ಜೀರ್ಣಕ್ರಿಯೆ, ಆರೋಗ್ಯವಾದ ಕೂದಲಿಗಾಗಿ ವಿಳ್ಯದೆಲೆ ಪರಿಣಾಮಕಾರಿಯಾದ ಮನೆಮದ್ದು

ದೈವಕಾರ್ಯಕ್ಕೆ ಬಳಸುವ ಈ ಎಲೆಯು ಔಷಧಿಯ ಗುಣಗಳನ್ನು ಹೊಂದಿದೆ, ಕೆಲವರು ಊಟವಾದ ಬಳಿಕ ಈ ಎಲೆಯನ್ನು ತಿನ್ನುತ್ತಾರೆ, ಆದರೆ ಕೆಲವರಿಗೆ ಈ ಎಲೆಯ ಮಹತ್ವ ಮತ್ತು ಅದರ ಔಷಧಿಯ ಗುಣ ಏನು, ಯಾವ ಸಮಸ್ಯೆಗಳಿಗೆ ಈ ಎಲೆಯು ಉತ್ತಮ ರಾಮಭಾಣವಾಗಿದೆ ಎಂದು ತಿಳಿದುಕೊಳ್ಳಬೇಕಾದರೆ, ಕೊನೆಯವರೆಗೂ ಈ ವರದಿಯನ್ನು ಓದಿ. ಈ ಎಲೆಯ ರಸವನ್ನು ಸೇವಿಸುವುದರಿಂದ ಶರೀರದಲ್ಲಿ ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಸಹಕಾರಿ ಮಾಡುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಹಲವಾರು ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ.

ಕೂದಲು ಉದುರುವ ಸಮಸ್ಯೆಯು ಇಂದು ಅನೇಕ ಯುವಕರನ್ನು ಭಾದಿಸುತ್ತದೆ, ಆಹಾರ ಪದಾರ್ಥ, ಧೂಳಿನ ವಾತಾವರಣ, ಜೀವನಶೈಲಿ, ಒತ್ತಡದ ಜೀವನದಿಂದಾಗಿ ಅನೇಕ ಪುರುಷರಿಗೆ ಈ ಕೂದಲು ಉದುರುವ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಪರಿಹಾರವಾಗಿ ನೀವು ಈ ಎಲೆಯ ರಸವನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ. ಇದು ನೈಸರ್ಗಿಕವಾದ ಎಲೆ ಆಗಿರುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ.

ಇನ್ನು ಹಲ್ಲುಗಳನ್ನು ಉಜ್ಜುವಾಗ, ಕೆಲವರಿಗೆ ವಸಡುಗಳ ನಡುವೆ ರಕ್ತ ಬರುತ್ತದೆ. ಹಲವರಿಗೆ ಬಾಯಿಯ ದುರ್ಗಂದ ಸಮಸ್ಯೆ ಕಾಡುತ್ತಿರುತ್ತದೆ, ಅಂತಹವರು ಈ ಎಲೆಯನ್ನು ನೀರಿನಲ್ಲಿ ಕುದಿಸಿ, ಕುದಿಸಿದ ಈ ನೀರಿನಿಂದ ಬಾಯಿ ಮುಕ್ಕಳಿಸಬೇಕು, ಇದರಿಂದ ನಿಮ್ಮಬಾಯಿಯ ದುರ್ಗಂಧ ವಾಸನೆಯಿಂದ ಮುಕ್ತಿ ಪಡೆಯಬಹುದಾಗದೆ. ನೋಡಿದಾಕ್ಷಣ ಆಕರ್ಷಕವಾಗಿ ಕಾಣಲು, ನಮ್ಮ ಮುಖ ಪ್ರಮುಖ ಪಾತ್ರ ನಿರ್ವಹಿಸುತ್ತದೆ, ಮುಖ ಅಂದವಾಗಿದ್ದರು ಕೂಡ ಕೆಲವರಿಗೆ ಈ ಮೊಡವೆಗಳಿಂದ ಆ ಮುಖದ ಸೌಂದರ್ಯ ಕೆಡುತ್ತದೆ. ಆದ್ದರಿಂದ ಈ ಮೊಡವೆ ಸಮಸ್ಯೆಗಳ ನಿವಾರಣೆಗಾಗಿ ಈ ಎಲೆಯನ್ನು ನೀರಿನಲ್ಲಿ ನೆನೆಸಿಟ್ಟು, ತದನಂತರ ಈ ನೀರಿನಿಂದ ಮುಖ ತೊಳೆದರೆ ಮೊಡವೆಯನ್ನು ನಿಯಂತ್ರಿಸಬಹುದಾಗಿದೆ, ಜೊತೆಗೆ ನಿಮ್ಮ ಮುಖ ತ್ವಚೆಯಿಂದ ಕೂಡಿರುತ್ತದೆ.

ಅದಲ್ಲದೆ ಈ ಎಲೆಯು ಸಾಮಾನ್ಯವಾದ ಕೆಮ್ಮು, ನೆಗಡಿ, ಕಫ ಅಂತಹ ಅನಾರೋಗ್ಯ ಸಮಸ್ಯೆಗಳಾಗೂ ಇದು ಉತ್ತಮ ಪರಿಹಾರವಾಗಿದೆ. ಆಯುರ್ವೇದ ಔಷಧಿಯಾಗಿ ಬಳಸುವ ಈ ಎಲೆಯನ್ನು ಜೇನುತುಪ್ಪದ ಜೊತೆಗೆ ಸೇವಿಸಿದರೆ, ಇಂತಹ ಒಣಕೆಮ್ಮು, ಕಫ ಅಂತಹ ಸಮಸ್ಯೆಗಳಿಗೆ ಪರಿಹಾರವಾಗಿದೆ. ಹಾಗಾದರೆ, ಇಷ್ಟೆಲ್ಲಾ ಉಪಯುಕ್ತವಾಗಿರುವ ಈ ಎಲೆ ಯಾವುದು ಅಂತೀರಾ. ಅದು ಈ ವಿಳ್ಯಾದೆಲೆ ಎನ್ನಬಹುದು, ಹೌದು ವಿಳ್ಯಾದೆಲೆಯನ್ನು ಕೇವಲ ದೇವತಾ ಕಾರ್ಯಗಳ ಪೂಜೆಗಳಲ್ಲಿ ಬಳಸುವುದಿಲ್ಲ. ಈ ವಿಳ್ಯಾದೆಲೆಯಲ್ಲಿ ಅನೇಕ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಔಷಧಿಯ ಗುಣ ಅಂಶಗಳನ್ನು ಒಳಗೊಂಡಿರುವುದರಿಂದ ನಮ್ಮ ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ಈ ವಿಳ್ಯಾದೆಲೆಯಿಂದ ಪರಿಹಾರ ಕಂಡು ಕೊಳ್ಳಬಹುದಾಗಿದೆ ಎಂದು ಆಯುರ್ವೇದ ಪಂಡಿತರು ತಿಳಿಸುತ್ತಾರೆ.

%d bloggers like this: