ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ ಹೀಗೆ ಮಾಡಿ ನೋಡಿ ಫಲಿತಾಂಶ ಇದೆ

ನೀವು ಸಂಪಾದಿಸುತ್ತಿರುವ ಹಣ ನಿಮ್ಮ ಕೈಯಲ್ಲಿ ಉಳಿಯುತ್ತಿಲ್ಲವೇ, ಹಾಗಾದರೆ ಕೇವಲ 11 ರೂಪಾಯಿಗಳಿಂದ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳಬಹುದಾಗಿದೆ. ಕೆಲವರ ಮನೆಯಲ್ಲಿ ಮನೆ ಮಂದಿಯಲ್ಲಾ ದುಡಿದರು ಸಹ ಹಣದ ಕೊರತೆ, ಸಾಲದ ಭಾದೆ ಕಾಡುತ್ತದೆ. ಇಂತಹ ಆರ್ಥಿಕ ಸಮಸ್ಯೆಗಳ ನಿವಾರಣೆಗಾಗಿ ಮನೆಯಲ್ಲಿಯೇ ನೀವು ಮಾಡಬೇಕಾಗಿರುವುದು ಸರಳ ಪರಿಹಾರ ರೂಪದಲ್ಲಿ ಒಂದು ಪುಟ್ಟದಾದ ಮಣ್ಣಿನ ಮಡಿಕೆಯನ್ನು ತೆಗೆದುಕೊಂಡು ಅದನ್ನು ನೀರಿನಿಂದ ಸ್ವಚ್ಛಗೊಳಿಸಿ ನಂತರ ಸ್ವಲ್ಪ ಅರಿಶಿಣದೊಂದಿಗೆ ಹಾಲು ಅಥವಾ ನೀರಿನೊಂದಿಗೆ ಮಿಶ್ರಣ ಮಾಡಿ ಅರಿಶಿಣವನ್ನು ಮಣ್ಣಿನ ಮಡಿಕೆಯ ಸುತ್ತಲೂ ಲೇಪನ ಮಾಡಬೇಕು.

ಈ ಯಂತ್ರವನ್ನು ನೀವು ಯಾವಾಗ ಮಾಡಬೇಕು ಅಂದರೆ ನಿಮ್ಮ ಸಂಬಳದ ಮೊದಲ ಖರ್ಚನ್ನು ಈ ಯಂತ್ರಕ್ಕೆ ಬಳಸಬೇಕು, ಕೇವಲ ಹನ್ನೊಂದು ರೂಪಾಯಿಗಳಲ್ಲಿ ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಮಣ್ಣಿನ ಮಡಿಕೆಗೆ ಅರಿಶಿಣ ಲೇಪನ ಮಾಡಿದ ನಂತರ ಮಡಿಕೆಯ ಐದು ಭಾಗದ ಕಡೆಗೆ ಕುಂಕುಮ ಇಟ್ಟು ಅಲಂಕರಿಸಬೇಕು, ನಂತರ ಮಡಿಕೆಗೆ ಹರಿಶಿಣ ಕುಂಕುಮ ಜೊತೆಗೆ ಒಂದಷ್ಟು ಅಕ್ಷತೆಗಳನ್ನು ಮಡಿಕೆಯೊಳಗೆ ಹಾಕಿ ಅದರ ಜೊತೆಗೆ 11 ರೂಪಾಯಿ ನಾಣ್ಯಗಳನ್ನು ಹಾಕಬೇಕು, ಮಡಿಕೆಯೊಳಗೆ ನಾಣ್ಯಗಳನ್ನು ಹಾಕುವಾಗ ಲಕ್ಷ್ಮಿಯನ್ನು ಸ್ಮರಿಸಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಹೇಳುತ್ತಾ ಸಂಕಲ್ಪ ಮಾಡಿಕೊಳ್ಳಬೇಕು.

ಈ ರೀತಿಯಾಗಿ ಈ ಮಡಿಕೆಯನ್ನು ಅರಿಶಿಣ ಬಟ್ಟೆಯಿಂದ ಮಡಿಕೆಯನ್ನು ಕಟ್ಟಿ ಅದನ್ನು ದೇವರ ಮನೆ ಅಥವಾ ಇನ್ಯಾವುದೇ ಭಾಗದಲ್ಲಿ ಯಾರಿಗೂ ಕಾಣದಂತೆ ಅಂದರೆ ಹೊರಗಿನಿಂದ ಬಂದವರಿಗೆ ನೇರವಾಗಿ ಈ ಮಡಕೆಯು ಕಾಣದಂತೆ ಇಡಬೇಕು. ಇದನ್ನು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಲಕ್ಷ್ಮಿಯನ್ನು ಸ್ಮರಿಸುತ್ತ ಪೂಜೆ ಮಾಡಬೇಕು, ಈ ರೀತಿಯಾಗಿ ನೀತಿ ನಿಯಮ ಅನುಸರಿಸಿ ನಂಬಿಕೆ ಇಟ್ಟು ಶ್ರದ್ಧಾಭಕ್ತಿಯಿಂದ ಈ ನಿಯಮವನ್ನು ಪಾಲಿಸಿಕೊಂಡು ಬಂದರೆ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.

%d bloggers like this: