ಕಡಿಮೆ ಬಜೆಟ್ ಅಲ್ಲಿ ಮೂರು ಪಟ್ಟು ಗಳಿಕೆ ಮಾಡಿ ದೊಡ್ಡ ಯಶಸ್ಸು ಕಂಡ ಕನ್ನಡದ ಜನಪ್ರಿಯ ದಂಪತಿ

ಸ್ಯಾಂಡಲ್ ವುಡ್ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿದ ಲವ್ ಮಾಕ್ಟೇಲ್2 ಸಿನಿಮಾ ಫೆಬ್ರವರಿ 11ರಂದು ರಾಜ್ಯದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಕೋವಿಡ್ ಲಾಕ್ ಡೌನ್ ರಿಲೀಫ್ ನಂತರ ಚಿತ್ರಮಂದಿರದಲ್ಲಿ ಬಿಡುಗಡೆ ಕಂಡ ಮೊದಲ ಚಿತ್ರ ಇದಾಗಿತ್ತು. ಲವ್ ಮಾಕ್ಟೇಲ್ ಸಿನಿಮಾ ಕಳೆದ ವರ್ಷ ಲಾಕ್ ಡೌನ್ ಸಂಧರ್ಭದಲ್ಲಿ ಬಿಡುಗಡೆ ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದರು ಕೂಡ ಥಿಯೇಟರ್ ಸಮಸ್ಯೆಯಿಂದಾಗಿ ಚಿತ್ರ ನಿರೀಕ್ಷೆ ಮಾಡಿದಷ್ಟು ಬಾಕ್ಸ್ ಆಫೀಸ್ ನಲ್ಲಿ ಕನೆಕ್ಷನ್ ಮಾಡಲಿಲ್ಲ. ಇದರಿಂದ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ನಿರ್ಮಾಪಕಿ ಮಿಲನಾ ನಾಗರಾಜ್ ಅವರು ಚಿತ್ರ ಕಲೆಕ್ಷನ್ ಮಾಡದಿದ್ದರೂ ಚಿತ್ರ ನೋಡಿದ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ ಕಾರಣ ತೃಪ್ತಿ ಪಟ್ಟರು.

ತದ ನಂತರ ಲವ್ ಮಾಕ್ಟೇಲ್ ಚಿತ್ರ ಒಟಿಟಿಯಲ್ಲಿ ತೆರೆ ಕಂಡಿತು. ಓಟಿಟಿಯಲ್ಲಿ ಲವ್ ಮಾಕ್ಟೇಲ್ ಸಿನಿಮಾ ನೋಡಿದ ಪ್ರೇಕ್ಷಕರಿಂದ ಮೆಚ್ಚುಗೆ ಕಂಡ ನಂತರ ಮ್ಯಾಜಿಕ್ ಎಂಬಂತೆ ಲವ್ ಮಾಕ್ಟೇಲ್ ಸಿನಿಮಾ ಮತ್ತೆ ರಾಜ್ಯಾದ್ಯಂತ 175ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ರೀ ರಿಲೀಸ್ ಆಗಿ ಯಶಸ್ವಿಯಾಯಿತು. ಲವ್ ಮಾಕ್ಟೇಲ್ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರ ಪ್ರೇಕ್ಷಕರಿಗೆ ಪಾರ್ಟ್2 ಬರಬಹುದು ಎಂದು ನಿರೀಕ್ಷೆ ಮಾಡಿದರು. ಅದರಂತೆ ನಿರ್ದೇಶಕ ಡ್ರಾಯಿಂಗ್ ಕೃಷ್ಣ ಮತ್ತು ನಿರ್ಮಾಪಕಿ ಮಿಲನಾ ನಾಗರಾಜ್ ಪ್ರೇಕ್ಷಕರ ನಿರೀಕ್ಷೆಯಂತೆ ಲವ್ ಮಾಕ್ಟೇಲ್2 ಚಿತ್ರ ನಿರ್ಮಾಣ ಮಾಡಿ ಗೆದ್ದೇ ಬಿಟ್ಟರು. ಲವ್ ಮಾಕ್ಟೇಲ್2 ಸಿನಿಮಾ ಪಾರ್ಟ್1 ಗಿಂತ ಬಾಕ್ಸ್ ಆಫೀಸ್ ನಲ್ಲಿ ಸಖತ್ ಆಗಿಯೇ ಕಲೆಕ್ಷನ್ ಮಾಡಿದೆ.

ಹೌದು ಫೆಬ್ರವರಿ 11ರಂದು ರಿಲೀಸ್ ಆದ ಲವ್ಮಮಾಕ್ಟೇಲ್2 ಸಿನಿಮಾ ಎರಡೇ ವಾರದಲ್ಲಿ ಬರೋಬ್ಬರಿ ಹದಿನೈದು ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ ಲವ್ ಮಾಕ್ಟೇಲ್2 ಚಿತ್ರ ಯಶಸ್ವಿಯಾಗಿ ಇಪ್ಪತ್ತೈದು ದಿನಗಳ ಪೂರೈಸಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಇನ್ನು ಈ ಚಿತ್ರದಲ್ಲಿ ಮಿಲನಾ ನಾಗರಾಜ್, ರಾಚೇಲ್ ಡೇವಿಡ್, ಅಮೃತಾ ಅಯ್ಯಂಗಾರ್, ಇಂಚರಾ, ಖುಷಿ ಆಚಾರ್, ಸುಷ್ಮಿತಾ ಗೌಡ, ಅಭಿಲಾಷ್, ಗಿರಿ ಮುಂತಾದವರು ನಟಿಸಿದ್ದಾರೆ. ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ಅವರ ಮ್ಯೂಸಿಕ್ ಕೂಡ ಸಿನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿದೆ. ಒಟ್ಟಾರೆ ಆಗಿ ಲವ್ ಮಾಕ್ಟೇಲ್2 ಸಿನಿಮಾ ಇದೀಗ ಯಶಸ್ವಿ 25ದಿನಗಳನ್ನು ಪೂರೈಸಿ ಚಿತ್ರ ತಂಡ ಸಂಭ್ರಮದಲ್ಲಿದೆ.

%d bloggers like this: