ರಿಲಯನ್ಸ್ ಕಂಪನಿಯು ಫೆಬ್ರವರಿ 15 2007 ರಂದು ಗುಜರಾತ್ ಅಹಮದಾಬಾದ್‌ನ ಅಂಬಾವಾಡಿಯಲ್ಲಿ ಇನ್ಫೋಟೆಲ್ ಬ್ರಾಡ್ಬ್ಯಾಂಡ್ ಸರ್ವೀಸಸ್ ಲಿಮಿಟೆಡ್ (ಐಬಿಎಸ್ಎಲ್) ಆಗಿ ನೋಂದಾಯಿಸಲಾಗಿದೆ. ಹಾಗು ಐಬಿಎಸ್ಎಲ್ ನಲ್ಲಿ 95% ಪಾಲನ್ನು 4,800 ಕೋಟಿಗೆ (ಯುಎಸ್ $ 670 ಮಿಲಿಯನ್) ಖರೀದಿಸಿದೆ. ಇನ್ಫೋಟೆಲ್ ಬ್ರಾಡ್ಬ್ಯಾಂಡ್ ಸರ್ವೀಸಸ್ ಲಿಮಿಟೆಡ್ ಅನ್ನು ಜನವರಿ 2013 ರಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಆರ್ಜೆಐಎಲ್) ಎಂದು ಮರುನಾಮಕರಣ ಮಾಡಿದೆ. ನಂತರ ಜೂನ್ 2015ರಲ್ಲಿ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ ಸುಪ್ರೀಂಕೋರ್ಟ್ ಗೆ ದೂರು ಸಲ್ಲಿಸಿ ಜಿಯೋ ಅನ್ನು ಭಾರತ ಸರ್ಕಾರವು ಪ್ಯಾನ್-ಇಂಡಿಯಾ ಪರವಾನಗಿ ನೀಡುವುದರ ಬಗ್ಗೆ ಪ್ರಶಾಂತ್ ಭೂಷಣ್ ರ ಮೂಲಕ ಪ್ರಶ್ನಿಸಿತ್ತು ಹಾಗು ಸಂಸ್ಥೆಯು ತನ್ನ 4ಜಿ ಡೇಟಾ ಸೇವೆಯೊಂದಿಗೆ ಧ್ವನಿ ದೂರವಾಣಿಯನ್ನು ಒದಗಿಸಲು ಅನುಮತಿ ನೀಡುತ್ತಿದೆ ಎಂದು ಆರೋಪಿಸಲಾಗಿತ್ತು.

ಪರಿಣಾಮವಾಗಿ ಹೇಗೂ 3ಜಿ ಮತ್ತು BWA ಸ್ಪೆಕ್ಟ್ರಮ್‌ನ ನಿಯಮಗಳು BWA ವಿಜೇತರಿಗೆ ಧ್ವನಿ ದೂರವಾಣಿ ಒದಗಿಸುವುದನ್ನು ನಿರ್ಬಂಧಿಸುವುದಿಲ್ಲ ಎಂದು ವಿವರಿಸಿದರು. ಆಗ ಪಿಐಎಲ್ ಅನ್ನು ಹಿಂತೆಗೆದುಕೊಳ್ಳಲಾಗಿ ಆರೋಪಗಳನ್ನು ವಜಾಗೊಳಿಸಲಾಯಿತು. ಹೀಗೆ ಜಿಯೋ ಭಾರತದ 22 ವಲಯಗಳಲ್ಲಿ ಜಿಯೋ 850 ಮೆಗಾಹರ್ಟ್ಸ್ ಮತ್ತು 1,800 ಮೆಗಾಹರ್ಟ್ಸ್ ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಹೊಂದಿದೆ. 2,300 ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಪ್ಯಾನ್-ಇಂಡಿಯಾ ಪರವಾನಗಿ ಅನ್ನು ಸಹ ಹೊಂದಿದೆ. ಜಿಯೋ ರಿಲಯನ್ಸ್ ಕಮ್ಯುನಿಕೇಷನ್ಸ್‌ನೊಂದಿಗೆ ಸ್ಪೆಕ್ಟ್ರಮ್ ಅನ್ನು ಹಂಚಿಕೊಂಡಿದೆ. ಜಿಯೋ ಇಂಟ್ರಾ-2016 ಸೆಪ್ಟಂಬರ್ ನಲ್ಲಿ ರಾಷ್ಟ್ರೀಯ ರೋಮಿಂಗ್ ಮೋಡ್‌ನಲ್ಲಿ ಪರಸ್ಪರ 4ಜಿ ಮತ್ತು 2ಜಿ ಸ್ಪೆಕ್ಟ್ರಮ್ ಅನ್ನು ಬಳಸಲು ಸರ್ಕಲ್ ರೋಮಿಂಗ್ ಗಾಗಿ ಬಿಎಸ್ಎನ್ಎಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದು ಅದು ಆಪರೇಟರ್‌ಗಳ ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಹೀಗೆ ಫೆಬ್ರವರಿ 2017ರಲ್ಲಿ ಎಲ್ಟಿಇ-ಅಡ್ವಾನ್ಸ್ಡ್ ಪ್ರೊ ಮತ್ತು 5ಜಿ ಯಲ್ಲಿ ಕೆಲಸ ಮಾಡಲು ಜಿಯೋ ಸ್ಯಾಮ್ಸಂಗ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ.

ಜಿಯೋಗಾಗಿ ಫೈಬರ್ ಎಂದು ಕರೆಯಲ್ಪಡುವ ಮನೆ ಸೇವೆಗೆ ಹೊಸ ಟ್ರಿಪಲ್ ಪ್ಲೇ ಫೈಬರ್ ಅನ್ನು ಪರೀಕ್ಷಿಸಲು ಪ್ರಾರಂಭಿಸಿತು. ಇದರೊಂದಿಗೆ 100 ರಿಂದ 1000 Mbits ವೇಗದಲ್ಲಿ ಹಾಗೆಯೇ ದೂರದರ್ಶನ ಮತ್ತು ಲ್ಯಾಂಡ್‌ಲೈನ್ ದೂರವಾಣಿ ಸೇವೆಗಳೊಂದಿಗೆ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು ಆಗಸ್ಟ್ 2019ರಲ್ಲಿ ಆರಂಭಿಸಿದೆ. ಮೇ 2016ರಲ್ಲಿ ಜಿಯೋ ವಿಧವಿಧವಾದ ಮಲ್ಟಿಮೀಡಿಯಾ ಅಪ್ಲಿಕೇಶನ್‌ಗಳನ್ನು 4ಜಿ ಸೇವೆಯ ಪರವಾಗಿ ಬಳಸಲು ಜಿಯೋ ಸಿಮ್ ಕಾರ್ಡ್ ಅನ್ನು ಬಳಸಬೇಕೆಂಬ ಉದ್ದೇಶದಿಂದ ಜಿಯೋಪೇಜಸ್, ಜಿಯೋಚಾಟ್, ಜಿಯೋಸಿನಿಮಾ, ಜಿಯೋಕ್ಲೌಡ್, ಜಿಯೋಹೆಲ್ತ್, ಜಿಯೋನ್ಯೂಸ್, ಜಿಯೋಮೀಟ್, ಜಿಯೋಮನಿ, ಹೀಗೆ 13 ಜಿಒ ಸಿಮ್ ರಿಲೇಟೆಡ್ ಆಪ್ ಗಳನ್ನು ಆರಂಭಿಸಿದೆ.

ಹೀಗೆ ಜಿಯೋ ತನ್ನ ಗ್ರಾಹಕರನ್ನು ಫ್ರೀ ಸಿಮ್ ನೀಡುವುದರ ಮೂಲಕ ಹಾಗು 4g ಸ್ಪೀಡ್ ನೀಡುವುದರ ಮೂಲಕ ಆಕರ್ಷಿಸುತ್ತಾ ಬರುವ ದಿನಗಳಲ್ಲಿ ಕೂಡ ತನ್ನ ಜಿಯೋ ಸಿಮ್ ಆಫರ್ ಪ್ಲಾನ್ ಗಳ ಮೂಲಕ ಮತ್ತಷ್ಟು ಗ್ರಾಹಕರನ್ನು ಪಡೆಯುತ್ತಾ ೧೧ ರೂಪಾಯಿಗೆ 1gb ಡಾಟ ಅಂದರೆ ಒಂದು ದಿನದ ಗಳಿಗೆಗೆ ಆಡ್ onನ ರೀತಿಯಲ್ಲಿ ಬಳಸಬಹುದಾಗಿದೆ. ಇಂಟರ್ನೆಟ್ ಕಟ್ ಆದರೆ ವಿಲವಿಲ ಒದ್ದಾಡುವ ಟೀನ್ ಹುಡುಗರಿಗೆ, ಈ ಪ್ಲಾನ್ ಮೆಚ್ಚಿಕೆಗೆ ಒಳಗಾಗಿದೆ. ಹೀಗೆ ಕಡಿಮೆ ಬೆಲೆಯ ಇಂಟರ್ನೆಟ್ ಪ್ಲಾನ್ ಗಳ ಮೂಲಕ ಟೆಲಿಕಾಂ ಫೀಲ್ಡ್ ನಲ್ಲಿ ತನ್ನ ವೈಶಿಷ್ಟತೆಯೊಂದಿಗೆ ನೆಟ್ ಸ್ಪೀಡ್ ನ ಮೂಲಕ ಹೆಚ್ಚಾದ ಪೋರ್ಟ್ ರಿಕ್ವೆಸ್ಟ್ ಗಳನ್ನೂ ಕೂಡ ಪಡೆಯುತ್ತಾ ಇತರ ನೆಟ್ವರ್ಕ್ಗಳಿಗೆ ಭಾರೀ ಪೈಪೋಟಿ ನೀಡುತ್ತಿದೆ.