ನಿಮ್ಮ ಜೀವನದಲ್ಲಿ ಶುಭ ಸಮಾಚಾರಗಳು ಗತಿಸುವ ಮುಂಚೆ ಒಂದಷ್ಟು ಸೂಚನೆಗಳು ನಿಮಗೆ ಸಿಗುತ್ತವೆ. ಈ ಸೂಚನೆಗಳು ಯವಾಗ, ಯಾವ ರೂಪದಲ್ಲಿ ಸಿಗುತ್ತದೆ ಎಂಬುದು ಯಾರಿಗೂ ತಿಳಿದಿರಿವುದಿಲ್ಲ. ಕೆಲವರಿಗೆ ಗೊತ್ತಿದ್ದರೂ ಸಹ ಆ ಸಮಯಕ್ಕೆ ಅದರ ಪ್ರಜ್ಞೆ ಅರಿವಾಗುವುದಿಲ್ಲ. ಒಳ್ಳೆಯಕಾಲ, ಕೆಟ್ಟ ಕಾಲವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ ಸಮಯ, ಸಂಧರ್ಭ ಅನುಗುಣವಾಗಿ ಆ ಅದೃಷ್ಟ ಸಮಯವು ನಿಮಗೆ ಲಭಿಸಿ ನಿಮ್ಮ ಜೀವನದಲ್ಲಿ ಶುಭಕರ ಸಂಗತಿಗಳು ನಡೆಯುತ್ತವೆ. ಅದಕ್ಕೂ ಮುಂಚೆ ಕೆಲವು ಸೂಚನೆ ನೀಡುತ್ತವೆ. ನಿಮಗೆ ಬೆಳಿಗ್ಗೆ ಎದ್ದ ಕೂಡಲೇ ಏನೋ ಉತ್ಸಾಹ, ಉಲ್ಲಾಸ ನಿಮ್ಮಲ್ಲಿ ಮೂಡುತ್ತದೆ.

ನಿಮ್ಮ ಮುಖವು ಮಂದಹಾಸದಿಂದ ಕೂಡಿದ್ದು ಪ್ರಶಾಂತವಾದ ವಾತಾವರಣ ನಿಮ್ಮದಾಗಿರುತ್ತದೆ. ನಿಮ್ಮ ಮನದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲದೆ ಸ್ಪಷ್ಟವಾದ ನಿಲುವು ಹೊಂದಿರುತ್ತೀರಿ. ನೀವು ಆ ದಿನ ಮಾಡಬೇಕಾಗಿರುವ ಎಲ್ಲಾ ಕೆಲಸ ಕಾರ್ಯಗಳ ಬಗ್ಗೆ ನಿಮಗೆ ಆತ್ಮವಿಶ್ವಾಸವಿರುತ್ತದೆ. ನೀವು ಯಾವುದಾದರು ಕಾರ್ಯಕ್ಕೆ ಮನೆಯಿಂದ ಹೊರ ಹೋಗುತ್ತಿರುವಾಗ ಗೃಹಿಣೆಯರು ನೀರು ತುಂಬಿದ ಕೊಡವನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ಕಂಡರೆ ಅಂದು ನಿಮ್ಮ ಕೆಲಸ ಯಶಸ್ವಿಯಾಗುತ್ತದೆ. ಇನ್ನು ಬೆಳಿಗ್ಗೆ ಎದ್ದು ಮೊದಲನೆಯ ದೃಶ್ಯವಾಗಿ ಹಾಲು ತುಂಬಿದ ಪಾತ್ರೆಯನ್ನು ನೋಡಿದರೆ ನಿಮಗೆ ಆಕಸ್ಮಿಕ ಧನಲಾಭ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಇನ್ನು ಮುಂದಿನ ದಿನಗಳಲ್ಲಿ ನಿಮಗೆ ಅಶುಭದ ದಿನಗಳು ಬರುತ್ತವೆ ಎಂಬುದಕ್ಕೆ ಒಂದಷ್ಟು ಸೂಚನೆಗಳಿವೆ. ನಿಮಗೆ ಪ್ರತಿನಿತ್ಯ ಕನಸಿನಲ್ಲಿ ಕೆಟ್ಟ ಕನಸುಗಳು ಕಾಡುತ್ತಿದ್ದರೆ ನಿಮ್ಮ ಮನೆಯ ಹಿರಿಯರಿಗೆ ಕಂಟಕವಿದೆ ಎಂಧರ್ಥ. ಇದಕ್ಕೆ ಪರಿಹಾರವಾಗಿ ಪ್ರತಿ ರಾತ್ರಿ ಹನುಮಾನ್ ಚಾಲೀಸಾ ಮಂತ್ರವನ್ನು ಪಠಿಸುವುದಿರಿಂದ ಸಮಸ್ಯೆಯಿಂದ ಮುಕ್ತಿಗೊಳ್ಳಬಹುದಾಗಿದೆ. ನಿಮಗೆ ಕೆಲವು ಸಲ ನಿರಂತರವಾಗಿ ಎಡಗಣ್ಣು ಒಡೆಯುತ್ತಿರುವುದಿಂದ ನಿಮಗೆ ಅಂದು ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ಇಚ್ಛೆಯ ದೇವರನ್ನು ಪ್ರಾರ್ಥಿಸುವುದರಿಂದ ಇಂತಹ ಸಮಸ್ಯೆಗಳಿಂದ ಮುಕ್ತಿ ಹೊಂದ ಬಹುದಾಗಿದೆ.

ನೀವು ಕನಸಿನಲ್ಲಿ ಅಳುವ ವ್ಯಕ್ತಿಗಳನ್ನು ಕಂಡರೆ ಅದು ಅಶುಭದ ಸಂಕೇತ ಈ ಕನಸಿನ ವಿಚಾರವಾಗಿ ಯಾರ ಬಳಿಯೂ ಚರ್ಚಿಸಬಾರದು. ಕೆಲವೊಮ್ಮೆ ನೀವು ಯಾವತ್ತೂ ನೋಡಿರದ ಕಪ್ಪು ಬಣ್ಣದ ಬೆಕ್ಕು ನಿಮ್ಮನ್ನು ಹಿಂಬಾಲಿಸಿ ನಿಮ್ಮನ್ನು ದಿಟ್ಟಿಸಿ ನೋಡುತ್ತಿದ್ದರೆ ಅದನ್ನು ಅಲ್ಲಿಂದ ಓಡಿಸಿ ಅದರ ರೂಪವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಡಿ. ಇದು ನಿಮ್ಮ ಭವಿಷ್ಯಕ್ಕೆ ತೊಡಕುಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಶಿವನ ಆರಾಧನೆಯನ್ನು ಪ್ರತಿ ಸೋಮವಾರ ಮತ್ತು ಶುಕ್ರವಾರ ತಪ್ಪದೆ ಶಿವನ ದೇವಾಲಯಕ್ಕೆ ಭೇಟಿ ನೀಡಿ ತುಳಸಿ ಹಾರವನ್ನು ಅರ್ಪಿಸಿ ಶಿವನ ಅನುಗ್ರಹಕ್ಕೆ ಪಾತ್ರರಾಗಿ, ಇದರಿಂದ ನಿಮ್ಮ ಕಂಟಕಗಳು ದೂರವಾಗಿ ನಿಮ್ಮ ಜೀವನವು ಸುಗಮವಾಗಿ ಸಾಗುತ್ತದೆ.