ಕಬಡ್ಡಿ ಪ್ರಿಯರೇ ತಯಾರಾಗಿ, ಬಹುನಿರೀಕ್ಷಿತ ಪ್ರೊ ಕಬಡ್ಡಿ ಪಂದ್ಯಗಳಿಗೆ ದಿನಾಂಕ ಸಿದ್ದ

ಭಾರತ ದೇಶಿಯ ಕ್ರೀಡೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಂತರದಲ್ಲಿ ಸ್ಥಾನ ಪಡೆಯುವುದು ಅಂದರೆ ಪ್ರೋ ಕಬಡ್ಡಿ. 2014ರಲ್ಲಿ ಆರಂಭವಾದ ಈ ಪ್ರೋ ಕಬಡ್ಡಿ ಕ್ರೀಡೆ ಇದುವರೆಗೆ ಏಳು ಆವೃತ್ತಿಗಳನ್ನು ಪೂರೈಸಿದೆ. ಆದರೆ ಈ ಬಾರಿಯ ಪ್ರೋ ಕಬಡ್ಡಿ 8ನೇ ಆವೃತ್ತಿಯು ಬಹಳ ವಿಶೇಷವಾಗಿ ಕಾಣಲಿದೆ. ಏಕೆಂದರೆ ಎಂಟನೇ ಆವೃತ್ತಿಯ ಪ್ರೋ ಕಬಡ್ಡಿ ಕ್ರೀಡೆಯು ನಡೆಯುತ್ತರುವುದು ಕ್ರೀಡಾಂಗಣದಲ್ಲಿ. 2020 ರಲ್ಲಿ ನಡೆಯಬೇಕಿದ್ದ ಈ ಪ್ರೋ ಕಬಡ್ಡಿ ಎಂಟನೇ ಆವೃತ್ತಿಯು ಕೋವಿಡ್19 ಕಾರಣ ಮುಂದೂಡಲಾಗಿತ್ತು. ಇದೀಗ ಇದೇ ಡಿಸೆಂಬರ್ 22ರಂದು ಈ ಪ್ರೋ ಕಬಡ್ಡಿ ಕ್ರೀಡೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲಿನ ಸಭಾಂಗಣದಲ್ಲಿ ನಡೆಯಲಿದೆ. ಈ ವೀವೋ ಪ್ರೋ ಕಬಡ್ಡಿ ಕ್ರೀಡೆಗಾಗಿಯೇ ಈ ಹೋಟೆಲಿನ ಸಭಾಂಗಣವನ್ನು ಸಂಪೂರ್ಣವಾಗಿ ಥೇಟ್ ಕ್ರೀಡಾಂಗಣದ ರೀತಿಯಲ್ಲಿ ಪರಿವರ್ತನೆ ಮಾಡಲಾಗಿದೆ.

ಜೊತೆಗೆ ಈ 8ನೇ ಸೀಸನ್ ಪ್ರೋ ಕಬಡ್ಡಿಯ ವೇಳಾ ಪಟ್ಟಿಯನ್ನ ಕೂಡ ಹೊರಡಿಸಿದೆ. ಮಾಷಾಲ್ ಸ್ಪೋರ್ಟ್ಸ್ ಈ ಪ್ರೋ ಕಬಡ್ಡಿಯನ್ನು ಬೆಂಗಳೂರಿನ ಈ ಶೆರಟಾನ್ ಗ್ರ್ಯಾಂಡ್ ಹೋಟೆಲಿನಲ್ಲಿ ಆಯೋಜನೆ ಮಾಡಿದೆ. ಪ್ರಮುಖ ವಿಚಾರ ಅಂದರೆ ಕೋವಿಡ್ ಜೊತೆಗೆ ಇತ್ತೀಚೆಗೆ ಆತಂಕ ಸೃಷ್ಟಿಸಿರುವ ಒಮಿಕ್ರಾನ್ ವೈರಸ್ ನಿಂದಾಗಿ ಈ ಪ್ರೋ ಕಬಡ್ಡಿ ಪಂದ್ಯ ವೀಕ್ಷಿಸಿಲು ಪ್ರೇಕ್ಷಕರಿಗೆ ನಿಷೇಧ ಹೇರಲಾಗಿದೆ ಎಂದು ಆಯೋಜಕರು ತಿಳಿಸಿದರು. ಇದೇ ಡಿಸೆಂಬರ್ ತಿಂಗಳ ಇಪ್ಪತ್ತೆರಡರಂದು ಪಂದ್ಯ ಆರಂಭವಾಗಲಿದ್ದು, ಮೊದಲ ನಾಲ್ಕು ದಿನ ದಿನವೊಂದಕ್ಕೆ ಮೂರು ಪಂದ್ಯಗಳನ್ನ ಆಡಿಸಲಾಗುತ್ತದೆ‌. ಇನ್ನು ಶನಿವಾರ ಕೂಡ ಮೂರು ಪಂದ್ಯಗಳನ್ನು ನಡೆಸುತ್ತಿರುವುದು ವಿಶೇಷ ಎನ್ನ ಬಹುದಾಗಿದೆ. ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ತಮಿಳ್ ತಲೈವಾಸ್ ಎದುರಾಳಿಗಳಾಗಿ ಸೆಣಸಾಡಲಿವೆ. ಯುಪಿ ಯೋಧಾ ಮತ್ತು ಹಾಲಿ ಚಾಂಪಿಯನ್ ಆಗಿರುವ ಬೆಂಗಾಲ್ ವಾರಿಯರ್ಸ್ ಅಂತಿಮ ಪಂದ್ಯದಲ್ಲಿ ಹೋರಾಡಲಿವೆ‌.

ಜನವರಿ ಎರಡನೇ ವಾರದಲ್ಲಿ ಎರಡನೇ ಹಂತದ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎಂದು ತಿಳಿದುಬಂದಿದೆ. ದೇಶಿ ಸೊಗಡಿನ ಈ ಪ್ರೋ ಕಬಡ್ಡಿಯನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ವೇಳಾಪಟ್ಟಿ ಮೊದಲೇ ತಿಳಿಯುವುದರಿಂದ ತಂಡಗಳಿಗೆ ಗೆಲ್ಲುವ ರಣ ತಂತ್ರ ಹೂಡಲು ಸಹಾಯಕವಾಗಲಿದೆ ಎಂದು ಪ್ರೋ ಕಬಡ್ಡಿ ಲೀಗ್ ಆಯುಕ್ತ ಅನುಪಮ್ ಗೋ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲ ಹಂತದಲ್ಲಿ ಬೆಂಗಳೂರು ಬುಲ್ಸ್ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 22ರಂದು ಮುಂಬಾ 7.30ಕ್ಕೆ ನಡೆಯಲಿದ್ದು, ಡಿಸೆಂಬರ್ 24ರಂದು 8.30 ಕ್ಕೆ ತಮಿಳ್ ತಲೈವಾಸ್, ಡಿಸೆಂಬರ್26 8.30ಕ್ಕೆ ಬೆಂಗಾಲ್ ವಾರಿಯರ್ಸ್, ಡಿಸೆಂಬರ್ 30ರಂದು ಹರಿಯಾಣ ಸ್ಟೀಲರ್ಸ್, ಜನವರಿ ಒಂದರಂದು ತೆಲುಗು ಟೈಟಾನ್ಸ್, ಜನವರಿ2 ಪುಣೇರಿ ಪಲ್ಟನ್, ಜನವರಿ6 ಜೈಪುರ್ ಪಿಂಕ್ ಪ್ಯಾಂಥರ್ಸ್, ಜನವರಿ 9ರಂದು ಯುಪಿ ಯೋಧಾ, ಜನವರಿ 12ರಂದು ದಬಾಂಗ್ ಡೆಲ್ಲಿ, ಜನವರಿ 14ರಂದು ಗುಜರಾತ್ ಜೈಂಟ್ಸ್ ಮತ್ತು ಜನವರಿ 16ರಂದು ಪಟ್ನಾ ಪೈರೇಟ್ಸ್ ತಂಡ ಆಟವಾಡಲಿದೆ.

%d bloggers like this: