ದೇಶದಲ್ಲಿ ಮತ್ತು ನಮ್ಮ ರಾಜ್ಯದಲ್ಲಿ ಕೋರೋನಾ ಹೆಮ್ಮಾರಿಯ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಜನ ತುಂಬಾ ಆತಂಕದ ಸ್ಥಿತಿಯಲ್ಲಿ ಇದ್ದಾರೆ. ಕೆಲವು ತಜ್ಞರು ಇನ್ನು ಎರಡು ತಿಂಗಳು ಕಾಲ ಕೊರೋನಾದ ಆರ್ಭಟ ಹೀಗೆ ಮುಂದುವರಿದು ಅಕ್ಟೋಬರ್ ನಲ್ಲಿ ಇಳಿಕೆಯಾಗಲಿದೆ ಎಂಬ ನಿರಾಳವಾಗುವ ಸುದ್ದಿಯನ್ನು ಕೊಟ್ಟಿದ್ದರು. ಆದರೆ ಇದರ ಮಧ್ಯೆಯೇ ಇಂದು ಕೊರೋನಾ ಸೋಂಕಿನ ಕುರಿತು ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಹೌದು ಈ ಸೋಂಕಿನ ಹೊಸ ಗುಣಲಕ್ಷಣ ಒಂದರ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಕೊರೋನಾ ಸೋಂಕಿನ ಆರಂಭದಲ್ಲಿ ಇದರ 9 ಲಕ್ಷಣಗಳನ್ನು ಪತ್ತೆ ಮಾಡಲಾಗಿತ್ತು.
ತದನಂತರ ವಿಶ್ವ ಆರೋಗ್ಯ ಸಂಸ್ಥೆ ಮತ್ತೆ ಮೂರು ಹೊಸದಾದ ಲಕ್ಷಣಗಳನ್ನು ಸೇರಿಸಿ ಒಟ್ಟು 12 ಲಕ್ಷಣಗಳ ಪಟ್ಟಿ ಮಾಡಲಾಗಿತ್ತು. ಆದರೆ ಈಗ ಅಚ್ಚರಿ ಎನ್ನುವಂತೆ ಈ ಹೊಸದಾದ ಲಕ್ಷಣ ಕಂಡುಬಂದರೂ ಕೂಡ ಅದು ಕೊರೊನಾ ವೈರಸ್ ಸೋಂಕು ಇರುವಿಕೆಯ ಲಕ್ಷಣವಾಗಿರಬಹುದು ಎಂದು ತಿಳಿದುಬಂದಿದೆ. ಅದೇನೆಂದರೆ ನಿರಂತರ ಬಿಕ್ಕಳಿಕೆ. ಹೌದು ಇದುವರೆಗೆ ಸಾಮಾನ್ಯವಾಗಿ ಜ್ವರ, ಗಂಟಲುನೋವು, ನೆಗಡಿ ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳನ್ನು ಗುರುತಿಸಲಾಗಿತ್ತು. ಈಗ ಹೊಸ ಅಧ್ಯಯನದ ಪ್ರಕಾರ ನಿರಂತರ ಬಿಕ್ಕಳಿಕೆಯು ಕೂಡ ಈ ಸೋಂಕಿನ ಲಕ್ಷಣ ಆಗಿರಬಹುದು ಎಂದು ಹೇಳಿದೆ.