ಜೊತೆ ಜೊತೆಯಲಿ ಧಾರಾವಾಹಿಗೆ ಎಂಟ್ರಿ ಕೊಟ್ರು ಕನ್ನಡದ ಮತ್ತೊಬ್ಬ ನಟಿ

ಜೀ ಕನ್ನಡದಲ್ಲಿ ಪ್ರಸಾರವಾಗುವ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಸೀರಿಯಲ್ ಕೂಡ ಒಂದು. ಆರಂಭದಿಂದಲೂ ಹಲವಾರು ಟ್ವಿಸ್ಟ್ ಗಳೊಂದಿಗೆ ಈ ಧಾರವಾಹಿ ಜನಪ್ರಿಯವಾಗಿತ್ತು. ಈ ಸೀರಿಯಲ್ ಶುರುವಾಗುವ ಮುನ್ನವೇ ತನ್ನ ಟೈಟಲ್ ಟ್ರ್ಯಾಕ್ ನಿಂದ ಎಲ್ಲೆಡೆ ವೈರಲ್ಲಾಗಿತ್ತು. ಉತ್ತಮ ಕಥೆ-ಚಿತ್ರಕಥೆ-ನಿರ್ದೇಶನ ಹೊಂದಿರುವ ಜೊತೆ ಜೊತೆಯಲಿ ಧಾರಾವಾಹಿ ಕನ್ನಡ ಕಿರುತೆರೆಯ ಲೋಕದಲ್ಲಿ ಶ್ರೀಮಂತಿಕೆಯನ್ನು ಪ್ರದರ್ಶಿಸಿದೆ ಎನ್ನಬಹುದು. ಇದೇ ಧಾರಾವಾಹಿಯ ಕಾರಣಕ್ಕೆ ಟಿಆರ್ಪಿ ಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಜೀ ವಾಹಿನಿ ಇತ್ತು. ವಿಭಿನ್ನ ನಿರೂಪಣೆಯಿಂದ ಈ ಧಾರಾವಾಹಿ ಎಲ್ಲರ ಗಮನ ಸೆಳೆದಿತ್ತು.

ವಿಭಿನ್ನ ಕಥೆಯ ಮೂಲಕ ಆರಂಭದಿಂದಲೂ ಈ ಧಾರಾವಾಹಿ ವೀಕ್ಷಕರನ್ನು ರಂಜಿಸಿದ್ದು, ಅದರಲ್ಲೂ ಅನಿರುದ್ಧ್ ಹಾಗೂ ಮೇಘ ಶೆಟ್ಟಿ ಅವರನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಒಂದು ಧಾರಾವಾಹಿಯನ್ನು ಸಿನಿಮಾ ಶೈಲಿಯಲ್ಲಿ ನಿರ್ಮಾಣ ಮಾಡಿ ವೀಕ್ಷಕರು ಬೆರಗಾಗುವಂತೆ ಮಾಡಿದ ಧಾರಾವಾಹಿ ಇದು. ನಂಬಿಕೆ ಎಂಬ ಮೂರಕ್ಷರವನ್ನು ಮೂಲವಾಗಿಟ್ಟುಕೊಂಡು ಸಾಗುತ್ತಿರುವ ಈ ಕಥೆ ಇದುವರೆಗೂ ರೋಚಕ ತಿರುವುಗಳನ್ನು ಪಡೆದು ಕೊಂಡಿದೆ. ಇದೇ ವೇಳೆ ಈ ಧಾರಾವಾಹಿಯಲ್ಲಿ ಈಗ ಹೊಸ ಪಾತ್ರವೊಂದು ಸೃಷ್ಟಿಯಾಗುತ್ತಿದೆ. ಹೌದು ಅನಿರುದ್ಧ್ ಹಾಗೂ ಮೇಘ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಧಾರಾವಾಹಿಯಲ್ಲಿ ಮತ್ತೊಬ್ಬ ಪ್ರಮುಖ ನಟಿಯ ಆಗಮನವಾಗುತ್ತಿದೆ.

ಇಲ್ಲಿಯವರೆಗೆ ಆರ್ಯವರ್ಧನ್, ಅನು ಸಿರಿಮನೆ, ಪುಷ್ಪ, ಸುಬ್ಬು, ಜೆಂಡೆ ಪಾತ್ರಗಳು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ರಂಜಿಸಿವೆ. ಈ ಧಾರಾವಾಹಿಯಲ್ಲಿ ಬಹಳ ಹಿಂದಿನಿಂದಲೂ ರಾಜನಂದಿನಿ ಎಂಬ ಒಂದು ಹೆಸರು ಕೇಳಿಬರುತ್ತಲೇ ಇತ್ತು. ಆದರೆ ಇಂದಿಗೂ ಆ ಪಾತ್ರವನ್ನು ತೆರೆಯಮೇಲೆ ತೋರಿಸಲಾಗಿಲ್ಲ. ಇತ್ತೀಚೆಗೆ ಪ್ರಸಾರವಾದ ಸಂಚಿಕೆಗಳಲ್ಲಿ ಆರ್ಯವರ್ಧನ್ ಪಾತ್ರವನ್ನು ಖಳನಾಯಕನ ರೂಪದಲ್ಲಿ ತೋರಿಸಲಾಗಿತ್ತು. ಆರ್ಯವರ್ಧನ್ ತನ್ನ ಸುತ್ತ ಸುಳ್ಳಿನ ಕೋಟೆಯನ್ನೇ ಕಟ್ಟಿಕೊಂಡಿದ್ದಾನೆ. ತನ್ನ ಅಸಲಿ ಮುಖವಾಡ ಕಳಚಿ ಬೀಳುತ್ತಿರುವಾಗ ಅದರಿಂದ ಪಾರಾಗಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವುದನ್ನು ಕಿರುತೆರೆಯ ಅಭಿಮಾನಿಗಳು ವೀಕ್ಷಿಸಿದ್ದಾರೆ.

ರಾಜರ ನಂದಿನಿ ರಹಸ್ಯ, ಸಂಕ್ರಾಂತಿ ಸಂಭ್ರಮ, ಮದುವೆ ಸಡಗರ, ಸೀಕ್ರೆಟ್ ರೂಮ್ ಎಲ್ಲವೂ ಅನಾವರಣಗೊಂಡ ಬಳಿಕ ಇದೀಗ ರಾಜನಂದಿನಿ ಅಧ್ಯಾಯ ಆರಂಭವಾಗಲಿದೆ. ಈ ಮೂಲಕ ಜೊತೆ ಜೊತೆಯಲಿ ಧಾರಾವಾಹಿ ತಂಡ ನೋಡುಗರನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗಲಿದೆ. ಈಗಾಗಲೇ ಜೊತೆ ಜೊತೆಯಲಿ ಧಾರಾವಾಹಿ 650 ಸಂಚಿಕೆಗಳನ್ನು ಪೂರೈಸಿದೆ. ಈಗ ರಾಜ ನಂದಿನಿಯ ಅಧ್ಯಾಯ ಆರಂಭವಾಗಲಿದ್ದು, ಸುಭಾಷ್ ಪಾಟೀಲ್ ಪಾತ್ರವೊಂದು ಜನ್ಮ ಪಡೆದುಕೊಂಡಿದೆ.

ಸುಭಾಷ್ ಪಾಟೀಲ್ ಯಾರು, ಈ ಪಾತ್ರಕ್ಕೂ ರಾಜನಂದಿನಿಗೂ ಏನು ಸಂಬಂಧ, ಸುಭಾಷ್ ಪಾಟೀಲ್ ಪಾತ್ರ ಅನುಸಿರಿಮನೆ ಬದುಕಿನ ಮೇಲೆ ಪರಿಣಾಮ ಬೀರುತ್ತಾ, ಇಂತಹದ್ದೇ ಹಲವಾರು ಕುತೂಹಲಗಳನ್ನು ಹೊತ್ತುಕೊಂಡು ಇಂದಿನಿಂದ ಹೊಸ ಅಧ್ಯಾಯ ಶುರುವಾಗಲಿದೆ. ಇದೇ ಹೊಸ ಅಧ್ಯಾಯದಿಂದ ಸ್ಯಾಂಡಲ್ವುಡ್ನಲ್ಲಿ ಬ್ಯುಸಿಯಾಗಿರುವ ನಟಿ ಧಾರವಾಹಿಗೆ ಎಂಟ್ರಿಕೊಡುತ್ತಿದ್ದಾರೆ. ಹೌದು ರಾಜ ನಂದಿನಿಯ ಪಾತ್ರದಲ್ಲಿ ನಟಿ ಸೋನುಗೌಡ ಎಂಟ್ರಿಕೊಟ್ಟಿದ್ದಾರೆ. ಈ ಮೂಲಕ ಜನಪ್ರಿಯ ಧಾರಾವಾಹಿಯಲ್ಲಿ ಮತ್ತೊಂದು ಮಹಾ ಟ್ವಿಸ್ಟ್ ಸಿಕ್ಕಿದ್ದು, ಧಾರವಾಹಿಗೆ ಹೊಸ ರೂಪ ಸಿಗಲಿದೆ.

%d bloggers like this: