ಒಂದೇ ಒಂದು ಸಣ್ಣ ಕಾರಣಕ್ಕೆ ಸಿನಿಮಯ ರೀತಿಯಲ್ಲಿ 2.5ಕೋಟಿ ಬೆಲೆಯ ಕಾರನ್ನು ಸುಟ್ಟು ಹಾಕಿದ ಯೌಟ್ಯೂಬರ್

ಮನುಷ್ಯ ಕೋಪಕ್ಕೆ ಬುದ್ದಿಕೊಟ್ಟರೆ ಏನೇನಾಗಬಹುದು? ಹೌದು ನಮಗೆ ಕೋಪಬಂದರೆ ಸಾಮಾನ್ಯವಾಗಿ ಜನರು ಎದುರುವ್ಯಕ್ತಿಗೆ ನೋಡು ನನ್ನ ಕೆಣಕಬೇಡ ನನಗೆ ಕೋಪಬಂದರೆ ನಾನು ಮನುಷ್ಯನೇ ಅಲ್ಲ ಅಂತಲೂ ಕೈಗೆ ಸಿಕ್ಕ ವಸ್ತುಗಳನ್ನು ಮನಬಂದಂತೆ ಬಿಸಾಡುವುದು. ಇನ್ನು ಹೆಚ್ಚೆಂದರೆ ತಮ್ಮೊಳಗೆ ಇದ್ದ ಕೋಪದ ಉದ್ವೇಗವನ್ನು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳ ಮುಖಾಂತರ ಬಯ್ಯುವುದು ಮಾಡುತ್ತಾರೆ. ಇದಲ್ಲದೆ ಮುಖ ಗಂಟಿಕ್ಕಿ ಸಂಬಂಧವಿಲ್ಲದ ವ್ಯಕ್ತಿಗಳ ಜೊತೆಗೂ ಸಿಡುಕುತನದಿಂದ ವರ್ತಿಸುವುದು ಹೀಗೆ ನಾವು ನೀವು ಕೋಪಬಂದಾಗ ತೋರಿಸುವ ವ್ಯಕ್ತಿತ್ವಗಳು ಅದು ವಸ್ತುಗಳ ಮೇಲಿರಲಿ ಅಥವಾ ವ್ಯಕ್ತಿಗಳ ಮೇಲಿರಲಿ ನಾವು ತೋರಿಸುವುದು ಹೀಗೆ. ಅದರಲ್ಲೂ ವಸ್ತುಗಳ ಮೇಲೆ ನಾವು ಕೋಪ ತೋರಿಸಿದರೂ ಅದರ ಮೌಲ್ಯವನ್ನು ಅರಿತು ಕೆಲವೊಮ್ಮೆ ಹಿಡಿತದಿಂದ ವರ್ತಿಸುತ್ತೇವೆ.

ನಿಮ್ಮಲ್ಲಿ ಸಾವಿರಾರು ರುಪಾಯಿ ಬೆಲೆಬಾಳುವ ವಸ್ತುಗಳನ್ನು ಆತುರದಲ್ಲಿ ಒಡೆದುಹಾಕಿ ಬಿಟ್ಟರೆ ಮರುಕ್ಷಣ ನಾವು ಅದರ ಪಶ್ಚಾತಾಪ ಪಡುತ್ತೇವೆ. ಯಾವುದಾದರು ನಮ್ಮ ಬೈಕ್, ಕಾರು, ಪದೆ ಪದೇ ರಿಪೇರಿ ಬಂದು ಕಿರಿಕಿರಿ ಉಂಟು ಮಾಡಿದರೆ ಒಮ್ಮೆ ಬಾಯಿಗೆ ಬಂದಂತೆ ಅದಕ್ಕೆ ಬೈದು ತದನಂತರ ಇದೇ ಲಾಸ್ಟ್ ಇನ್ನೊಮ್ಮೆ ಇದನ್ನು ರಿಪೇರಿ ಕೊಡಬಾರದು ಮಾರಿಬಿಡಬೇಕು ಅನ್ನುವಷ್ಟು ರೋಸುವಾಗಿ ಕೊನೆಗೆ ಅದನ್ನು ಮಾರಿಯೇ ತೀರುತ್ತೇವೆ. ಆದರೆ ಇಲ್ಲೊಬ್ಬ ಪುಣ್ಯಾತ್ಮ ತನ್ನ ಕಾರು ಆಗಾಗ ಕಿರಿಕಿರಿ ಉಂಟುಮಾಡುತ್ತದೆ ಎಂದು ತನ್ನ ಮುದ್ದಿನ ಕಾರನ್ನೆ ಪೆಟ್ರೋಲ್ ಹಾಕಿ ಸುಟ್ಟುಬಿಡುತ್ತಾನೆ.

ಅದು ಸಾಮಾನ್ಯ ವಿಷಯ ಅಂತ ಅವನಿಗೆ ಅನಿಸಿರಬಹುದು ಆದರೆ ನಮಗೆ ನಿಮಗೆ ಮಾತ್ರ ಆಶ್ಚರ್ಯ ಪರಮಾಶ್ಚರ್ಯ ಆಗಬಹುದು. ಇದಕ್ಕೆ ಕಾರಣ ಏನು ಅಂತ ಗೊತ್ತ,ಆ ಕಾರಿನ ಮೌಲ್ಯ ಬರೋಬ್ಬರಿ ಎರಡೂವರೆ ಕೋಟಿ! ಆ ಕಾರಿನ ಬೆಲೆಯನ್ನು ನಾವು ನೀವು ಜೀವನಪೂರ್ತಿ ದುಡಿಯಬೇಕು ಅಷ್ಟು ಮೊತ್ತದ ಕಾರನ್ನು ಅವನು ಸಾರಸಗಟಾಗಿ ಕೇವಲ ಪದೆ ಪದೇ ಕಾರು ತೊಂದರೆ ಕೊಡುತ್ತದೆ ಎಂದು ಪ್ರತಿಷ್ಟಿತ ಕಾರಾದ ಲಕ್ಸುರಿ ಮರ್ಸಿಡಿಸ್ ಬೆಂಜ಼್ ಕಾರನ್ನೆ ಸುಟ್ಟು ಹಾಕಿದ್ದಾನೆ, ಇದು ನಡೆದಿರುವುದು ರಷ್ಯಾದಲ್ಲಿ. ಈತ ರಷ್ಯಾ ದೇಶದ ಒಂದು ಯ್ಯುಟ್ಯುಬ್ ನಡೆಸುತ್ತಿರುತ್ತಾನೆ ಇದರ ಮೂಲಕವೇ ಕೋಟ್ಯಾಂತರ ರುಪಾಯಿ ಸಂಪಾದಿಸಿರುತ್ತಾನೆ.

ಇದರಿಂದ ಬಂದ ಹಣದಲ್ಲೇ ಇವನು ಎರಡೂವರೆ ಕೋಟಿ ರುಪಾಯಿ ಮೌಲ್ಯದ ಮರ್ಸಿಡಿಸ್ ಬೆಂಜ಼್ ಕಾರನ್ನೆ ಖರೀದಿಸುತ್ತಾನೆ. ಆದರೆ ಇದು ತನ್ನ ಸ್ನೇಹಿತರೊಂದಿಗೆ,ಕುಟುಂಬದವರೊಂದಿಗೆ ಹೊರಗಡೆ ಹೋದಾಗಲೇ ಇದು ಕೈಕೊಡುತ್ತಿರುತ್ತದೆ. ಇದಕ್ಕೆ ಇವನು ಹಲವಾರು ಬಾರಿ ಕಂಪನಿ ತಿಳಿಸಿದರು ಅವರು ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸದೇ ಇದ್ದಾಗ ಈ ಕಂಪನಿಯವರಿಗೆ ಬುದ್ದಿ ಕಲಿಸಲೋ ಅಥವಾ ಈ ಕಾರಿನ ಮೇಲೆ ಇದ್ದ ಕೋಪಕ್ಕೋ ತಾನೋಬ್ಬನೆ ಈ ಕಾರನ್ನು ನಿರ್ಜನ ಪ್ರದೇಶಕ್ಕೆ ಚಲಾಯಿಸಿಕೊಂಡು ಏಳೆಂಟು ಕ್ಯಾನ್ ನಲ್ಲಿ ಪೆಟ್ರೋಲ್ ತುಂಬಿಕೊಂಡು ಹೋಗಿ ಎರಡೂವರೆ ಕೋಟಿ ರುಪಾಯಿ ಮೌಲ್ಯದ ಮರ್ಸಿಡೀಸ್ ಬೆಂಜ಼್ ಕಾರಿಗೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾನೆ. ಅದೂ ಸಹ ಅದರೊಂದಿಗೆ ಕಳೆದ ನೆನಪನ್ನು ಮೆಲುಕುಹಾಕುತ್ತಾ ಅಲ್ಲಲ್ಲಿ ಅದು ತೊಂದರೆ ಮಾಡಿದ ಸನ್ನಿವೇಶಗಳನ್ನು ನೆನೆದು ಈ ರೀತಿಯ ಕೆಲಸವನ್ನು ಮಾಡಿದ್ದಾನೆ.

%d bloggers like this: