ಕೈಯಲ್ಲಿರುವ ಈ ರೇಖೆಗಳು ನಿಮ್ಮ ಪ್ರೀತಿ ಮದುವೆಯ ಯೋಗದ ಬಗ್ಗೆ ತಿಳಿಸುತ್ತವೆ

ಸಾಮಾನ್ಯವಾಗಿ ಜಾತಕ ಭವಿಷ್ಯ ನೋಡಲು ಹುಟ್ಟಿದ ದಿನಾಂಕ, ಸಮಯ ಗಳಿಗೆಗಳು ಪ್ರಮುಖವಾಗಿರುತ್ತದೆ. ಆದರೆ ಈ ಜನ್ಮ ದಿನಾಂಕ ಮತ್ತು ಸಮಯದ ಮಾಹಿತಿ ಹಲವರಿಗೆ ಗೊತ್ತಿರುವುದಿಲ್ಲ. ಅಂತಹ ಸಂಧರ್ಭ ಸಮಯಗಳಲ್ಲಿ ಹಸ್ತರೇಖೆ ನೋಡಿ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು, ಅದರಲ್ಲಿ ಪ್ರಮುಖವಾಗಿ ಈ ವೈವಾಹಿಕ ಜೀವನಕ್ಕೆ ಸಂಬಂಧಪಟ್ಟಂತೆ ದಾಂಪತ್ಯ ಜೀವನ, ಸಂಗಾತಿ, ಮದುವೆಯ ಯೋಗ ಇತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಈ ಹಸ್ತ ರೇಖೆಗಳು ತುಂಬಾ ಮಹತ್ವವಾದ ಪಾತ್ರ ವಹಿಸುತ್ತದೆ. ಹೌದು ನಿಮ್ಮ ಹಸ್ತ ರೇಖೆಗಳನ್ನು ನೋಡಿ ನಿಮ್ಮ ದಾಂಪತ್ಯ ಜೀವನದ ಬಗ್ಗೆ ತಿಳಿಯಬಹುದಾಗಿದೆ. ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಕೆಲವೊಂದು ನಿಯಮಗಳಿವೆ ಅದರ ಪ್ರಕಾರವೇ ನೀವು ಹಸ್ತರೇಖೆಯನ್ನು ನೋಡಬೇಕಾಗಿರುತ್ತದೆ. ಹಾಗಾದರೆ ಅದನ್ನು ನೋಡುವ ಬಗೆ ಹೇಗೆ ಎಂದು ತಿಳಿಯುವುದಾದರೆ.

ಯುವತಿಯರ ವಿವಾಹದ ಬಗ್ಗೆ ಜಾತಕ ಭವಿಷ್ಯ ಹೇಳುವಾಗ ಅವರ ಎಡಗೈ ಹಸ್ತದ ರೇಖೆಯನ್ನು ನೋಡಿ ಭವಿಷ್ಯ ನುಡಿಯಬೇಕು, ಇನ್ನು ಯುವಕರಿಗೆ ಅವರ ಮದುವೆಯೋಗ ತಿಳಿಯುವುದಾದರೆ ಬಲಗೈ ಹಸ್ತದ ರೇಖೆಗಳನ್ನು ನೋಡಿ ಭವಿಷ್ಯ ಹೇಳಬೇಕಾಗಿದೆ ಎಂದು ಹಸ್ತ ಸಾಮುದ್ರಿಕ ಶಾಸ್ತ್ರ ತಿಳಿಸುತ್ತದೆ. ಆದರೆ ಕೆಲವರು ಇದನ್ನು ಅಲಕ್ಷ್ಯ ಮಾಡಿ ಗಂಡು ಹೆಣ್ಣಿನ ಜಾತಕ ಫಲಾಫಲಗಳನ್ನು ಒಂದೇ ಹಸ್ತ ರೇಖೆಯಿಂದ ನೋಡುವುದುಂಟು ಆದರೆ ಇದು ಹಸ್ತ ಸಾಮುದ್ರಿಕ ಶಾಸ್ತ್ರದ ನಿಯಮಕ್ಕೆ ವಿರುದ್ದವಾಗಿರುತ್ತದೆ.

ಹಾಗಾದರೆ ಹಸ್ತದಲ್ಲಿರುವ ಯಾವ ಪ್ರಮುಖ ರೇಖೆಗಳು ದಾಂಪತ್ಯ ವೈವಾಹಿಕ ಜೀವನದ ಬಗ್ಗೆ ತಿಳಿಸುತ್ತದೆ ಎಂದು ತಿಳಿಯೋಣ, ನಿಮ್ಮ ಹಸ್ತದ ಹೆಬ್ಬೆರಳಿನಿಂದ ಎಡ ಭಾಗಕ್ಕೆ ಹಾದುಹೋಗಿರುವ ರೇಖೆಯನ್ನು ಗಂಡಿನ ರೇಖೆ ಎಂದು ಕರೆಯುತ್ತಾರೆ. ಹಸ್ತದ ಮಧ್ಯಭಾಗದಿಂದ ಎಡಭಾಗಕ್ಕೆ ಹಾದುಹೋಗಿರುವ ರೇಖೆಯನ್ನು ಹೆಣ್ಣಿನ ರೇಖೆ ಎಂದು ಕರೆಯುತ್ತಾರೆ. ಈ ಎರಡು ರೇಖೆಗಳು ದಾಂಪತ್ಯ ಜೀವನದ ಬಗ್ಗೆ ಅದರ ಮಹತ್ವದ ಬಗ್ಗೆ ತಿಳಿಸುತ್ತದೆ.

ಹಸ್ತದ ಮೇಲ್ಭಾಗದಿಂದ ಕೆಳಕ್ಕೆ ಇಳಿದಿರುವ ರೇಖೆಯು ನಿಮ್ಮ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ತಿಳಿಸುತ್ತದೆ, ಇನ್ನು ಈ ಹಸ್ತದಲ್ಲಿ ಪ್ರಮುಖವಾಗಿ ಸಂರಕ್ಷಕ ರೇಖೆ ಎಂಬ ಮಹತ್ವ ರೇಖೆಯಿದ್ದು ಇದು ನಿಮ್ಮ ಹಸ್ತದ ಹೆಬ್ಬೆರಳಿನ ಕೊನೆಯಲ್ಲಿ ಕೆಳಭಾಗಕ್ಕೆ ಹಾದು ಹೋಗುತ್ತದೆ. ಇದು ನಿಮ್ಮ ಜೀವನ ಹೇಗಿರುತ್ತದೆ ಹೇಗೆ ರಕ್ಷಣಾತ್ಮಕವಾಗಿರುತ್ತದೆ ಎಂಬುದನ್ನು ತಿಳಿಸುತ್ತದೆ.

ಈ ಸಂರಕ್ಷಕ ರೇಖೆಯು ದಪ್ಪದಾಗಿದ್ದು, ಸ್ಪಷ್ಟವಾಗಿ ಗೋಚರಿಸುತ್ತಿದ್ದರೆ ಇದು ನಿಮ್ಮ ಜೀವನ ಸಮೃದ್ಧವಾಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ಈ ರೇಖೆ ಏನಾದರು ತೆಳುವಾಗಿದ್ದು ಅಸ್ಪಷ್ಟವಾಗಿ ತೋರುತ್ತಿದ್ದರೆ ನಿಮ್ಮ ಜೀವನದಲ್ಲಿ ನೀವು ಹಲವು ಭಾಗ್ಯಗಳನ್ನು ಕಳೆದುಕೊಳ್ಳುತ್ತೀರಿ ಎಂಬುದನ್ನು ಸೂಚಿಸುತ್ತದೆ.

ಅವಿವಾಹಿತರ ವ್ಯಕ್ತಿಗಳ ಹಸ್ತದಲ್ಲಿ ಕಿರುಬೆರಳಿನ ಕೆಳಭಾಗದಲ್ಲಿ ಪುಟ್ಟದಾದ ರೇಖೆಗಳು ಕವಲೊಡೆದಿರುತ್ತದೆ, ಈ ರೇಖೆಗಳು ಕೆಲವರಿಗೆ ಒಂದು ಅಥವಾ ಎರಡು ರೇಖೆಗಳು ಇರುತ್ತದೆ. ಒಂದು ರೇಖೆ ಇದ್ದರೆ ಒಂದು ವಿವಾಹವಾಗುತ್ತದೆ ಎಂದು ಅರ್ಥ, ಕೆಲವರಿಗೆ ಎರಡು ರೇಖೆಗಳಿದ್ದರೆ ಮದುವೆಯಾದ ನಂತರ ಕೆಲವೊಂದು ಅನಿವಾರ್ಯ ಕಾರಣಗಳಿಂದಾಗಿ ಮತ್ತೊಂದು ಮದುವೆಯಾಗುವ ಪರಿಸ್ಥಿತಿ ಎದುರಾಗುತ್ತದೆ ಎಂದು ತಿಳಿಯಬಹುದಾಗಿದೆ. ಎರಡು ರೇಖೆ ಇದ್ದರೆ ಇವರು ಪ್ರೀತಿ ಮಾಡಿ ಪ್ರೇಮ ವಿವಾಹ ಆಗಿದ್ದರು ಕೂಡ ಅದನ್ನು ತಿರಸ್ಕರಿಸಿ ಮನೆಯವರ ಒತ್ತಡಕ್ಕೆ ಮಣಿದು ಮತ್ತೊಂದು ಮದುವೆ ಆಗುವ ಪರಿಸ್ಥಿತಿ ಉಂಟಾಗಬಹುದಾಗಿದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ತಿಳಿಸಲಾಗಿದೆ.

%d bloggers like this: