ಜಮ್ಮು ಕಾಶ್ಮೀರದ ವಿಪರೀತ ಚಳಿಗೆ ನಲುಗಿ ವಾಪಸ್ ಬಂದ ಖ್ಯಾತ ನಟ

ಬಾಲಿವುಡ್ ಬಿಗ್ಬಿ, ಆಂಗ್ರಿಯಂಗ್ ಮ್ಯಾನ್ ಅಮಿತಾಬ್ ಬಚ್ಚನ್ ಅವರು ಲಡಾಕ್ ಚಳಿಗೆ ಎದುರಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಹೌದು ಇತ್ತೀಚೆಗೆ ಅಮಿತಾಬ್ ಬಚ್ಚನ್ ಅವರು ಜಮ್ಮ ಮತ್ತು ಕಾಶ್ಮೀರ ರಾಜ್ಯದ ಲಡಾಕ್ ಪ್ರಸ್ಥಭೂಮಿಗೆ ಕಿರು ಪ್ರವಾಸ ಕೈಗೊಂಡಿದ್ದರು, ಹೋಗಿದ ಎರಡು ದಿನಗಳಲ್ಲೇ ಲಡಾಕ್ ನಿಂದ ವಾಪಸ್ ಆಗಿದ್ದಾರೆ. ಕಾರಣ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಅಷ್ಟು ಸುಲಭವಲ್ಲ ಲಡಾಕ್ ಪ್ರದೇಶ ಜಗತ್ತಿನ ಅತೀ ಎತ್ತರವಾದ ಜನವಸತಿ ಪ್ರದೇಶವಾಗಿದ್ದು ಇಲ್ಲಿ ವರ್ಷದ ಆರು ತಿಂಗಳುಗಳ ಸಂಪೂರ್ಣವಾಗಿ ಅಲ್ಲಿನ ಪ್ರದೇಶವು ಹಿಮಾಲಯದ ಮಂಜುಗೆಡ್ಡೆಯಿಂದ ಆವೃತ್ತವಾಗಿ ರಸ್ತೆಗಳೆಲ್ಲಾ ಮುಚ್ಚಿ ಹೋಗಿರುತ್ತದೆ. ಲಡಾಕ್ ಪ್ರದೇಶವು ಹೆಚ್ಚು ಹಿಮಗಳಿಂದ ಕೂಡಿದ್ದು ಇಲ್ಲಿನ ಮೈನಸ್ ಉಷ್ಣಾಂಶಕ್ಕೆ ಇಲ್ಲಿ ವಾಸ ಮಾಡಲು ಕಷ್ಟವೇ ಸರಿ ಎನ್ನಬಹುದು.

ಆದು ಸಮುದ್ರ ಮಟ್ಟದಿಂದ ಎಂಟು ಸಾವಿರದಿಂದ ಹದಿಮೂರು ಸಾವಿರದ ಅಡಿಗಳಷ್ಟು ಎತ್ತರದಲ್ಲಿದಲ್ಲಿರುವ ಪ್ರದೇಶವಾಗಿದೆ, ಇಂತಹ ಲಡಾಕ್ ಪ್ರದೇಶಕ್ಕೆ ಇತ್ತೀಚಿಗೆ ಬಾಲಿವುಡ್ ಹಿರಿಯ ಜನಪ್ರಿಯ ನಟರಾಗಿರುವ ಅಮಿತಾಬ್ ಬಚ್ಚನ್ ಲಡಾಕ್ ಪ್ರದೇಶದ ಹಿಮಾಲಯದ ರಮಣೀಯ ಸೌಂದರ್ಯವನ್ನು ಅನುಭವಿಸಲು ಅವರು ಒಂದಷ್ಟು ದಿನಗಳ ಪ್ರವಾಸಕ್ಕೆಂದು ಹೋಗಿದ್ದರು. ಆದರೆ ಲಡಾಕ್ ಪ್ರದೇಶದಲ್ಲಿ ವಾತಾವರಣದಲ್ಲಿ ವಿಪರೀತ ಚಳಿಯಾಗಿದ್ದು ಮೈನಸ್ 33ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ನಡುಗಿ ನಲುಗಿದ ಅಮಿತಾಬ್ ಸಾಕು ಇದರ ಸಹವಾಸ ಎಂದು ಲಡಾಕ್ ಗೆ ಬಾಯ್ ಹೇಳಿ ಭಾರತಕ್ಕೆ ಮರಳಿದ್ದಾರೆ. ಅಲ್ಲಿನ ಚಳಿಗೆ ಎದರಿ ಮರಳಿ ಬಂದ ಆಂಗ್ರಿಯಂಗ್ ಮ್ಯಾನ್ ತಮ್ಮ ಅನುಭವ ವನ್ನು ತಮ್ಮ ಇನ್ಸ್ಟಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಮಿತಾಬ್ ಅವರ ಈ ಅನುಭವದ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

%d bloggers like this: