ಜೊತೆ ಜೊತೆಯಲಿ ಮೇಘನಾ ಶೆಟ್ಟಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು, ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತೇ

ಚಂದನವನದ ನಟಿಯರ ಸಂಭಾವನೆಯನ್ನೇ ಮೀರಿಸಿದ ಮೇಘಶೆಟ್ಟಿ! ಮೇಘಶೆಟ್ಟಿ ಅಂದರೆ ಅಷ್ಟಾಗಿ ಪರಿಚಯವಿರುವುದಿಲ್ಲ ಇವರು ಜನಪ್ರಿಯ ಆಗಿರುವುದೇ ಅನು ಸಿರಿಮನೆ ಎಂಬ ಹೆಸರಿನಿಂದ ಜೀ಼ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರವಾಹಿಯ ಮೂಲಕ ಮನೆ ಮಾತಾದ ಇವರು ಸ್ಯಾಂಡಲ್ ವುಟ ನಟಿಯರ ಸಂಭಾವನೆಯನ್ನೆ ಹಿಂದಿಕ್ಕಿದ್ದಾರೆ. ಅದಕ್ಕೂ ಮುಂಚೆ ಜೊತೆ ಜೊತೆಯಲಿ ಧಾರವಾಹಿ ಬಗ್ಗೆ ಹೇಳಬೇಕಾದರೆ ಇದು ಆರೂರು ಜಗದೀಶ್ ಅವರ ನೀರ್ದೇಶನದಲ್ಲಿ ಮೂಡಿಬರುತ್ತಿರುವ ಧಾರವಾಹಿಯಾಗಿದ್ದು ಕಿರುತೆರೆಯಲ್ಲಿ ಯಾರೂ ಮಾಡದ ಮೇಕಿಂಗ್ ಈ ಧಾರವಾಹಿಯಲ್ಲಿ ಮಾಡಿದ್ದಾರೆ. ಅದರಲ್ಲೂ ಕ್ಯಾಮರಾ, ವಸ್ತ್ರ ವಿನ್ಯಾಸ, ಕೇಶವಿನ್ಯಾಸ, ವರ್ಣಾಲಂಕಾರ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಕೂಡ ಗುಣಮಟ್ಟವನ್ನು ನಿರ್ವಹಣೆ ಮಾಡಲಾಗಿದೆ. ಈ ಧಾರವಾಹಿಯಲ್ಲಿ ಬರುವ ಪಾತ್ರಗಳು ಮಧ್ಯಮವರ್ಗ ಮತ್ತು ಇತರೆ ವರ್ಗದ ಹೆಂಗಳೆಯರ ಮನಮುಟ್ಟಿದೆ. ಅದರಲ್ಲೂ ಆರ್ಯವರ್ಧನ್ ಅವರ ಗಾಂಭೀರ್ಯದ ವ್ಯಕ್ತಿ ಸ್ವಭಾವ, ಸರಳ ಸಜ್ಜನ ಸೌಜನ್ಯದ ನಡವಳಿಕೆಯ ಪಾತ್ರ ಎಲ್ಲರನನ್ನು ತನ್ನತ್ತ ಸೆಳೆಯುವಂತಿದ್ದು ಹಾಗೂ ಅನು ಸಿರಿಮನೆಯ ಪಾತ್ರವೂ ಕೂಡ ಅವರ ಮುಗ್ದತೆಯ ಜೊತೆಗಿನ ಜಾಣ್ಮೆಯ ವೈಖರಿ ಮನೆಮಂದಿಯೆಲ್ಲಾ ಇಷ್ಟ ಪಡುವಂತೆ ಮಾಡಿದೆ. ಹೀಗಾಗಿಯೇ ಅನು ಪಾತ್ರದ ಮೇಘ ಶೆಟ್ಟಿಯವರು ಕರ್ನಾಟಕದ ಅಗಲಕ್ಕೂ ಜನಪ್ರಿಯ ಮಗಳಾಗಿದ್ದಾರೆ.

ಅಷ್ಟೇ ಅಲ್ಲದೆ ಸಂಭಾವನೆಯ ವಿಚಾರದಲ್ಲೂ ಅವರು ಒಂದು ಹೆಜ್ಜೆ ಮುಂದೋಗಿದ್ದಾರೆ. ಜೊತೆ ಜೊತೆಯಲಿ ಧಾರವಾಹಿ ಹಿರಿಯ ದಿಗ್ಗಜ ನಟಿಯರು ಮತ್ತು ಅನಿರುದ್ದ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರಿಂದ ಪ್ರಾರಂಭವಾದ ದಿನಗಳಿಂದಲೇ ಹೆಚ್ಚು ಜನಪ್ರಿಯವಾಗಿ ಟಿಆರ್ಪಿ ಯಲ್ಲೂ ನಂಬರ್ ಒನ್ ಸ್ಥಾನ ಪಡೆದಿತ್ತು. ಆರಂಭದ ದಿನಗಳಲ್ಲಿ ಅನು ಸಿರಿಮನೆಯವರ ಸಂಭಾವನೆ ದಿನವೊಂದಕ್ಕೆ ಎಂಟು ಸಾವಿರ ಇತ್ತು ಎನ್ನಲಾಗಿತ್ತು ಆದರೆ ಧಾರವಾಹಿಯ ಜನಪ್ರಿಯತೆ ಉತ್ತುಂಗಕ್ಕೆ ಏರತ್ತಲೇ ಅನು ಅವರ ಸಂಭಾವನೆಯು ಕೂಡ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ ಅಂದರೆ ದಿನವೊಂದಕ್ಕೆ ಎಂಟು ಸಾವಿರ ಪಡೆಯುತ್ತಿದ್ದವರು ಇದೀಗ ದಿನವೊಂದಕ್ಕೆ 25000 ರೂಗಳವರೆಗೂ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಕಿರುತೆರೆ ಮೂಲಗಳು ತಿಳಿಸಿವೆ. ಅಂದರೆ ಸ್ಯಾಂಡಲ್ ವುಡ್ ತಾರೆಯರು ಪಡೆಯುವ ಸಂಭಾವನೆ ಅಷ್ಟೆ ಈ ಕಿರುತೆರೆ ನಟಿ ಅನು ಸಿರಿಮನೆ (ಮೇಘಶೆಟ್ಟಿ)ಯವರು ಪಡೆಯುತ್ತಿರುವುದು ನಿಜಕ್ಕೂ ಪ್ರಶಂಸೆಯ ಜೊತೆಗೆ ಕೆಲವರಿಗೆ ಇದು ಆಶ್ಚರ್ಯಕರವಾಗಿದೆ ಕಾರಣ ಕಿರುತೆರೆಯಲ್ಲಿ ಇಷ್ಟು ಮೊತ್ತದ ಸಂಭಾವನೆಯನ್ನ ಯಾವ ಕಿರುತೆರೆ ನಟಿಯರು ಪಡೆಯುತ್ತಿರಲಿಲ್ಲ ಎಂದು ಕಿರುತೆರೆ ಮೂಲಗಳು ಮಾಹಿತಿ ನೀಡಿವೆ.

%d bloggers like this: