ಜನೆವರಿ 8 ರಿಂದ ಈ ರಾಶಿಯವರಿಗೆ ಲಾಭದಾಯಕ

ಕುಂಭ ರಾಶಿಯ ವಾರ ಭವಿಷ್ಯವು ಮಿಶ್ರಫಲ ಹೊಂದಿದೆ. ಜನವರಿ ತಿಂಗಳ ಎರಡನೇ ವಾರದಿಂದ, ಅಂದರೆ 8ನೇ ತಾರೀಖಿನಿಂದ ಕುಂಭ ರಾಶಿಯವರ ವಾರ ಭವಿಷ್ಯ ಯಾವೆಲ್ಲ ರೀತಿಯ ಶುಭ ಮತ್ತು ಅಶುಭ ಫಲಗಳನ್ನು ನೀಡಬಹುದು ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಿದ್ದಾರೆ. ಕುಂಭ ರಾಶಿಯವರಿಗೆ ಈ ವಾರದಂದು ಸೌಭಾಗ್ಯದ ಸಂಪೂರ್ಣ ಸಹಕಾರ ದೊರೆಯುತ್ತದೆ. ಶೇರು ಮಾರುಕಟ್ಟೆ ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ, ನಿಮ್ಮ ಹಳೆ ಮಾದರಿಯ ವ್ಯಾಪಾರವನ್ನು ಪರಿವರ್ತಿಸುವುದರಿಂದ ವಿದೇಶಿ ವ್ಯಾಪಾರ, ವಹಿವಾಟಿನಲ್ಲಿ ನಾಲ್ಕುಪಟ್ಟು ಹೆಚ್ಚಾಗುತ್ತದೆ. ನಿಮಗೆ ಗುರು ಹಿರಿಯರಲ್ಲಿ ಗೌರವ ಹೆಚ್ಚಾಗುತ್ತದೆ. ಇನ್ನು ಕುಟುಂಬದಲ್ಲಿ ಪರಸ್ಪರ ಬಾಂಧವ್ಯ ಹೆಚ್ಚಾಗಿ ಸುಖ, ಸಂತೋಷ ಲಭಿಸುತ್ತದೆ.

ಇನ್ನು ಈ ವಾರದಲ್ಲಿ ಕುಂಭ ರಾಶಿಯವರಿಗೆ ಧರ್ಮ ಕರ್ಮಗಳ ಬಗ್ಗೆ ಹೆಚ್ಚು ಆಸಕ್ತಿ ಆಗುತ್ತದೆ. ಮನೆಯಲ್ಲಿ ಶುಭ ಕಾರ್ಯ ಜರುಗುತ್ತದೆ, ಇನ್ನು ವಾರದ ಮೊದಲ ದಿನವಾದ ದಿನಾಂಕ 8 ಮತ್ತು 9,10,11ದಿನಾಂಕಗಳ ಬೆಳಗ್ಗೆ 9.8 ನಿಮಿಷ ವರೆಗೆ ಶುಭ ಫಲಾಫಲ ನೋಡುವುದಾದರೆ. ಅಂದು ನಿಮಗೆ ಚಂದ್ರ ದೇವನು ನಿಮ್ಮ ನಕ್ಷತ್ರದಲ್ಲಿ ಗೋಚರಿಸುತ್ತಾನೆ, ಚಂದ್ರ ಗ್ರಹ ಹಾಗೂ ಕೇತು ಗ್ರಹ ಎರಡು ಕೂಡ ಒಂದೇ ಮನೆಯಲ್ಲಿ ಸಂಧಿಸುವುದರಿಂದ ನಿಮಗೆ ಅಂದು ಆಲಸ್ಯತನ ಹೆಚ್ಚಾಗುತ್ತದೆ. ನಿಮ್ಮ ಕೆಲಸ ಕಾರ್ಯ ಕ್ಷಮತೆ ಕುಂದುತ್ತದೆ. ಆದಷ್ಟು ಅಂದು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ಮಾತಿನಲ್ಲಿ ಆದಷ್ಟು ಹಿತವಿದ್ದು ಇತಿಮಿತಿಯಲ್ಲಿರಬೇಕು.

ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು, ಆ ದಿನದಂದು ನೀವು ಸೇವಿಸುವ ಆಹಾರದ, ಪಾನೀಯದ ಬಗ್ಗೆ ಹೆಚ್ಚು ಜಾಗ್ರತೆಯಿಂದ ಇರಬೇಕು. ಇನ್ನು ದಿನಾಂಕ 11, 12, 13 ರ ಮಧ್ಯಾಹ್ನ ಸಮಯದ ಫಲಾಫಲಗಳನ್ನು ನೋಡುವುದಾದರೆ ನಿಮಗೆ ಅಂದು ಹೆಚ್ಚು ಲಾಭದಾಯಕವಾಗಿರುತ್ತದೆ. ನಿರುದ್ಯೋಗಿ ವ್ಯಕ್ತಿಗಳಿಗೆ ಉದ್ಯೋಗ ಅವಕಾಶವಿರುತ್ತದೆ. ಸಂತಾನಹೀನ ದಂಪತಿಗಳಿಗೆ ಈ ವಾರದಂದು ಶುಭ ಸಮಾಚಾರ ಸಿಗುತ್ತದೆ. ನಿಮಗೆ ಈ ವಾರದಲ್ಲಿ ಆಕಸ್ಮಿಕವಾಗಿ ವಿದೇಶಿ ಮಿತ್ರರು ಭೇಟಿಯಾಗುವ ಸಾಧ್ಯವಿರುತ್ತದೆ. ಅಂದಹಾಗೆ ನೀವು ಕೈಗೊಳ್ಳುವ ತೀರ್ಥಕ್ಷೇತ್ರ ಯಾತ್ರೆಗಳಿಗೆ ಅಡೆತಡೆಯಿಲ್ಲದೆ ಸುಗಮವಾಗಿ ಹೋಗಬಹುದಾಗಿದೆ. ಯಾವುದೇ ಕಾರಣಕ್ಕೂ ಹೊಸ ಉದ್ಯಮವನ್ನು, ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಬೇಡಿ ಏಕೆಂದರೆ ಇದು ಸೂಕ್ತ ಸಮಯವಲ್ಲ, ಇನ್ನು ವಿದ್ಯಾರ್ಥಿಗಳಿಗೆ ತಮ್ಮ ಓದಿನಲ್ಲಿ ಹೆಚ್ಚು ಆಸಕ್ತಿ ಬೆಳೆದು ಪ್ರಗತಿ ಕಾಣುತ್ತಾರೆ.

ಅಂತಿಮವಾಗಿ ದಿನಾಂಕ 13 ರ ಮಧ್ಯಾಹ್ನದ ನಂತರ ಅಂದು ನಿಮಗೆ ಫಲಾಫಲಗಳ ಬಗ್ಗೆ ಹೇಳುವುದಾದರೆ ನಿಮಗಂದು ಆರ್ಥಿಕ ನಷ್ಟ ಎದುರಾಗುತ್ತದೆ. ಏಕೆಂದರೆ ಅಂದು ಚಂದ್ರ ಮತ್ತು ಶನಿ ಗ್ರಹವು ಒಂದೇ ಮನೆಯಲ್ಲಿ ಸಂಧಿಯಾಗುವ ದಿನವಾಗಿದೆ, ಆದ್ದರಿಂದ ನಿಮಗೆ ಅನಾರೋಗ್ಯ ಸಮಸ್ಯೆ ಕಾಣಬಹುದಾಗಿದೆ. ಉದ್ಯೋಗದಲ್ಲಿ ಕೆಲಸದ ವಿಚಾರವಾಗಿ ವಾದ ವಿವಾದಗಳು, ಕೌಟುಂಬಿಕ ಕಲಹಗಳು, ಕೋರ್ಟು ಕಚೇರಿಗಳಲ್ಲಿ ಅಪಜಯ, ಶತ್ರುಗಳ ಭಯ ಹೀಗೆ ಅನೇಕ ಸಮಸ್ಯೆ ಹೆಚ್ಚಾಗುತ್ತದೆ. ನಿಮಗೆ ಅದೃಷ್ಟ ತರುವ ಬಣ್ಣ ಹಳದಿ ಹಾಗೂ ನೀಲಿ, ಕಡು ಕಪ್ಪು ಬಣ್ಣವಾಗಿದೆ. ಇನ್ನು ನಿಮಗೆ ಅದೃಷ್ಟ ತರುವ ಶುಭ ಸಂಖ್ಯೆಗಳು 8,3 ಸಂಖ್ಯೆಯಾಗಿದೆ. ಕೆಲವೊಂದು ದೋಷ ಪರಿಹಾರಕ್ಕಾಗಿ ಪಕ್ಷಿಗಳಿಗೆ ಧಾನ್ಯ ನೀಡುವುದು, ಗೋವುಗಳಿಗೆ ಹಸಿರು ಹುಲ್ಲು ನೀಡುವುದರಿಂದ ಶುಭ ಫಲಿಸುತ್ತದೆ.

%d bloggers like this: