ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಧಾರವಾಹಿಯಾಗಿ ಹೊರಹೊಮ್ಮಿರುವ ಜೊತೆ ಜೊತೆಯಲಿ ಧಾರವಾಹಿಗೆ ಹೊಸದೊಂದು ಪಾತ್ರ ಎಂಟ್ರಿ ಕೊಟ್ಟಿದೆ. ಆ ಪಾತ್ರದ ನಾಯಕ ಅಭಿನಯಿಸುತ್ತಿರುವುದು ಕೆಲವರಿಗೆ ಸಂತೋಷವಾದರೆ ಇನ್ನೂ ಕೆಲವರಿಗೆ ಆಶ್ಚರ್ಯಗೊಳಿಸಿದೆ. ಜೊತೆ ಜೊತೆಯಲಿ ಧಾರವಾಹಿ ದಿನಕಳೆದಂತೆ ಭಾರಿ ಜನಪ್ರಿಯಗೊಂಡು ಅಪಾರ ಪ್ರಮಾಣದಲ್ಲಿ ಜನ ಬೆಂಬಲ ಪಡೆಯುತ್ತಿದೆ. ಈ ಧಾರವಾಹಿಯ ಪ್ರಮುಖ ಪಾತ್ರಧಾರಿಯಾಗಿ ನಟ ಅನಿರುದ್ದ್ ಮತ್ತು ನಾಯಕಿಯಾಗಿ ಮೇಘಶೆಟ್ಟಿ ಜನಮನ್ನಣೆ ಗಳಿಸಿದ್ದಾರೆ. ಧಾರವಾಹಿಯ ಎಲ್ಲಾ ವಿಭಾಗದ ತಂತ್ರಜ್ಞತೆಯ ಕೆಲಸಗಳು ಅದ್ಭುತವಾಗಿ ಮೂಡಿಬರುತ್ತಿದೆ. ಜೊತೆ ಜೊತೆಯಲಿ ಧಾರವಾಹಿಯಲ್ಲಿ ಇವರುಗಳ ಜೊತೆಗೆ ಮಾನಸ, ದೇವಯ್ಯ, ವಿಜಯಲಕ್ಷ್ಮಿ ಸಿಂಗ್ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಹೊಸದೊಂದು ಪಾತ್ರ ಪ್ರವೇಶ ಪಡೆದಿದ್ದು ಧಾರವಾಹಿಗೆ ಇನ್ನಷ್ಟು ಮೆರಗು ತಂದಿದೆ.

ಜೊತೆ ಜೊತೆಯಲಿ ಧಾರವಾಹಿ ತಂಡಕ್ಕೆ ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ನಟ ವಿಜಯ್ ಸೂರ್ಯ ಸೇರಿಕೊಂಡಿದ್ದಾರೆ. ಈ ಧಾರವಾಹಿಯಲ್ಲಿ ಅತಿಥಿ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ನಟ ವಿಜಯ್ ಸೂರ್ಯ ಇತ್ತೀಚಿಗೆ ತಾನೇ ತಂದೆಯಾದ ಖುಷಿಯಲ್ಲಿದ್ದರು. ಸಿನಿಮಾ, ಧಾರವಾಹಿ ಗಳಿಂದ ಕೊಂಚ ವಿರಾಮ ತೆಗೆದುಕೊಂಡು ಕುಟುಂಬಕ್ಕೆ ಸಮಯವನ್ನು ನೀಡಿದ್ದರು. ಇದೀಗ ಮತ್ತೆ ಸೀರಿಯಲ್ ಕಡೆಗೆ ಮುಖ ಮಾಡಿದ್ದಾರೆ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರೊಮ್ಯಾಂಟಿಕ್ ಧಾರವಾಹಿ ಪ್ರೇಮಲೋಕ ದಲ್ಲಿ ನಟಿಸುತ್ತಿದ್ದರು. ಇದೀಗ ಇಷ್ಟಕಾಮ್ಯ ಚಿತ್ರದ ನಂತರ ದೇವರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವೀರಪುತ್ರ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಬೆಳ್ಳಿತೆರೆಗೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಉತ್ತಮವಾದ ಪ್ರತಿಕ್ರಿಯೆ ಪಡೆದುಕೊಂಡಿದೆ.