ಕಡಿಮೆ ಬೆಲೆಗೆ ಬಲಿಷ್ಠ ಕಾರು, ನಾಲ್ಕೇ ತಿಂಗಳಲ್ಲಿ 70 ಸಾವಿರ ಬುಕಿಂಗ್ಸ್ ಪಡೆದುಕೊಂಡು ಭಾರಿ ಬೇಡಿಕೆಯಲ್ಲಿದೆ ಈ ಕಾರು

ಕೆಲವೇ ಕೆಲವು ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ತನ್ನ ಸಂಸ್ಥೆಯ ಕಾರು ಮಾರಾಟ ಮಾಡಿ ಆಟೋಮೊಬೈಲ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ ಈ ಪ್ರಸಿದ್ದ ಕಾರು ತಯಾರಕಾ ಸಂಸ್ಥೆ! ಕೋವಿಡ್ ನಂತರ ವಾಣಿಜ್ಯ ವ್ಯಾಪಾರ ವ್ಯವಹಾರ ಚಟುವಟಿಕೆಗಳು ಮತ್ತೆ ಮೊದಲಿನಂತೆ ಯಥಾ ಸ್ಥಿತಿಗೆ ಬಂದಿದೆ. ಅದರಂತೆ ಎಲ್ಲಾ ಕ್ಷೇತ್ರಗಳು ಚೇತರಿಸಿಕೊಂಡು ಉತ್ತಮವಾಗಿ ಸಾಗಲು ಆರಂಭ ಆಗಿದೆ. ಇತ್ತೀಚಿನ ದಿನಮಾನಗಳಲ್ಲಿ ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು, ಪ್ರತಿಷ್ಟಿತ ಉದ್ಯಮಿ ಗಳು ‌ಸೇರಿದಂತೆ ಸಾಮಾನ್ಯರು ಕೂಡ ಕಾರು ಖರೀದಿ ಮಾಡುವುದರಲ್ಲಿ ಉತ್ಸುಕರಾಗಿದ್ದಾರೆ. ಅದರಂತೆ ಕಾರು ಪ್ರಿಯರ ಬೇಡಿಕೆಯ ಅನುಸಾರ ಕಾರು ತಯಾರಿಕಾ ಕಂಪನಿಗಳು ಕೂಡ ವಿಶಿಷ್ಟ ಬಗೆಯ ಆಕರ್ಷಕ ಕಾರುಗಳನ್ನು ತಯಾರು ಮಾಡುತ್ತಿವೆ.

ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವಂತಹ ಅನೇಕ ಕಂಪನಿಯ ಕಾರುಗಳು ಪರಿಚಯಗೊಳ್ಳುತ್ತಲೇ ಇವೆ. ಅಂತಹ ಕಾರು ಕಂಪನಿಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿ ಕೂಡ ಒಂದು. ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳು ತನ್ನದೇಯಾದ ಗ್ರಾಹಕ ವಲಯವನ್ನೊಂದಿದೆ. ತಮ್ಮ ಸಂಸ್ಥೆಯಿಂದ ತಯಾರಾಗುವ ಕಾರುಗಳನ್ನು ಜಗತ್ತಿನಾದ್ಯಂತ ಮಾರಾಟ ಮಾಡುತ್ತದೆ. ಅದರಂತೆ ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳು ಕೂಡ ಅಪಾರ ಜನಪ್ರಿಯತೆ ಪಡೆದುಕೊಂಡಿದೆ.

ಅದರಂತೆ ಟಾಟಾ ಮೋಟರ್ಸ್ ಕಂಪೆನಿಯು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಎಸ್.ಯು.ವಿ ಟಾಟಾ ಪಂಚ್ ಮೈಕ್ರೋ ಎಂಬ ಹೊಸ ಕಾರನ್ನ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತು. ಈ ಕಾರಿನಲ್ಲಿ ವಿಶೇಷ ಅಂದರೆ ಇದೇ ಮೊಟ್ಟ ಮೊದಲ ಬಾರಿಗೆ ಟಾಟಾ ಮೋಟರ್ಸ್ ತನ್ನ ಕಾರಿನಲ್ಲಿ ಬ್ರೇಕ್ ಸ್ಟೇ ಕಂಟ್ರೋಲ್ ವ್ಯವಸ್ಥೆಯನ್ನ ಅಳವಡಿಸಲಾಯಿತು. ಈ ಹೊಸ ಸಿಸ್ಟಮ್ ಅಳವಡಿಸಿದ್ದರಿಂದ ಈ ಟಾಟಾ ಎಸ್.ಯು.ವಿ ಪಂಚ್ ಮೈಕ್ರೋ ಕಾರುಗಳು ಆಟೋಮ್ಯಾಟಿಕ್ ಆಗಿ ಟ್ರಾಫಿಕ್ ರೂಲ್ಸ್ ಗಳನ್ನು ಫಾಲೋ ಮಾಡುತ್ತವೆಯಂತೆ.

ಈ ಟಾಟಾ ಪಂಚ್ ಮೈಕ್ರೋ ನೂತನ ಕಾರಿನಲ್ಲಿ ಇಬಿಡಿ, ಐಎಸ್ಓ ಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಮತ್ತು ಕಾರ್ನರ್ ಸೈಬಿಲಿಟಿ ನಿಯಂತ್ರಣವನ್ನು ಹೊಂದಿದೆ. ಇದರ ಜೊತೆಗೆ ಟ್ರಿಮ್ ಕೇಂದ್ರಿತ ಸಿಸ್ಟಮ್ ಮ್ಯಾನ್ ಹ್ಯಾಂಡ್ ಅಪ್ರೋಚ್ನೆಡ್ ಇದೆ. ಈ ಅಡ್ವಾನ್ಸ್ಡ್ ಕಾರಿನ ಮಾರುಕಟ್ಟೆಯ ಬೆಲೆಯು 6.50 ಲಕ್ಷದಿಂದ 8.50 ಲಕ್ಷದ ವರಗೆ ವಿವಿಧ ನಾಲ್ಕು ವೇರಿಯೆಂಟ್ ಗಳಲ್ಲಿ ಲಭ್ಯವಾಗುತ್ತಿದೆ. ಇದೀಗ ಈ ಟಾಟಾ ಪಂಚ್ ಮೈಕ್ರೋ ಕಾರು ಕೇವಲ ನಾಲ್ಕೇ ತಿಂಗಳಲ್ಲಿ ಬರೋಬ್ಬರಿ ಎಪ್ಪತ್ತು ಸಾವಿರಕ್ಕೂ ಅಧಿಕ ಮುಂಗಡ ಬುಕ್ಕಿಂಗ್ ಪಡೆದುಕೊಂಡು ಫೆಬ್ರವರಿ ತಿಂಗಳವರೆಗೆ ಸರಿ ಸುಮಾರು ಮೂವತ್ತೆರಡು ಸಾವಿರ ಕಾರುಗಳು ಮಾರಾಟವಾಗಿ ಕಡಿಮೆ ಅವಧಿಯಲ್ಲಿ ದಾಖಲೆ ಮಟ್ಟದಲ್ಲಿ ಮಾರಾಟವಾದ ಕಾರು ಎಂಬ ಹೆಸರಿಗೆ ಈ ಟಾಟಾ ಪಂಚ್ ಮೈಕ್ರೋ ಕಾರು ಸೇರ್ಪಡೆಯಾಗಿದೆ.

%d bloggers like this: