ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ, ಮೂರೇ ದಿನದಲ್ಲಿ ಶುರುವಾಗಲಿದೆ ಪ್ರೋ ಕಬಡ್ಡಿ ಆಟಗಳು

ಭಾರತದ ದೇಶಿಯ ಕ್ರೀಡೆಗಳಲ್ಲಿ ಒಂದಾಗಿರುವ ಪ್ರೋ ಕಬಡ್ಡಿ ಲೀಗ್ ಇದೇ ಡಿಸೆಂಬರ್ 22 ರಿಂದ ಆರಂಭವಾಗಲಿದೆ. ಈಗಾಗಲೇ ಒಂದು ಬಾರಿ ಚಾಂಪಿಯನ್ ಆಗಿರುವ ಬೆಂಗಳೂರು ಬುಲ್ಸ್ ತಂಡ ಮತ್ತೊಮ್ಮೆ ಚಾಂಪಿಯನ್ ಆಗಲು ಎಲ್ಲಾ ರೀತಿಯ ತಯಾರಿ ಕೂಡ ನಡೆಸಿಕೊಂಡಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಪ್ರೋ ಕಬಡ್ಡಿ ಲೀಗ್ ಇದೀಗ ಮತ್ತೆ ಆರಂಭವಾಗುತ್ತಿದೆ. ಇದು ಕಬಡ್ಡಿ ಕ್ರೀಡೆ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ. ಪ್ರೋ ಕಬಡ್ಡಿ ಲೀಗ್ ನಲ್ಲಿ ಆರನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಬೆಂಗಳೂರು ಬುಲ್ಸ್ ತಂಡ ಈ ಬಾರಿಯ ಎಂಟನೇ ಆವೃತ್ತಿಯಲ್ಲಿಯೂ ಕೂಡ ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಏಕೆಂದರೆ ಈ ಬಾರಿ ಬೆಂಗಳೂರು ಬುಲ್ಸ್ ತಂಡದ ನಾಯಕನಾಗಿ ಪವನ್ ಶೆರಾವತ್ ಅವರು ಆಯ್ಕೆ ಆಗಿದ್ದಾರೆ.

ಜೊತೆಗೆ ಬೆಂಗಳೂರು ಬುಲ್ಸ್ ತಂಡದಲ್ಲಿ ಈ ಬಾರಿಯ ಸೀಸನ್ ನಲ್ಲಿ ಕಳೆದ ಬಾರಿಯ ಸೀಸನ್ ನಲ್ಲಿದ್ದ ಆಟಗಾರರಿಗಿಂತ ಈ ಬಾರಿ ಆಟಗಾರರು ಹೆಚ್ಚು ಶಕ್ತಿ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಪ್ರೋ ಕಬಡ್ಡಿ ಲೀಗ್ ನಲ್ಲಿ ಒಟ್ಟಾರೆಯಾಗಿ ಹನ್ನೆರಡು ತಂಡಗಳು ಭಾಗವಹಿಸಲಿದ್ದು ಕಬಡ್ಡಿ ಕ್ರೀಡೆ ಪ್ರಿಯರಿಗೆ ರೋಚಕತೆಯ ಮನರಂಜನೆ ಎನ್ನಬಹುದಾಗಿದೆ. ಇನ್ನು ಬೆಂಗಳೂರು ಬುಲ್ಸ್ ತಂಡದಲ್ಲಿ ಚಂದ್ರನ್ ರಂಜಿತ್, ಡೋಂಗ್ ಗಿಯೋನ್ ಲೀ, ಅಬುಲ್ ಫಜಲ್ ಮಗ್ ಸೂದ್ ಲೂ ಮಹಾಲಿ, ಜಿ ಬಿ ಮೋರೆ ಬೆಂಗಳೂರು ಬುಲ್ಸ್ ತಂಡಕ್ಕೆ ಆಗಮಸಿದ್ದಾರೆ.

ಚಂದ್ರನ್ ರಂಜಿತ್ ಮತ್ತು ದೀಪಕ್ ನರ್ವಾಲ್ ಅವರು ಮುನ್ನೂರ ಇಪ್ಪತ್ತಕ್ಕೂ ಅಧಿಕ ರೇಡಿಂಗ್ ಅಂಕಗಳನ್ನು ಗಳಿಸಿದ್ದಾರೆ. ಸೌತ್ ಕೊರಿಯಾದ ಡೋಂಗ್ ಗಿಯೋನ್ ಲೀ ಅಂಡ್ ಇರಾನ್ ದೇಶದ ಅಬುಲ್ ಫಜಲ್ ಇವರುಗಳು ಕಬಡ್ಡಿ ಕ್ರೀಡೆಯ ಅತ್ಯುತ್ತಮ ಪ್ರತಿಭಾಶಾಲಿ ಆಟಗಾರರು ಎಂದು ನಿರೂಪಿಸಿಕೊಂಡಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಗಿಯೋನ್ ಲೀ ಜಿಬಿ ಮೋರೆ ಅವರು ಪ್ರೋ ಕಬಡ್ಡಿ ಕಳೆದ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಇನ್ನು ಪ್ರೋ ಕಬಡ್ಡಿ ಲೀಗ್ ಮೂರನೇ ಆವೃತ್ತಿಯಲ್ಲಿ ಇಪ್ಪತೈದು ವರ್ಷದ ಪವನ್ ಕುಮಾರ್ ಸೆಹ್ರಾವತ್ ಬೆಂಗಳೂರು ಬುಲ್ಸ್ ತಂಡಕ್ಕೆ ಸೇರ್ಪಡೆಗೊಂಡು ಕಳೆದ ಮೂರು ಆವೃತ್ತಿಗಳಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿ ಸ್ಟಾರ್ ಆಟಗಾರನಾಗಿ ಹೆಸರು ಮಾಡಿದ್ದಾರೆ.

ಪವನ್ ಶೆರಾವತ್ ಅವರು ರೋಹಿತ್ ಕುಮಾರ್ ಅವರ ಗರಡಿಯಲ್ಲಿ ಪಳಗಿದ ಕ್ರೀಡಾಪಟು ಆಗಿರುವುದರಿಂದ ಪವನ್ ಅವರಿಂದ ಬೆಂಗಳೂರು ಬುಲ್ಸ್ ತಂಡ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಪವನ್ ಕುಮಾರ್ ವಿಶೇಷತೆ ಅಂದರೆ ಅವರು ರೇಡಿಂಗ್ ಮಾಡುವಾಗ ಡಿಫೆಂಡರ್ ಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಜಿಗಿದು ರನ್ನಿಂಗ್ ಹ್ಯಾಂಡ್ ಟಚ್ ಮಾಡಿ ಸುಲಭವಾಗಿ ಅಂಕಗಳನ್ನು ಪಡೆದುಕೊಳ್ಳುವ ಚಾಕಚಕ್ಯತೆ ಅವರಲ್ಲಿದೆ. ಕಳೆದ ಆವೃತ್ತಿಯಲ್ಲಿ ಅವರು ಬರೋಬ್ಬರಿ 350 ರೇಡಿಂಗ್ ಪಾಯಿಂಟ್ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಅವರು ಕಳೆದ ಎರಡು ಆವೃತ್ತಿಯಲ್ಲಿ ಅತಿ ಹೆಚ್ಚು ರೇಡಿಂಗ್ ಅಂಕ ಪಡೆದ ಕೀರ್ತೀಗೆ ಪಾತ್ರರಾಗಿದ್ದಾರೆ.

ಕಳೆದ ಸೀಸನ್ ಗಳಲ್ಲಿ ಬೆಂಗಳೂರು ಬುಲ್ಸ್ ತಂಡ ಸಂಪೂರ್ಣವಾಗಿ ಪವನ್ ಅವರ ಮೇಲೆಯೇ ಅವಲಂಬನೆ ಆಗಿತ್ತು. ಆದರೆ ಈ ಆವೃತ್ತಿಯಲ್ಲಿ ಉತ್ತಮ ಆಟಗಾರರು ತಂಡದಲ್ಲಿ ಇದ್ದಾರೆ. ಇವರಿಂದ ಕೊಂಚ ನೆಗೆಟಿವ್ ಕಂಡು ಬಂದರೂ ಉಳಿದ ಪ್ರಬಲ ಆಟಗಾರರು ತಂಡವನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬ ವಿಶ್ವಾಸ ಇದೀಗ ಬೆಂಗಳೂರು ಬುಲ್ಸ್ ತಂಡಕ್ಕಿದೆ. ಇನ್ನು ಇತ್ತೀಚೆಗಷ್ಟೇ ಪ್ರೋ ಕಬಡ್ಡಿ ಬೆಂಗಳೂರು ಬುಲ್ಸ್ ತಂಡದ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಪ್ರೋಮೋದಲ್ಲಿ ರಾಯಭಾರಿ ಕಿಚ್ಚ ಸುದೀಪ್ ಲೀಗ್ ಗೆ ಕೆಣಕಿದ್ರೆ ಗೆಲ್ಲ ಬಹುದು, ಗುರಾಯಿಸಿದ್ರೆ ಗುಮ್ಮ ಬಹುದು ಎನ್ನುವ ಡೈಲಾಗ್ ಹೊಡೆಯುವ ಮೂಲಕ ಬೆಂಗಳೂರು ಬುಲ್ಸ್ ತಂಡಕ್ಕೆ ಉತ್ತೇಜನ ನೀಡಿದ್ದಾರೆ. ಇನ್ನು ಈ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ಲುಕ್ ಸಖತ್ ಆಕರ್ಷಣೀಯವಾಗಿದೆ.

%d bloggers like this: