ಜನೆವರಿ ಎರಡು ಮತ್ತು ಮೂರನೇ ವಾರದ ನಿಮ್ಮ ಭವಿಷ್ಯ ಹೀಗಿರಲಿದೆ

ಹೊಸ ವರ್ಷದ ಎರಡನೇ ವಾರದ ಭವಿಷ್ಯ ನೋಡುವುದಾದರೆ ರಾಶಿಚಕ್ರದಲ್ಲಿ ಮೊದಲನೇಯ ರಾಶಿಯಾಗಿರುವ ಮೇಷ ರಾಶಿ: ಈ ರಾಶಿಯವರಿಗೆ ಈ ವಾರ ಉತ್ತಮವಾಗಿದ್ದು, ಸ್ವಂತ ವ್ಯಾಪಾರ ವ್ಯವಹಾರ ಮಾಡುವವರಿಗೆ ಉತ್ತಮ ಲಾಭದಾಯಕವಾಗಿರುತ್ತದೆ. ಈರಾಶಿಯವರಿಗೆ ಈ ವಾರ ಇವರು ಇಷ್ಟಪಟ್ಟ ವಸ್ತು ಖರೀದಿಸಬಹುದಾಗಿದೆ. ಎಲ್ಲರಮನಸ್ಸುನ್ನೂ ಗೆಲ್ಲುವಂತಹ ವ್ಯಕ್ತಿಯಾಗಿರುತ್ತಾರೆ. ಪೂರ್ವಜರ ಆಸ್ತಿ ವಿಚಾರದಲ್ಲಿ ಶುಭವಾಗುತ್ತದೆ, ನಿಮ್ಮ ಮಕ್ಕಳಿಂದ ಕೀರ್ತಿ, ಯಶಸ್ಸು ಲಭಿಸುತ್ತದೆ. ನೀವು ನಂಬಿದ ಜನರಿಂದ ನಿಮಗೆ ಸಹಾಯ ಬರುತ್ತದೆ.

ವೃಷಭ ರಾಶಿ: ಈ ರಾಶಿಯವರಿಗೆ ಈ ವಾರ ಸಾಧಾರಣವಾಗಿದ್ದು, ಇವರಿಗೆ ಶಾರೀರಿಕವಾಗಿ ಸಮಸ್ಯೆಗಳು ಎದುರಾಗುತ್ತವೆ, ಇನ್ನು ನಿಮ್ಮ ಮಾತಿನ ಹಿಡಿತ ಇಲ್ಲದಿದ್ದರೆ ನಿಮ್ಮ ಗೌರವಕ್ಕೆ ಧಕ್ಕೆ ಬರುತ್ತದೆ. ಇನ್ನು ಆಸ್ತಿಯ ವಿಚಾರದಲ್ಲಿ ತಂದೆ ತಾಯಿಗಳ ಜೊತೆ ಭಿನ್ನಾಭಿಪ್ರಾಯ ಮೂಡುವಂತದ್ದು, ಮೇಲಾಧಿಕಾರಿ ಉಂಟಾಗುತ್ತದೆ, ನೀವು ಗಳಿಸಿದ ಹಣ ವ್ಯಯವಾಗುತ್ತಿದೆ. ಈ ರಾಶಿಯವರಿಗೆ ಶುಭದಿನಗಳು ಬುಧವಾರ, ಗುರುವಾರ ಶುಕ್ರವಾರ. ಪರಿಹಾರವಾಗಿ ಉತ್ತರ ದಿಕ್ಕಿಗೆ ಹರಿಯುವ ನೀರಿನಲ್ಲಿ ವಿಳ್ಯಾದೆಲೆ ಅಡಿಕೆಯನ್ನು ತೇಲಿಬಿಟ್ಟು, ಅಲ್ಲಿಯೇ ಸ್ನಾನ ಮಾಡಿ ಈಶ್ವರನ ದರ್ಶನ ಮಾಡಿದರೆ ಒಳಿತಾಗುತ್ತದೆ.

ಮಿಥುನ: ಈ ರಾಶಿಯವರಿಗೆ ಈ ವಾರವು ಸಾಧರಣವಾಗಿದ್ದು, ನೆರೆಹೊರೆಯವರಿಂದ ಕಿರಿಕಿರಿ ಎದುರಾಗುತ್ತದೆ. ಕೈಗೆ ಬಂದದ್ದು ಬಾಯಿಗೆ ದಕ್ಕಿಲ್ಲ ಎಂಬಂತಾಗುತ್ತದೆ. ನಿಮ್ಮ ಆಲೋಚನೆಗಳಲ್ಲಿ ಗೊಂದಲ, ನಿಮ್ಮ ಕೋಪದಲ್ಲಿ ಹಿಡಿತವಿರಲಿ, ವಿರೋಧಿಗಳು ಬೆಂಬಿಡದೆ ಕಾಡಬಹುದಾಗಿದೆ. ಪರಿಹಾರಕ್ಕಾಗಿ ಕುಲದೇವರ ಪ್ರಾರ್ಥನೆ ಮಾಡುವುದರಿಂದ ನಿಮಗೆ ಒಳಿತಾಗುತ್ತದೆ.

ಕರ್ಕಾಟಕ: ಈ ರಾಶಿಯವರಿಗೆ ಈ ವಾರ ಉತ್ತಮವಾಗಿದೆ. ನಿಮ್ಮ ದುಡುಕಿನ ನಿರ್ಧಾರದಿಂದ ಕೆಡುಕಾಗುವ ಸಂಭವ ಇರುತ್ತದೆ ಎಚ್ಚರದಿಂದ ಇದ್ದರೆ ಶುಭವಾಗುತ್ತದೆ. ಇನ್ನು ಧಾರ್ಮಿಕರ ವಿಚಾರಗಳಲ್ಲಿ ಆಸಕ್ತಿ, ಪುಣ್ಯಕ್ಷೇತ್ರ ದರ್ಶನ. ಸೋಮವಾರ, ಮಂಗಳವಾರ ಮತ್ತು ಗುರುವಾರ ಶುಭದಿನಗಳಾಗಿವೆ.

ಸಿಂಹ: ಈ ರಾಶಿಯವರಿಗೆ ಈ ವಾರ ಸಾಧಾರಣವಾಗಿದೆ. ಇನ್ನು ವಿದ್ಯಾರ್ಥಿಗಳಿಗೆ ಓದುವ ಆಸಕ್ತಿ ಹೆಚ್ಚಾಗುತ್ತದೆ. ಆತುರದ ನಿರ್ಧಾರದಿಂದ ಸಮಸ್ಯೆ ಉಂಟಾಗುತ್ತದೆ. ಸತಿ ಪತಿಯರಲ್ಲಿ ಕಲಹ ಏರ್ಪಡಬಹುದು, ನೆರೆ ಹೊರೆಯವರಿಂದ ಕಿರಿಕಿರಿ ಉಂಟಾದರೆ ಪ್ರತಿಕ್ರಿಯಿಸಬೇಡಿ. ಸೋಮವಾರ, ಮಂಗಳವಾರ ಶುಭದಿನಗಳಾವೆ.

ಕನ್ಯಾ: ಈ ರಾಶಿಯವರಿಗೆ ಈ ವಾರ ಸಾಧಾರಣವಾಗಿದ್ದು, ನಿಮ್ಮ ಕಾಯಕದಲ್ಲಿ ನೀವು ಅಕ್ರಮವಾಗಿ ಸಂಪಾದಿಸಿದ ಹಣಕ್ಕೆ ಕುತ್ತು ಬರುತ್ತದೆ. ಹಿಯ್ಯಾಳಿಸುವವರ ಸಂಖ್ಯೆ ಹೆಚ್ಚಾಗಬಹುದು. ರಕ್ತಸಂಬಂದಿ ಕಾಯಿಲೆ ಉಂಟಾಗಬಹುದು. ಬುಧವಾರ, ಭಾನುವಾರ ಶುಭವಾಗಿದೆ. ಪರಿಹಾರಕ್ಕಾಗಿ ನಿಮ್ಮ ಗ್ರಾಮದೇವತೆಯನ್ನು ಪೂಜಿಸುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ.

ತುಲಾ: ಈ ರಾಶಿಯವರಿಗೆ ಈ ವಾರ ಉತ್ತಮವಾಗಿದ್ದು ನಿಮ್ಮ ವ್ಯಕ್ತಿತ್ವದಲ್ಲಿ ಆದ ಬದಲಾವಣೆ, ಹೋರಾಟದ ಮನೋಭಾವ ಬೆಳೆಸಿಕೊಳ್ಳುವುದರಿಂದ ನೀವು ಉನ್ನತ ಸ್ಥಾನಕ್ಕೆ ಹೋಗಬಹುದು. ಬೇರೆ ಊರಿಗೆ ಹೋಗಿ ಉದ್ಯೋಗ ಹುಡುಕುತ್ತಿರುವವರಿಗೆ ಹೊಸ ಉದ್ಯೋಗ ಸಿಗುತ್ತದೆ. ನಿಮಗೆ ದೊಡ್ಡ ವ್ಯಕ್ತಿಗಳಿಂದ ಸಹಾಯ ಸಹಕಾರ ಸಿಗುತ್ತದೆ. ನೀವು ಮಾಡಿದ ಪುಣ್ಯಕಾರ್ಯಗಳಿಗೆ ಸಮಾಜದಲ್ಲಿ ಸ್ಥಾನಮಾನ ಗೌರವ ಸಿಗುತ್ತದೆ.

ವೃಶ್ಚಿಕ ರಾಶಿ : ಈ ವೃಶ್ಚಿಕ ರಾಶಿಯವರಿಗೆ ಈ ವಾರ ಉತ್ತಮವಾಗಿದ್ದು, ಸರ್ಕಾರಿ ನೌಕರರಿಗೆ ಬಡ್ತಿಸಿಗುವ ಅವಕಾಶವಿದೆ. ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ವಾಹನ ಮಾರಾಟದಿಂದ ಲಾಭವಾಗುತ್ತದೆ. ಭಾನುವಾರ, ಮಂಗಳವಾರ, ಗುರುವಾರ ಶುಭದಿನಗಳಾಗಿವೆ.

ಧನಸ್ಸು: ಈ ರಾಶಿಯವರಿಗೆ ಈ ವಾರ ಸಾಧಾರಣವಾಗಿದ್ದು, ನಿಮ್ಮ ತಪ್ಪು ನಿರ್ಧಾರದಿಂದ ನಿಮ್ಮ ಬೆಳವಣಿಗೆ ಕುಂಠಿತ ಕಾಣುತ್ತದೆ. ತಾಳ್ಮೆ ಸಹನೆಯಿಂದ ವರ್ತಿಸಿ, ಇಲ್ಲವಾದರೆ ನಿಮ್ಮ ಸಹೋದ್ಯೋಗಿರೊಂದಿಗೆ ಸಾಮರಸ್ಯ ಕಳೆದುಕೊಂಡು ಮಾನಸಿಕ ನೆಮ್ಮದಿ ಹದಗೆಡುತ್ತದೆ. ಇನ್ನು ದುಷ್ಟರ ಸಹವಾಸ ಬೇಡ, ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದರೆ ಕಠಿಣ ಶಿಕ್ಷೆ ಅನುಭವಿಸಬೇಕಾದೀತು ಎಚ್ಚರ. ಗ್ರಾಮದೇವತೆಗೆ ಉಡಿತುಂಬಿ ಪೂಜಿಸಿ ದರ್ಶನ ಮಾಡಿ ಒಳಿತಾಗುತ್ತದೆ.

ಮಕರ: ಮಕರ ರಾಶಿಯವರಿಗೆ ಈ ವಾರ ಉತ್ತಮವಾಗಿದ್ದು, ಈ ವಾರದಲ್ಲಿ ಆರ್ಥಿಕ ಪ್ರಗತಿ ಕಾಣುತ್ತಾರೆ, ಇನ್ನು ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದು, ದೈವಬಲವಿರುತ್ತದೆ. ಯಾವುದೇ ಕೆಲಸ ಕಾರ್ಯಗಳಿಗೆ ಅಂಜದೆ ಮುನ್ನುಗ್ಗಿದರೆ ಜಯ ಸಾಧಿಸುತ್ತಾರೆ. ಇನ್ನು ಭೂ ಖರೀದಿಯಲ್ಲಿ ಲಾಭದಾಯಕವಾಗಿದೆ. ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಬುಧವಾರ, ಶುಕ್ರವಾರ, ಶನಿವಾರ ಶುಭದಿನಗಳಾಗಿವೆ.

ಕುಂಭ ರಾಶಿ: ಈ ರಾಶಿಯವರಿಗೆ ಈ ವಾರ ಸಾಧಾರಣವಾಗಿದ್ದು, ನಿಮಗೆ ಕಷ್ಟದ ದಿನಗಳು ಎದುರಾಗುತ್ತದೆ. ನಿಮ್ಮ ಸಮಸ್ಯೆಗಳು ದ್ವಿಗುಣವಾಗುವ ಸಾಧ್ಯತೆಯಿರುತ್ತದೆ. ಇನ್ನು ನಿಮ್ಮ ಕುಟುಂಬದಲ್ಲಿ ನಿಮ್ಮಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ. ನಿಮ್ಮ ಮಾತಿನಿಂದ ಗೌರವಕ್ಕೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ, ಆದ್ದರಿಂದ ನಿಮ್ಮ ಮಾತಿನಲ್ಲಿ ಹಿಡಿತವಿರಲಿ. ಶುಕ್ರವಾರ, ಶನಿವಾರ ಶುಭದಿನ ಪ್ರಾಣಿಗಳಿಗೆ ಆಹಾರ ನೀಡಿ ಬರುವಂತಹ ಸಮಸ್ಯೆ ಕಡಿಮೆಯಾಗುತ್ತದೆ.

ಮೀನ: ಈ ಮೀನ ರಾಶಿಯವರಿಗೆ ಈ ವಾರವು ಉತ್ತಮವಾಗಿದ್ದು, ಕಲ್ಪನಾಲೋಕದಲ್ಲಿ ನಿಮ್ಮ ಕನಸುಗಳು ಚಿಗುರೊಡೆಯುತ್ತವೆ. ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ದೊರೆತು ಉತ್ತಮವಾದ ಜೀವನ ನಿಮ್ಮದಾಗುತ್ತದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ದೈವಬಲ ಲಭಿಸಿ, ನ್ಯಾಯಾಲಯದ ಹಳೆಯ ಪ್ರಕರಣಗಳಲ್ಲಿ ತೀರ್ಪು ನಿಮ್ಮ ಪರವಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ಸಾಹ ಮತ್ತು ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಭಾನುವಾರ, ಮಂಗಳವಾರ ಶನಿವಾರ ಶುಭ ದಿನಗಳಾಗಿವೆ.

%d bloggers like this: