ಎನ್ನಲಾಗುತ್ತಿದೆ. ಹೀಗಾಗಿ ನಿರ್ಮಾಪಕರಿಗೆ ಥಿಯೇಟರ್ಗಳ ಕೊರತೆಯಿಂದ ಯಾವುದೇ ಭಯವಿಲ್ಲ. ಇತ್ತೀಚೆಗೆ ಕರ್ನಾಟಕದಲ್ಲಿ ತ್ರಿಬಲ್ ಆರ್ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ನಡೆದಿತ್ತು. ಆ ಸಂದರ್ಭದಲ್ಲಿ ನಿರ್ದೇಶಕ ರಾಜಮೌಳಿ ಅವರಿಗೆ ಪತ್ರಕರ್ತರೊಬ್ಬರು ತ್ರಿಬಲ್ ಆರ್ ಸಿನಿಮಾವನ್ನು ಮಾರ್ಚ್ 25ರಂದು ಬಿಡುಗಡೆ ಮಾಡುವುದರಿಂದ ಜೇಮ್ಸ್ ಸಿನಿಮಾಗೆ ತೊಂದರೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ತಬ್ಬಿಬ್ಬಾದ ರಾಜಮೌಳಿಯವರು ಕೊಂಚ ಸಮಯವನ್ನು ತೆಗೆದುಕೊಂಡು ಜೇಮ್ಸ್ ಚಿತ್ರಕ್ಕೆ ತೊಂದರೆಯಾಗದ ಹಾಗೆ ವಿತರಕರು ನೋಡಿಕೊಳ್ಳುತ್ತಾರೆ ಎಂದು ಉತ್ತರಿಸಿದರು. ಆದರೆ ವಾಸ್ತವವಾಗಿ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕು.

%d bloggers like this: