ಜನವರಿ 28ರಂದು ವಿಶೇಷ ಹುಣ್ಣಿಮೆಯ ದಿನವಾಗಿದ್ದು, ಅಂದಿನಿಂದ ಈ ಆರು ರಾಶಿಯವರಿಗೆ ಶುಕ್ರದೆಸೆ ಆರಂಭವಾಗಲಿದೆ. ಇವರಿಗೆ ಪರಮೇಶ್ವರನ ಅನುಗ್ರಹ ಲಭಿಸಲಿದ್ದು, ಅದೃಷ್ಟದ ದಿನಗಳು ಎದುರಾಗಲಿವೆ. ಏಕೆಂದರೆ ಈ ವರ್ಷದಲ್ಲಿ ಬರುತ್ತಿರುವ ಮೊದಲ ಹುಣ್ಣಿಮೆ ಆಗಿರುವುದರಿಂದ ತುಂಬ ಪರಿಣಾಮಕಾರಿರಾಗಿ ಈ ಆರು ರಾಶಿಯ ಮೇಲೆ ಪ್ರಭಾವ ಬೀರಲಿದೆ. ಹಾಗಾದರೆ ಪರಮೇಶ್ವರನ ಅನುಗ್ರಹ ಪಡೆದಿರುವ ಆ ರಾಶಿಗಳು ಯಾವ್ಯಾವು ಎಂದು ತಿಳಿಯುವುದಾದರೆ.
ಮಕರ ಮತ್ತು ಮೀನರಾಶಿ: ಈ ಎರಡು ರಾಶಿಯ ವ್ಯಕ್ತಿಗಳಿಗೆ ಸಮಾನವಾದಂತಹ ಶುಭಫಲ ದೊರೆಯಲ್ಲಿದ್ದು ಇವರ ಎಲ್ಲಾ ಇಷ್ಟಾರ್ಥಗಳು ಲಭಿಸಲಿವೆ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ. ಬಹು ವರ್ಷಗಳ ಕನಸು ನನಸಾಗುತ್ತದೆ, ಮನೆಯ ಹಿರಿಯ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿದ್ದವರು ಚೇತರಿಕೆ ಕಾಣುತ್ತಾರೆ. ಆರ್ಥಿಕ ವಿಚಾರದಲ್ಲಿ ಪ್ರಗತಿ ಕಂಡು ಬರುತ್ತದೆ.

ಮಿಥುನ ಮತ್ತು ಕನ್ಯಾ: ಈ ಕನ್ಯಾ ರಾಶಿಯವರು ಉದಾರ ಮನೋಭಾವವುಳ್ಳವರಾಗಿದ್ದು, ತಮ್ಮ ಶತ್ರುಗಳನ್ನು ಕೂಡ ಕ್ಷಮಿಸುವಂತಹ ಕ್ಷಮಾಗುಣ ಹೊಂದಿರುತ್ತಾರೆ. ಈ ಗುಣದಿಂದಲೇ ಇವರನ್ನು ಶಿವನು ಮೆಚ್ಚುವುದು. ಈ ಮಿಥುನ ರಾಶಿಯವರು ಈಶ್ವರನ ಪರಮಭಕ್ತನಾಗಿರುತ್ತಾರೆ. ಈ ಎರಡು ರಾಶಿಯವರ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ ಪಡೆಯುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿದೆ. ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿಬರಲಿದೆ. ಕುಟುಂಬದಲ್ಲಿ ಸುಖ, ಸಂತೋಷ ಇರಲಿದ್ದು, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಈ ಎರಡು ರಾಶಿಯ ಜನರು ಆರಂಭಿಸುವ ನೂತನ ಉದ್ಯಮಗಳು ಯಶಸ್ವಿಯಾಗಲಿದೆ, ಇವರ ಮೇಲೆ ಪರಮೇಶ್ವರನ ಕೃಪೆ ಇರಲಿದೆ.

ತುಲಾ ಮತ್ತು ಸಿಂಹರಾಶಿಯವರಿಗೂ ಕೂಡ ಈ ವಿಶೇಷ ಹುಣ್ಣಿಮೆಯ ದಿನದಿಂದ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ. ಈ ವರ್ಷ ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗಲಿದೆ. ವಿಧ್ಯಾರ್ಥಿಗಳು ಪರೀಕ್ಷೆಗಳಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ವ್ಯಾಪಾರ ವ್ಯವಹಾರಗಳು ಅಭಿವೃಧ್ಧಿಯತ್ತ ಸಾಗುತ್ತವೆ. ಇನ್ನು ಹೂಡಿಕೆ ಮಾಡುವುದಕ್ಕೆ ಇದು ಸೂಕ್ತ ಸಮಯವಾಗಿದೆ, ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗುರು ಹಿರಿಯರ ಸಲಹೆ ಪಡೆಯರಿ.