ಕಫ ಹಾಗು ಕೆಮ್ಮಿಗೆ ಮನೆಯಲ್ಲೇ ಈ ಚಹಾ ಕುಡಿಯಿರಿ

ವಾತಾವರಣದ ವೈಪರೀತ್ಯದಿಂದಾಗಿಯೂ ಸಹ ಹಲವಾರು ರೂಪದಲ್ಲಿ ಕೊರೋನ ಸೋಂಕಿತರಾಗಬಹುದು ಎನ್ನಲಾಗಿದೆ. ಶ್ವಾಸಕೋಶ, ಉಸಿರಾಟ ಸಮಸ್ಯೆ ಇರುವ ವ್ಯಕ್ತಿಗಳು ಆದಷ್ಟು ಎಚ್ಚರದಿಂದಿರಬೇಕು. ಆರೋಗ್ಯದ ವಿಚಾರವಾಗಿ ಕೊಂಚ ಆಲಸ್ಯ ಮಾಡಿದರು ಸಹ ಅಪಾಯ ಕಟ್ಟಿಟ್ಟ ಬುತ್ತಿ. ಹೆಚ್ಚಾಗಿ ಧೂಳು ಮಿಶ್ರಿತ ವಾತಾವರಣದಲ್ಲಿ ಕೆಲಸ ಮಾಡುವವರು, ಟ್ರಾಫಿಕ್ ನಲ್ಲಿ ವಾಹನಗಳ ಹೊಗೆ ಕುಡಿದು ದಿನವಿಡೀ ಫೀಲ್ಡ್ ವರ್ಕ್ ಮಾಡೋ ಸೇಲ್ಸ್, ಮಾರ್ಕೆಟಿಂಗ್ ಉದ್ಯೋಗಸ್ಥರು ಇಂತಹ ಸಮಯದಲ್ಲಿ ಆದಷ್ಟು ಮಾಸ್ಕ್ ಧರಿಸಿ ಸುರಕ್ಷತೆಯಿಂದ ಇರಬೇಕು. ಕಲುಷಿಶ ಗಾಳಿಯ ಸೇವನೆಯಿಂದ ಉಸಿರಾಟದ ಮೂಲಕ ಗಂಟಲಿನಲ್ಲಿ ಕಫಕಟ್ಟುವಿಕೆಯಿಂದ ಶುರುವಾಗಿ ಅಂತ್ಯದಲ್ಲಿ ಶ್ವಾಸಕೋಶಕ್ಕೆ ಕುತ್ತುತರುವ ಸಂಭವ ವಿರುತ್ತದೆ.

ಹಿತ್ತಲಗಿಡ ಮದ್ದಲ್ಲ ಎಂಬ ಆಲಸ್ಯ ತನ ಬಿಟ್ಟು ಮನೆಯಲ್ಲೇ ಇರುವ ಒಂದಷ್ಟು ಪಧಾರ್ಥಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಅದರಲ್ಲೂ ಉಸಿರಾಟ, ಶ್ವಾಸಕೋಶ ಸಂಬಂಧಿ ಕಾಯಿಲೆಯಿರುವ ವ್ಯಕ್ತಿಗಳು ಆದಷ್ಟು ಶುಂಠಿ, ನಿಂಬೆ, ಜೇನುರಸ ಬಳಕೆ ಮಾಡುವುದು ಉತ್ತಮ ಪ್ರಯೋಜನಕಾರಿ ಎಂದಿದ್ದಾರೆ. ಸಾಮಾನ್ಯವಾಗಿ ಕಾಫಿ, ಟೀಸೇವನೆಮಾಡುವಾಗ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿ ಒಂದು ನೀರಿನ ಲೋಟಕ್ಕೆ ಇಟ್ಟು, ಇದರೊಟ್ಟಿಗೆ ಒಂದು ಚಮಚ ಜೀನುತುಪ್ಪ ಹಾಗೂ ನಿಂಬೆರಸವನ್ನು ಸೇರಿಸಿ ಪ್ರತಿನಿತ್ಯ ಕುಡಿಯುವುದಿರಿಂದ ಶ್ವಾಸಕೋಶ ಸಮಸ್ಯೆಗಳಿಗೆ ಮುಕ್ತಿ ನೀಡಬಹುದು ಎಂದು ಹಿರಿಯ ಆಯುರ್ವೇದ ತಜ್ಞರು ತಿಳಿಸುತ್ತಾರೆ.

%d bloggers like this: