ಜನತೆಗೆ ಒಳ್ಳೆಯ ಸುದ್ದಿ ನೀಡಿದ ಅಡುಗೆ ಎಣ್ಣೆ ತಯಾರಕರು, ಬೆಲೆ ಕಡಿಮೆ ಮಾಡಲು ಸಿದ್ದ

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿದ್ದ ದೇಶದ ಜನರು ಇದೀಗ ಕೊಂಚ ಸಮಾಧಾನ ಮಾಡಿಕೊಳ್ಳಬಹುದು. ಹೌದು ಅಡುಗೆ ಎಣ್ಣೆಯ ಬೆಲೆಯಲ್ಲಿ ಹತ್ತು ರುಪಾಯಿಗಳವರೆಗೆ ಇಳಿಕೆ ಆಗಲಿದೆ. ಅಡುಗೆ ಅನಿಲ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆಯು ಕೇಂದ್ರ ಸರ್ಕಾರದ ಸುಂಕದ ಪರಿಣಾಮ ಭಾರಿ ಏರಿಕೆ ಕಂಡಿತು. ಇದು ಜನ ಸಾಮಾನ್ಯರ ಬದುಕಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತು. ಬಡ ಬಗ್ಗರ ಜೀವನ ಅಂತೂ ಭಾರಿ ದುಃಸ್ಥಿತಿ ಆಗಿದೆ ಅಂದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಮೂಲಭೂತ ಅವಶ್ಯಕ ವಸ್ತುಗಳ ಬೆಲೆ ಗಗನ ಮುಟ್ಟಿತ್ತು. ಇದರಿಂದ ಸರ್ಕಾರಕ್ಕೆ ಜನ ಹಿಡಿ ‌ಶಾಪ ಹಾಕಿದ್ದು ಮಾತ್ರ ಸುಳ್ಳಲ್ಲ. ಒಂದೆಡೆ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಇಂಧನದ ಬೆಲೆ ಗಗನ ಮುಟ್ಟಿದ ಕಾರಣ ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ರೇ.

ಮತ್ತೊಂದೆಡೆ ಅಡುಗೆ ಅನಿಲ, ಅಡುಗೆ ಎಣ್ಣೆ, ಬೇಳೆ ಕಾಳುಗಳ ಬೆಲೆ ಏರಿಕೆಯಾಗಿ ಮಹಿಳೆಯರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದಕ್ಕೆಲ್ಲಾ ಕೇಂದ್ರ ಸರ್ಕಾರ ಜಾರಿತಂದ ಜಿ.ಎಸ್.ಟಿಯೇ ನೇರ ಕಾರಣ ಅನ್ನೋದು ‌ಸಾಮಾನ್ಯವಾಗಿ ಕೇಳಿ ಬರುತ್ತಿತ್ತು. ಇದೀಗ ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ ‌ಮಾಡುವಂತೆ ಕೇಂದ್ರ ಸರ್ಕಾರ ಅಡುಗೆ ಎಣ್ಣೆ ತಯಾರಕ ಕಂಪನಿಗಳಿಗೆ ಸೂಚನೆ ನೀಡಿದೆ. ಕೆಲವು ದಿನಗಳ ಹಿಂದೆಯೇ ಕೇಂದ್ರ ಸರ್ಕಾರ ಕ್ರೂಡ್ ಪಾಮ್ ಆಯಿಲ್ ಮೇಲಿನ ಸುಂಕವನ್ನ ಕಡಿಮೆ ಮಾಡಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆಯಾದ ಕಾರಣ ಕೇಂದ್ರ ಸರ್ಕಾರ ಕಂಪನಿಗಳಿಗೆ ಸೂಚನೆ ನೀಡಿತ್ತು. ಇದರ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆ ಕಂಪನಿಗಳು ಕೂಡ ಒಂದು ಲೀಟರಿಗೆ ಹತ್ತರಿಂದ ಹದಿನೈದು ರುಪಾಯಿಗಳವರೆಗೆ ಬೆಲೆಯನ್ನ ಕಡಿಮೆ ಮಾಡಿವೆ. ಇದರಿಂದಾಗಿ ಬೆಲೆ ಏರಿಕೆಯ ಬಿಸಿಯಿಂದಾಗಿ ತತ್ತರಿಸಿದ ದೇಶದ ಜನರು ಕೂಡ ಕೊಂಚ ನಿಟ್ಟಿಸಿರು ಬಿಡುವಂತಾಗಿದೆ.

%d bloggers like this: