ಜನೆವರಿ ತಿಂಗಳಲ್ಲಿ ಈ 6 ರಾಶಿಯವರಿಗೆ ಶುಭ ಹಾಗೂ ಈ 6 ರಾಶಿಯವರು ಸ್ವಲ್ಪ ಎಚ್ಚರದಿಂದ ಮುನ್ನಡೆಯಿರಿ

2021ರ ಹೊಸ ವರ್ಷದ ಜನವರಿ ತಿಂಗಳ ಭವಿಷ್ಯದಲ್ಲಿ ಈ ಆರು ರಾಶಿಗಳ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ, ಕೆಲವು ರಾಶಿ ಅವರಿಗೆ ಆರ್ಥಿಕ ಲಾಭಗಳನ್ನು, ಶುಭಫಲಗಳನ್ನು ಉಂಟುಮಾಡಿದರೆ, ಕೆಲವು ರಾಶಿ ಅವರಿಗೆ ಅಶುಭ ಫಲಗಳನ್ನು ನೀಡುತ್ತದೆ. ಈ ತಿಂಗಳಲ್ಲಿ ವಿಶೇಷವಾಗಿ ಗ್ರಹಗತಿಗಳ ಬಗ್ಗೆ ತಿಳಿಯುವುದಾದರೆ ಜನವರಿ ತಿಂಗಳು ವಿಶೇಷವಾಗಿದೆ. ಸಂಕಷ್ಟ ಚತುರ್ಥಿ ಇದ್ದು ಜನವರಿ 14ನೇ ತಾರೀಕಿನಿಂದ ಮಕರ ಸಂಕ್ರಮಣ ಇರುತ್ತದೆ. ಜನವರಿ 3ರಿಂದ ಶುಕ್ರ ಗ್ರಹವು ಧನಸ್ಸು ರಾಶಿಗೆ ಪ್ರವೇಶ ಪಡೆಯುತ್ತದೆ. ಮಕರ ರಾಶಿಗೆ ಬುಧ ಗ್ರಹವು ತನ್ನ ಸ್ಥಾನ ಬದಲಾಯಿಸುತ್ತಾನೆ. ಇನ್ನು ಸೂರ್ಯಗ್ರಹವು ಇದೇ 14ರಂದು ಮಕರ ರಾಶಿಗೆ ಸಂಚರಿಸುತ್ತಾನೆ. ಈ ಎಲ್ಲಾ ಗ್ರಹಗತಿಗಳ ಆಧಾರದ ಮೇಲೆ ಒಂದಷ್ಟು ರಾಶಿಗಳು ಭಾರಿ ಬದಲಾವಣೆ ಕಾಣುತ್ತದೆ. ಕ್ರಮವಾಗಿ ರಾಶಿಚಕ್ರದ ಕ್ರಮವಾಗಿ ಮೊದಲನೇದಾಗಿ.

ಮೇಷ ರಾಶಿ: ಈ ರಾಶಿಯವರಿಗೆ ಕುಜ ಗ್ರಹ ನೀಚ ಸ್ಥಾನದಲ್ಲಿ ಇರುವುದರಿಂದ ಪರಮಾದ್ಭುತ ವಾದಂತಹ ಯೋಗವು ಲಭಿಸುತ್ತದೆ, ನೀವು ಅಂದುಕೊಂಡ ಕೆಲಸಗಳು ಸರಾಗವಾಗಿ ನಡೆಯುತ್ತದೆ. ಭೂವ್ಯಾಜ್ಯ ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಧನಲಾಭ ಉಂಟು ಮಾಡುತ್ತದೆ. ನಿಮ್ಮ ರಾಶಿಯ ಮನೆಯಲ್ಲಿ ರಾಹು ಗ್ರಹ ಬರುವುದರಿಂದ ಕೌಟುಂಬಿಕ ಕಲಹಗಳು ಏರ್ಪಡುತ್ತದೆ. ನಿಮ್ಮ ಆತ್ಮೀಯರು ನಿಮ್ಮಿಂದ ದೂರ ವಾಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ, ಇನ್ನು ಜನವರಿ ಮೂರರಿಂದ ಶುಕ್ರಗ್ರಹವು 8ನೇ ಮನೆಗೆ ಆಗಮಿಸುವುದರಿಂದ ನೀವು ಯಾವುದೇ ಕಾರಣಕ್ಕೂ ಬಂಗಾರ,ಭೂಮಿ ಖರೀದಿ ಮಾಡಬಾರದು. ಭಾಗ್ಯಸ್ಥಾನ ಆರಂಭವಾದಾಗ ವಸ್ತ್ರ, ಒಡವೆ ಬಂಗಾರ ಖರೀದಿಸುವುದು ಸೂಕ್ತ ಸಮಯವಾಗಿರುತ್ತದೆ. ಶನಿದೇವರ ಪ್ರಭಾವದಿಂದ ನಿಮ್ಮ ಉದ್ಯೋಗದಲ್ಲಿ ಪ್ರಗತಿ ಅಥವಾ ಹೊಸ ಉದ್ಯೋಗಕ್ಕೆ ಹೆಜ್ಜೆ ಇಡುವ ಅವಕಾಶ ನಿಮ್ಮದಾಗಿರುತ್ತದೆ. ಕೆಲವು ಸಮಸ್ಯೆಗಳ ಪರಿಹಾರಕ್ಕಾಗಿ ಭುವರ ಸ್ವಾಮಿ ದರ್ಶನ ಮತ್ತು ಭುವರ ಸ್ವಾಮಿ ಶ್ಲೋಕವನ್ನು 108 ಬಾರಿ ಜಪಿಸಬೇಕಾಗುತ್ತದೆ.

ವೃಷಭ ರಾಶಿ: ಈ ರಾಶಿಯವರಿಗೆ ಶುಕ್ರ ಗ್ರಹವು ಅಧಿಪತಿಯಾಗಿರುವುದರಿಂದ ಯೋಗ ಲಭಿಸುತ್ತದೆ. ಆದರೆ ಯಾವುದೇ ರೀತಿಯ ಶುಭ ಕಾರ್ಯವನ್ನು ಮಾಡಲು ಹೋಗಬೇಡಿ ಸದ್ಯದ ಮಟ್ಟಿಗೆ ಮುಂದಕ್ಕೆ ಹಾಕಿಕೊಳ್ಳಿ. ನಿಮಗೆ 12ನೇ ಮನೆಯಲ್ಲಿ ಕುಜಗ್ರಹ ಸ್ಥಾನ ಹೊಂದಿರುವುದರಿಂದ ಕೆಲಸ ಮಾಡುವಾಗ ಆದಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಧೈರ್ಯದಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ಧನಸ್ಸು ರಾಶಿಗೆ ಶುಕ್ರಗ್ರಹವು ಸಂಚಾರ ಮಾಡಿದಾಗ ನಿಮಗೆ ಶುಭವಾಗುತ್ತದೆ, ಇನ್ನು ನೀವು ವ್ಯವಸಾಯಕ್ಕೆ ಹೆಚ್ಚಿನ ಮಹತ್ವ ನೀಡಬಹುದು. ಗುರುಹಿರಿಯರನ್ನು ಪೂಜ್ಯ ಭಾವನೆಯಿಂದ ನೋಡುವುದರಿಂದ ನಿಮಗೆ ಹಿರಿಯರ ಕೃಪೆ ಆಶೀರ್ವಾದ ನಿಮ್ಮದಾಗಿರುತ್ತದೆ. ಆರ್ಥಿಕ ಸಮಸ್ಯೆ ಇತರ ಸಮಸ್ಯೆಗಳಿಗೆ ಗುರುವನ್ನು ಪ್ರಾರ್ಥನೆ ಮಾಡಿ ಪ್ರತಿದಿನ ದುರ್ಗಾದೇವಿ ಪೂಜೆ ಮತ್ತು ದುರ್ಗಾ ದೇವಿ ಅಷ್ಟೋತ್ತರ ಮಂತ್ರಗಳ ಪಠಿಸುವುದರಿಂದ ಒಳಿತಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಈ ಜನವರಿ ತಿಂಗಳು ಭೂಮಿ ವಾಹನ ಖರೀದಿ ಮಾಡುವ ಯೋಗವಿದೆ. ಸಿಹಿಕಹಿ ಅನುಭವಗಳನ್ನು ನೋಡಬಹುದು, ನಿಮ್ಮ ಮಕ್ಕಳಿಂದ ನಿಮಗೆ ತೊಂದರೆ ಉಂಟಾಗುತ್ತದೆ. ಮನೆಯ ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಇನ್ನು ಹೆಚ್ಚು ಶ್ರಮಪಟ್ಟು ಕೆಲಸ ಮಾಡುವುದಕ್ಕಿಂತ ಬುದ್ದಿವಂತಿಕೆಯಿಂದ ಕೆಲಸ ಕಾರ್ಯಗಳನ್ನು ಮಾಡಿ ಯಶಸ್ವಿಯಾಗಬಹುದು. ನಿಮ್ಮ ರಾಶಿಯ ಅಧಿಪತಿ ಬುಧ ಗ್ರಹವು ಜನವರಿ 4ರಿಂದ ಮಕರ ರಾಶಿಗೆ ಸಂಚಾರ ಮಾಡುತ್ತಾನೆ ಆದ್ದರಿಂದ ದೋಷ ಪರಿಹಾರಕ್ಕಾಗಿ ಪ್ರತಿ ಮಂಗಳವಾರ ತುಳಸಿ ಗಿಡವನ್ನು ದಾನ ಮಾಡುವುದರ ಜೊತೆಗೆ ತುಳಸಿ ಅರ್ಚನೆ ಮಾಡಿಸುವುದರ ಮೂಲಕ ಶ್ರೀ ವಿಷ್ಣುವಿನ ದರ್ಶನ ಮಾಡಿ.

ಕಟಕ ರಾಶಿ: ಈ ರಾಶಿಯವರಿಗೆ ಜನವರಿ ತಿಂಗಳಿನಲ್ಲಿ ನಿಮ್ಮ ವ್ಯಾಪಾರ ವ್ಯವಹಾರಗಳು ಅಚ್ಚುಕಟ್ಟಾಗಿ ನಡೆಯುತ್ತದೆ, ಕೋರ್ಟು ಕಚೇರಿ ವ್ಯಾಜ್ಯಗಳಲ್ಲಿ ಜಯ ನಿಮ್ಮದಾಗುತ್ತದೆ. ಕಟಕ ರಾಶಿ ಅಧಿಪತಿಯಾಗಿರುವ ಚಂದ್ರನಾಗಿದ್ದು, 5ನೇ ಮನೆಯಲ್ಲಿ ಕೇತು ಗ್ರಹ ಇರುವುದರಿಂದ ನಿಮಗೆ ಶುಭವಾಗುತ್ತದೆ. ದುರ್ಗಾದೇವಿಯನ್ನು ಪೂಜಿಸಿ.

ಸಿಂಹ ರಾಶಿ: ಈ ಸಿಂಹ ರಾಶಿಯವರಿಗೆ ಬಹಳ ಒಳ್ಳೆಯ ಶುಭ ಸಮಾಚಾರಗಳು ಜನವರಿ ತಿಂಗಳಿನಲ್ಲಿ ಕೇಳಿಬರುತ್ತವೆ. ದೂರದ ಪ್ರಯಾಣವನ್ನು ಎಚ್ಚರದಿಂದ ನಿರ್ವಹಿಸಿ. ನಿಮ್ಮ ಪೋಷಕರು ನಿಮಗೆ ಸಂಪೂರ್ಣವಾದ ಸಹಕಾರವನ್ನು ನೀಡುತ್ತಾರೆ, ನಿಮಗೆ ಮನೆಕಟ್ಟುವ ಯೋಗ, ಅವಿವಾಹಿತರಿಗೆ ಕಂಕಣಭಾಗ್ಯ, ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ದೊರೆಯುತ್ತದೆ. ಸಿಂಹರಾಶಿಯ ಅಧಿಪತಿಯಾಗಿರುವ ಸೂರ್ಯ ಗ್ರಹವು 5ನೇ ಮನೆಯಲ್ಲಿರುವುದರಿಂದ ಒಳ್ಳೆಯ ದಿನಗಳು ನಿಮ್ಮದಾಗುತ್ತದೆ.

ತುಲಾರಾಶಿ: ತುಲಾ ರಾಶಿಯ ಅಧಿಪತಿ ಗ್ರಹ ವಾಗಿರುವ ಶುಕ್ರವು ನಿಮಗೆ ಧೈರ್ಯ ಜೊತೆಗೆ ನಿಮ್ಮ ಜೀವನದಲ್ಲಿ ಸುಧಾರಣಾ ಫಲಗಳನ್ನು ನೀಡುತ್ತದೆ, ಗುರು ನೀಚ ಸ್ಥಾನದಲ್ಲಿರುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾಗುತ್ತದೆ. ನೀವು ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುವ ಯೋಗ ನಿಮ್ಮದಾಗಿರುತ್ತದೆ. ನಿಮ್ಮ ಸಮಸ್ಯೆಗಳ ದೋಷ ಪರಿಹಾರಕ್ಕಾಗಿ ಪ್ರತಿ ಸೋಮವಾರ, ಶುಕ್ರವಾರ ಶಿವನ ದೇವಾಲಯಕ್ಕೆ ಭೇಟಿ ಪರಮೇಶ್ವರನ ದರ್ಶನ ಮಾಡಿ. ನಿಮ್ಮ ಕೈಲಾದಷ್ಟು ಬಡವರಿಗೆ ಅಕ್ಕಿಯನ್ನು ದಾನ ಮಾಡಬೇಕಾಗಿರುತ್ತದೆ.

ವೃಶ್ಚಿಕ ರಾಶಿ: ಈ ವೃಶ್ಚಿಕ ರಾಶಿಯವರಿಗೆ ಭೂಮಿ ಖರೀದಿ ವಾಹನ ಖರೀದಿ, ಮನೆ ಕಟ್ಟುವಂತಹ ಯೋಗವಿರುತ್ತದೆ. ಬಂಧುಗಳ ಆಗಮನದಿಂದ ಕುಟುಂಬದಲ್ಲಿ ಸುಖ ಸಂತೋಷ ಏರ್ಪಡುತ್ತದೆ. ಆರ್ಥಿಕವಾಗಿ ಅಭಿವೃದ್ಧಿ ಕಂಡು ಸಾಲಭಾದೆ ನಿವಾರಣೆರಾಗುತ್ತದೆ ವೃಶ್ಚಿಕ ರಾಶಿಯ ಅಧಿಪತಿಯಾಗಿರುವ ಕುಜಗ್ರಹವು ಆರನೇ ಮನೆಯಲ್ಲಿ ಇರುವುದರಿಂದ ನಿಮಗೆ ಶತ್ರುನಾಶ ಮತ್ತು ಅನಾರೋಗ್ಯದಿಂದ ಮುಕ್ತಿ ಕೊಳ್ಳಬಹುದಾಗಿದೆ, ನಿಮ್ಮ ರಾಶಿ ಮನೆಯಲ್ಲಿ ರಾಹು ಆಗಮನ ವಾಗುತ್ತದೆ ಆದ್ದರಿಂದ ಶುಭ ಕಾರ್ಯಗಳಲ್ಲಿ ಅಡೆತಡೆ ಉಂಟಾಗಬಹುದು. ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಯ ಅಧಿಪತಿಯಾದ ಗುರುಗ್ರಹವು ಪರಮ ನೀಚಸ್ಥಾನದಿಂದ ಬದಲಾಗುತ್ತಾನೆ, ಆದ್ದರಿಂದ ಹೊಸ ಉದ್ಯೋಗವನ್ನು ಆರಂಭಿಸಲು ಹೋಗಬೇಡಿ. ಇರುವ ಕೆಲಸದಲ್ಲಿ ತೃಪ್ತಿ ಕಂಡುಕೊಳ್ಳಿ. ನೂತನ ಕೆಲಸಕ್ಕೆ ಕೈ ಹಾಕುವುದರಿಂದ ಕಂಟಕ ಎದುರಾಗುತ್ತದೆ. ಅವಿವಾಹಿತರಿಗೆ ಕಂಕಣಭಾಗ್ಯ ದೊರೆಯುತ್ತದೆ, ವಿಧ್ಯಾರ್ಥಿಗಳು ಶಿಕ್ಷಣದಲ್ಲಿ ಪ್ರಗತಿ ಕಾಣುತ್ತಾರೆ ಯಾವುದೇ ಕಾರಣಕ್ಕೂ ವಾಹನವನ್ನು ವೇಗವಾಗಿ ಚಲಿಸಬೇಡಿ.

ಮಕರ ರಾಶಿ: ಮಕರ ರಾಶಿಯ ಅಧಿಪತಿ ಗ್ರಹ ವಾಗಿರುವ ಶನಿಗ್ರಹವು ಅಂದರೆ ಇದನ್ನು ಜನ್ಮ ಶನಿ ಎಂದು ಕರೆಯಬಹುದಾಗಿದೆ, ನಿಮಗೆ ಇದರಿಂದ ಅನುಕೂಲ ಹೆಚ್ಚಾಗಲಿದ್ದು ನಿಮ್ಮ ರಾಶಿಗೆ ಸೂರ್ಯನು ಆಗಮನ ಆಗಿ ಆರೋಗ್ಯದಲ್ಲಿ ಪ್ರಗತಿ ಕಾಣುತ್ತದೆ. ಪಿತ್ರಾರ್ಜಿತ ಆಸ್ತಿಗಳಿಂದ ಕೌಟುಂಬಿಕ ಕಲಹಗಳು ಕಾಣಬಹುದಾಗಿದೆ. ತೀರ್ಥ ಕ್ಷೇತ್ರ ಪುಣ್ಯಕ್ಷೇತ್ರ ದರ್ಶನ ಮಾಡುವುದರಿಂದ ನಿಮ್ಮ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ. ಇನ್ನು ಬಡ ಹೆಣ್ಣುಮಕ್ಕಳಿಗೆ ವಸ್ತ್ರದಾನ ಮಾಡುವುದರಿಂದ ನಿಮ್ಮ ದೋಷ ನಿವಾರಣೆಯಾಗುತ್ತದೆ.

ಕುಂಭ ರಾಶಿ: ಕುಂಭ ರಾಶಿಯ ಅಧಿಪತಿಯಾಗಿರುವ ಶನಿಯು ನಷ್ಟದಲ್ಲಿದ್ದರೂ ಕೂಡ ಶನಿದೇವರ ಕೃಪೆಯಿಂದ ನಿಮಗೆ ಧನ ಲಾಭವಾಗುತ್ತದೆ, ವಾಹನ ವಿಚಾರಗಳಲ್ಲಿ ಆದಷ್ಟು ಜಾಗೃತವಾಗಿರಿ, ಜೀವನದ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಚೆನ್ನಾಗಿ ಆಲೋಚನೆ ಮಾಡಿ. ಗೋವುಗಳಿಗೆ ಆಹಾರ ನೀಡುವುದರಿಂದ ನಿಮ್ಮ ಸಕಲ ದೋಷಗಳು, ಸಮಸ್ಯೆಗಳು ನಿವಾರಣೆಯಾಗುತ್ತದೆ.

ಮೀನ ರಾಶಿ: ಮೀನ ರಾಶಿಯವರ ಮೂರನೇ ಮನೆಯಲ್ಲಿ ರಾಹು ಇರುವುದರಿಂದ ನೀವು ಧೈರ್ಯವಂತರಾಗುತ್ತೀರಿ, ಇನ್ನು ಬುಧಗ್ರಹವು ಹತ್ತನೇಯ ಮನೆಯಲ್ಲಿರುವುದರಿಂದ ನಿಮಗೆ ಅವಿವಾಹಿತರಿಗೆ ವಿವಾಹಯೋಗ ಮತ್ತು ಕುಟುಂಬದಲ್ಲಿ ಸುಖ ಪ್ರಾಪ್ತಿಯಾಗುತ್ತದೆ. ಕೆಲಸದಲ್ಲಿ ಅಭಿವೃದ್ಧಿ ಪ್ರಗತಿ ಕಾಣುತ್ತಿದೆ ಯಾವುದೇ ಕೆಲಸವು ನಿಮಗೆ ಲಾಭದಾಯಕವಾಗುತ್ತದೆ ಕಷ್ಟಪಟ್ಟು ದುಡಿಯುವುದರಿಂದ ನಿಮಗೆ ಸುಖ ಶಾಂತಿ ನೆಮ್ಮದಿ ನಿಮ್ಮದಾಗುತ್ತದೆ. ಮೀನರಾಶಿಯ ಅಧಿಪತಿಯಾಗಿರುವ ಗುರುಗ್ರಹವು ಬಂದು ನೀಚ ಸ್ಥಾನದಲ್ಲಿ ಬರುವುದರಿಂದ ಮತ್ತು ಎರಡನೇ ಮನೆಯಲ್ಲಿ ಕುಜಗ್ರಹ ಇರುವುದರಿಂದ ನಿಮಗೆ ಅಧಿಕ ಧನಲಾಭ ವಾಗುತ್ತದೆ, ಇನ್ನೂ ಭೂಮಿ ಖರೀದಿ, ವಾಹನ ಖರೀದಿ ಯೋಗವಿದೆ.

%d bloggers like this: