ಕನ್ನಡ ಕಿರುತೆರೆಯ ಧಾರಾವಾಹಿಗಳ ಮೂಲಕ ಬಂದಂತಹ ಅನೇಕ ನಟ ನಟಿಯರು ಇಂದು ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ. ಅಂತೆಯೇ ಕನ್ನಡದ ಜನಪ್ರಿಯ ಧಾರಾವಾಹಿಗಳಾದ ಚುಕ್ಕಿ, ಶಿವ, ಮಹಾದೇವಿ, ಸಂಜು ಮತ್ತು ನಾನು, ಪುನರ್ ವಿವಾಹ ಸೇರಿದಂತೆ ಒಂದಷ್ಟು ಸೀರಿಯಲ್ ಗಳ ಮೂಲಕ ತನ್ನ ಸಹಜ ನಟನೆಯಿಂದ ಗಮನ ಸೆಳೆದ ನಟ ಪ್ರಮೋದ್ ಕೂಡ ಇಂದು ಸ್ಯಾಂಡಲ್ ವುಡ್ ನಲ್ಲಿ ಸಖತ್ ಶೈನ್ ಆಗುತ್ತಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಡಾಲಿ ಧನಂಜಯ್ ಅವರ ರತ್ನನ್ ಪ್ರಪಂಚ ಸಿನಿಮಾದಲ್ಲಿ ಉಡಾಳ್ ಬಾಬು ಪಾತ್ರದ ಮೂಲಕ ವಿಶೇಷವಾಗಿ ಗಮನ ಸೆಳೆದು ಕನ್ನಡ ಸಿನಿ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿ ಮನದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ನಟ ಪ್ರಮೋದ್ ಅವರು ಬ್ಯಾಂಗಲ್ ಸ್ಟೋರ್ ಎಂಬ ಸಿನಿಮಾದ ಮೂಲಕ ಚೊಚ್ಚಲ ಬಾರಿಗೆ ನಾಯಕ ನಟರಾಗಿ ಅಭಿನಯಿಸಿದರು. ಈ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡರು ಕೂಡ ಗಲ್ಲಾ ಪೆಟ್ಟಿಗೆಯಲ್ಲಿ ನಿರೀಕ್ಷೆ ಮಾಡಿದಷ್ಟು ಸದ್ದು ಮಾಡಲಿಲ್ಲ. ತದ ನಂತರ ನವರಸ ನಾಯಕ ಜಗ್ಗೇಶ್ ಅವರ ಮುಖ್ಯ ಭೂಮಿಕೆಯಲ್ಲಿ ತೆರೆ ಕಂಡಂತಹ ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಪ್ರಮೋದ್ ಅವರ ಅಭಿನಯಕ್ಕೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಈ ಪ್ರೀಮಿಯರ್ ಪದ್ಮಿನಿ ಸಿನಿಮಾ ಪ್ರಮೋದ್ ಅವರಿಗೆ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಶಾಶ್ವತವಾಗಿ ಉಳಿಯುಂತಹ ಅವಕಾಶ ಕಲ್ಪಿಸಿತು ಎಂದೇಳಬಹುದು. ಮೂಲತಃ ಮಂಡ್ಯ ಜಿಲ್ಲೆಯವರಾದ ನಟ ಪ್ರಮೋದ್ ಅವರಿಗೆ ರತ್ನನ್ ಪ್ರಪಂಚ ಸಿನಿಮಾ ಒಳ್ಳೆ ಮೈಲೇಜ್ ತಂದು ಕೊಟ್ಟಿದ್ದು.

ಈ ಸಿನಿಮಾದ ನಂತರ ಪ್ರಮೋದ್ ಅವರಿಗೆ ಸಾಲು ಸಾಲು ಸಿನಿಮಾಗಳ ಅವಕಾಶ ಹರಿದು ಬರುತ್ತಿವೆ. ಇದೀಗ ನಟ ಪ್ರಮೋದ್ ಅವರು ಅಲಂಕಾರ್ ವಿಧ್ಯಾರ್ಥಿ ಎಂಬ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಈ ಅಲಂಕಾರ್ ಚಿತ್ರದ ಮುಹೂರ್ಥ ಇತ್ತೀಚೆಗಷ್ಟೇ ನಡೆದಿದೆ. ಈ ಮುಹೂರ್ತ ಕಾರ್ಯಕ್ರಮಕ್ಕೆ ಡಾಲಿ ಧನಂಜಯ್ ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಇನ್ನು ನಟ ಪ್ರಮೋದ್ ಅವರ ಕೈಯಲ್ಲಿ ಇದೀಗ ಆಕ್ಷನ್ ರೌಡಿಸಂ ಜೊತೆಗೆ ಸ್ನೇಹ ಭಾಂಧವ್ಯದ ಜೊತೆಗೆ ಸಾಗುವ ಇಂಗ್ಲೀಷ್ ಮಂಜ ಸಿನಿಮಾ ಸೇರಿದಂತೆ ನಾಕಾರು ಕಥೆಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ ನಟ ಪ್ರಮೋದ್. ಪ್ರಮೋದ್ ಅವರಿಗೆ ರಾಜ್ ಕುಮಾರ್ ಅವರ ನಾನೊಬ್ಬ ಕಳ್ಳ ಅಂತಹ ಸಿನಿಮಾದಲ್ಲಿ ನಟಿಸುವ ಆಸೆ ಇದೆಯಂತೆ.