ನೀವು ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳದಿರಲು ನಿಮ್ಮಲ್ಲಿರುವ ಈ ಗುಣ ಲಕ್ಷಣಗಳೇ ಪ್ರಮುಖ ಕಾರಣವಾಗುತ್ತವೆ. ನಿಮ್ಮ ಸಮಾನ ವಯಸ್ಕರು, ಸರಿಸಮಾನರು, ನಿಮ್ಮಗೆಳೆಯರು ಸರ್ಕಾರಿ ಕೆಲಸ, ಉದ್ಯಮಿ, ದೊಡ್ಡ ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಹೀಗೆ ಒಳ್ಳೊಳ್ಳೆ ರೀತಿಯಾಗಿ ಜೀವನದಲ್ಲಿ ಒಂದು ಹಂತ ತಲುಪಿ ಸಮಾಜದಲ್ಲಿ ಅವರದೇ ಆದ ಗೌರವ, ಸ್ಥಾನ ಮಾನ ಗಳಿಸಿದ್ದಾರೆ. ನೀವು ಮಾತ್ರ ಹಾಗೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದ ಬದಲಾವಣೆ ಆಗದೇ ಅದೇ ಬಡತನ, ನಿರುದ್ಯೋಗ, ಅಸಹಾಯಕತೆ, ಯಾರಿಗೂ ಬೇಡವಾದವರಂತೆ ಬಂಧು ಬಳಗ ಎಲ್ಲರಿಂದಲೂ ದೂರವಾಗಿ ಏಕಾಂಗಿತನದ ಬದುಕು ನಿಮ್ಮನ್ನು ಜಿಗುಪ್ಸೆಗೆ ತಳ್ಳುವಂತಹ ಪರಿಸ್ಥಿತಿಯಲ್ಲಿ ಇರುತ್ತೀರಿ.

ಇದಕ್ಕೆಲ್ಲಾ ಕಾರಣವೇನು ಎಂದು ಒಮ್ಮೆಯಾದರೂ ಚಿಂತಿಸಿದ್ದೀರಾ? ಪರವಾಗಿಲ್ಲ ಅದರ ಬಗ್ಗೆ ಯೋಚನೆಯನ್ನಾದರೂ ಪರಾಮರ್ಶೆಯನ್ನಾದರೂ ಮಾಡಿದ್ದೀರಾ ಇಲ್ಲವೆ ಹಾಗಾದರೆ ಮೊದಲು ನೀವು ನಿಮ್ಮ ನ್ಯುನತೆ, ಕೊರತೆಗಳನ್ನು ಅರ್ಥ ಮಾಡಿಕೊಳ್ಳಿ.
ಸಾಮಾನ್ಯವಾಗಿ ಯಾವುದೇ ವ್ಯಕ್ತಿ ಹಿಂಜರಿಯುವುದು ಆ ವಿಷಯದ ಬಗ್ಗೆ ಅವನಿಗಿರುವ ಭಯ, ಆತಂಕ, ಅಜ್ಞಾನದಿಂದ ಅದನ್ನು ಹೊರತು ಪಡಿಸಿದರೆ ಅವರೂ ಸಹ ನಿಮ್ಮಂತಹವರೇ ನೀವು ಧೈರ್ಯದಿಂದ ಯಾವುದೇ ಗೊತ್ತಿಲ್ಲದ ಹೊಸ ಹೊಸ ವಿಷಯಗಳನ್ನು ಉತ್ಸುಕರಾಗಿರಬೇಕು. ಕಲಿಯುವ ಮನಸ್ಸು ನಿಮ್ಮನ್ನು ಮುನ್ನುಗ್ಗುವಂತೆ ಮಾಡಬೇಕು ಹಾಗ ಮಾತ್ರ ನಿಮ್ಮ ದುಗುಡ ದುಮ್ಮಾನ ದುರವಾಗುತ್ತದೆ. ನೀವು ಈ ಮೂರು ವ್ಯಕ್ತಿತ್ವಗಳನ್ನು ರೂಡಿಸಿಕೊಳ್ಳಲೇ ಬೇಕು.

ಹೌದು ನೀವು ನಿಮ್ಮ ಮೇಲೆ ಆತ್ಮವಿಶ್ವಾಸವನ್ನು ವೃದ್ದಿಸಿಕೊಳ್ಳಿ. ನಾನು ಮಾಡಬಲ್ಲೆ ಎಂಬ ಭಾವ ನಿಮ್ಮಲ್ಲಿ ಬರವಂತಾಗಬೇಕು. ನಿಮ್ಮ ಮೇಲೆ ಕೀಳರಿಮೆ ಇಟ್ಟುಕೊಳ್ಳಬೇಡಿ, ಅವರೆಲ್ಲರು ಅಷ್ಟರ ಮಟ್ಟಿಗೆ ಇದ್ದಾರೆ ನಾನು ಅವರಿಗಿಂತ ನಿಧಾನ ಇದ್ದೀನಿ. ಅವರು ನನಗಿಂತ ಹೆಚ್ಚು ಬುದ್ದಿವಂತರು ಅವರಿಗೆ ಇಂಗ್ಲೀಷ್ ಸರಾಗವಾಗಿ ಮಾತನಾಡುತ್ತಾರೆ, ನನಗೆ ಇಂಗ್ಲೀಷ್ ಬರುವುದಿಲ್ಲ ಎಂದು ನಿಮ್ಮ ಮೇಲೆ ನೀವು ಜಿಗುಪ್ಸೆ ಬೇಸರ ಪಡಬಾರದು. ಮುಖ ನೋಡಿ ಮಣೆ ಹಾಕಬಾರದು ಎಂಬಂತೆ ನಿಮ್ಮ ಬಟ್ಟೆಯಿಂದ, ಮುಖದಿಂದ ಯಾರನ್ನು ಅಳೆಯುವುದಕ್ಕೆ ಆಗುವುದಿಲ್ಲ ನಿಮ್ಮ ಜ್ಞಾನದಿಂದ ನಿಮ್ಮ ನ್ನು ನೀವು ಗುರುತಿಸಿಕೊಳ್ಳಬೇಕು.

ಬಲೂನ್ ಹಾರಾಡುವುದು ಅದರೊಳಗಿರುವ ಗಾಳಿಯಿಂದ ಹೊರತು ಅದರ ಮೇಲ್ಮೈ ಬಣ್ಣದಿಂದಲ್ಲ ಎಂಬ ಅರಿವು ನಿಮಗಿರಬೇಕು. ನಿಮ್ಮ ಆಂತರ್ಯದಲ್ಲಿರುವ ನಿಮ್ಮ ಬಗ್ಗೆಯ ನಂಬಿಕೆ, ವಿಶ್ವಾಸ ನಿಮ್ಮನ್ನು ನೀವು ನಿರೀಕ್ಷೆ ಮಾಡದೇ ಇರುವ ಸ್ಥಾನಕ್ಕೆ ನಿಮ್ಮನ್ನು ಕರೆದೊಯ್ಯೂತ್ತದೆ. ಆದ್ದರಿಂದ ಜಗತ್ತಿನಲ್ಲಿ ಗೆಲ್ಲಲು ಸಾಧ್ಯವಾಗದೇ ಇರುವುದು ಯಾವುದು ಇಲ್ಲ ನಿಮ್ಮಲ್ಲಿರುವ ಹಠ, ಛಲ, ಆತ್ಮವಿಶ್ವಾಸ ನಿಮಗೆ ಅಸ್ತ್ರವಾಗಿರಬೇಕು.