ಜನಾರ್ದನ ರೆಡ್ಡಿ ಅವರ ಮಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ

ಚಿತ್ರರಂಗದಲ್ಲಿ ಸ್ಟಾರ್ ನಟ ಅಥವಾ ನಟಿಯರು ತಮ್ಮ ಮಕ್ಕಳನ್ನು ಸಿನಿ ಇಂಡಸ್ಟ್ರಿಗೆ ಪರಿಚಯಿಸುವುದು ಹೊಸದೇನಲ್ಲ. ಸ್ಟಾರ್ ನಟರ ಮಕ್ಕಳಿಗೆ ಸಿನಿ ಜಗತ್ತಿನ ಪ್ರವೇಶ ಕೂಡ ಕಠಿಣವಲ್ಲ. ಸ್ಟಾರ್ ನಟ ನಟಿಯರ ಮಕ್ಕಳು ಅವರ ತಂದೆ ತಾಯಿ ಮಾಡಿರುವ ಕ್ರೇಜ್ ನಿಂದಲೇ ತಮ್ಮ ಸಿನಿ ಪಯಣ ಶುರುಮಾಡಿರುತ್ತಾರೆ. ಆದರೆ ಸಿನಿ ಜಗತ್ತಿನಿಂದ ದೂರ ಇರುವ ಅಥವಾ ಸಿನಿ ಫ್ಯಾಮಿಲಿ ಅಲ್ಲದಿರುವ ಕುಟುಂಬದಿಂದ ಬಂದು ಸಿನಿ ಜಗತ್ತಿನ ಪ್ರಯಾಣ ಆರಂಭಿಸಿ ಅಲ್ಲಿಯೇ ನೆಲೆಯೂರುವುದು ಕಷ್ಟವೇ ಸರಿ. ಇಂತದ್ದೇ ಪಯಣವನ್ನು ಆರಂಭಿಸಲು ನಮ್ಮ ಕರ್ನಾಟಕದ ಪ್ರಸಿದ್ಧ ರಾಜಕಾರಣಿಯ ಮಗರೊಬ್ಬರು ರೆಡಿ ಆಗಿದ್ದಾರೆ. ಹೌದು ಜನಾರ್ಧನ್ ರೆಡ್ಡಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.

ಬಳ್ಳಾರಿಯ ದೊಡ್ಡ ಬಿಸಿನೆಸ್ ಮ್ಯಾನ್ ಹಾಗೂ ರಾಜಕಾರಣಿ ಆಗಿರುವ ಜನಾರ್ದನ ರೆಡ್ಡಿ ಅವರು ತಮ್ಮ ಮಗನನ್ನು ಸಿನಿಮಾರಂಗಕ್ಕೆ ಪರಿಚಯಿಸಲು ಸಿದ್ಧರಾಗಿದ್ದಾರೆ. ಜನಾರ್ಧನ್ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ, ಒಂದೇ ಬಾರಿಗೆ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ ಗೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ಸ್ವತಹ ಜನಾರ್ಧನ್ ರೆಡ್ಡಿ ಅವರು ಈ ಹಿಂದೆ ಅಧಿಕೃತವಾಗಿ ಮಾಹಿತಿ ನೀಡಿದ್ದರು. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಆಗಲಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಚೆಲುವ ನಾರಾಯಣಸ್ವಾಮಿ ಪುತ್ರ ಸಚಿನ್, ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ, ಜಮೀರ್ ಅಹಮದ್ ಅವರ ಪುತ್ರ ಜೈಯಿದ್ ಖಾನ್, ಇವರೆಲ್ಲರ ನಂತರ ಈಗ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಒಂದು ಲೆಕ್ಕದಲ್ಲಿ ಹೇಳಬೇಕೆಂದರೆ ನಾಲ್ಕೈದು ವರ್ಷಗಳ ಹಿಂದೆಯೇ ರೆಡ್ಡಿ ಅವರ ಸುಪುತ್ರ ಸಿನಿಮಾ ಲ್ಯಾಂಡ್ ನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಒಬ್ಬ ನಟನಿಗೆ ಬೇಕಾಗಿರುವ ಎಲ್ಲ ಪ್ರೆಪರೇಷನ್ ಗಳನ್ನು ಮಾಡಿಕೊಂಡು ಪಕ್ಕ ಪೂರ್ವಸಿದ್ಧತೆಯೊಂದಿಗೆ ಬರುತ್ತಿದ್ದಾರೆ ಕಿರೀಟಿ ಜನಾರ್ಧನ್ ರೆಡ್ಡಿ.

ಟಾಲಿವುಡ್ ನ ಜನಪ್ರಿಯ ನಿರ್ಮಾಣ ಸಂಸ್ಥೆ ವಾರಾಹಿ ಫಿಲಂ ಪ್ರೊಡಕ್ಷನ್ 15 ನೇ ಹೈ ಬಜೆಟ್ ಹಾಗೂ ಕಂಟೆಂಟ್ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ಇಡುತ್ತಿದ್ದಾರೆ. ಇದೀಗ ವಾರಾಹಿ ರಾಧಾಕೃಷ್ಣ ಸಾರಥ್ಯದಲ್ಲಿ ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಚಿತ್ರದ ಮೂಲಕ ಕಿರೀಟಿ ರೆಡ್ಡಿ ಅವರು ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಇನ್ನೇನು ಒಂದೆರಡು ದಿನಗಳಲ್ಲಿ ಈ ಚಿತ್ರದ ಹೆಸರು ಫಿಕ್ಸ್ ಆಗುತ್ತದೆ. ಆದರೆ ಈ ಸಿನಿಮಾದಲ್ಲಿ ಕಿರೀಟಿ ಅವರಿಗೆ ನಾಯಕಿಯಾಗಿ ಯಾರು ಆಯ್ಕೆ ಆಗುತ್ತಾರೆ ಎಂದು ಎರಡು ದಿನ ಮುಂಚಿತವಾಗಿಯೇ ಚಿತ್ರತಂಡ ನಿರ್ಧರಿಸಿದೆ. ಹೌದು ಈ ಸಿನಿಮಾದಲ್ಲಿ ನಾಯಕಿಯಾಗಿ ಕನ್ನಡ ಹಾಗೂ ತೆಲುಗು ಚಿತ್ರಗಳಲ್ಲಿ ಈಗಾಗಲೇ ಅಭಿನಯಿಸಿರುವ ಕಿಸ್ ಚಿತ್ರದ ಖ್ಯಾತಿಯ ಶ್ರೀಲೀಲಾ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಹಾಗೂ ಬಹುಭಾಷಾ ನಟಿ ಜೆನಿಲಿಯಾ ರಿತೇಶ್ ದೇಶಮುಖ್ ಅವರು ಕೂಡ ಈ ಚಿತ್ರದಲ್ಲಿ ಇರಲಿದ್ದಾರಂತೆ. ಶ್ರೀಲೀಲಾ ಅವರು ಈ ಸಿನಿಮಾದಲ್ಲಿ ನಾಯಕಿಯಾದರೆ ಜೆನಿಲಿಯಾ ಯಾವ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಯೋಚಿಸುತ್ತಿದ್ದೀರಾ. ಈ ಚಿತ್ರದಲ್ಲಿ ಜೇನಿಲಿಯಾ ಅವರು ಪೋಷಕ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೌದು ಈ ಚಿತ್ರದಲ್ಲಿ ಕಿರೀಟಿ ರೆಡ್ಡಿ ಅವರ ಅಕ್ಕನ ಪಾತ್ರವನ್ನು ಜೆನಿಲಿಯ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಜನಾರ್ದನ್ ರೆಡ್ಡಿ ಅವರ ಸಿನಿಮಾ ಶುರುವಾಗುವುದಕ್ಕೆ ಮುನ್ನವೇ ಸಖತ್ ಸೌಂಡ್ ಮಾಡುತ್ತಿದೆ. ಇದೇ ತಿಂಗಳು 4 ನೇ ತಾರೀಖು ಇವರ ಸಿನಿಮಾ ಶುರುವಾಗಲಿದೆ. ಇದೇ ತಿಂಗಳ 4ನೇ ತಾರೀಕು ಕಿರೀಟಿ ನಟನೆಯ ಹೊಸ ಸಿನಿಮಾದ ಮುಹೂರ್ತ ವಾಗಲಿದೆ. ಎಸ್ ಎಸ್ ರಾಜಮೌಳಿ ಈ ಸಿನಿಮಾಕ್ಕೆ ಕ್ಲ್ಯಾಪ್ ಮಾಡುವುದರ ಮೂಲಕ ಶುಭ ಹಾರೈಸಲಿದ್ದಾರೆ.

%d bloggers like this: